Donald Trump: ಚೀನಾಗೆ ಬುದ್ಧಿ ಕಲಿಸಲು ಹೋಗಿ ನಾನು ಭಾರತ-ರಷ್ಯಾವನ್ನು ಕಳೆದುಕೊಂಡೆ; ಬೇಸರದಿಂದ ಟ್ವೀಟ್ ಮಾಡಿದ ಟ್ರಂಪ್
ತೆರಿಗೆಯನ್ನು ಹೇರಿ ಭಾರತದ ಮೇಲೆ ಸಮರ ಸಾರಿದ್ದ ಟ್ರಂಪ್ ಇದೀಗ ಬೆಪ್ಪಾಗಿದ್ದಾರೆ. ಭಾರತ ಚೀನಾ (India-China, Russia) ಹಾಗೂ ರಷ್ಯಾ ಒಗ್ಗಟ್ಟಾಗಿ ನಿಂತು ಅಮೆರಿಕವನ್ನು ಎದುರಿಸಿದೆ. ಇದೀಗ ಸ್ವತಃ ಟ್ರಂಪ್ ಅವರೇ ತಮ್ಮ ಮೂರ್ಖತನದ ಕುರಿತು ಮಾತನಾಡಿದ್ದಾರೆ.

-

ವಾಷಿಂಗ್ಟನ್: ತೆರಿಗೆಯನ್ನು ಹೇರಿ ಭಾರತದ ಮೇಲೆ ಸಮರ ಸಾರಿದ್ದ ಟ್ರಂಪ್ ಇದೀಗ ಬೆಪ್ಪಾಗಿದ್ದಾರೆ. ಭಾರತ ಚೀನಾ ಹಾಗೂ ರಷ್ಯಾ ಒಗ್ಗಟ್ಟಾಗಿ ನಿಂತು ಅಮೆರಿಕವನ್ನು ಎದುರಿಸಿದೆ. ಇದೀಗ ಸ್ವತಃ ಟ್ರಂಪ್ ಅವರೇ ತಮ್ಮ ಮೂರ್ಖತನದ ಕುರಿತು ಮಾತನಾಡಿದ್ದಾರೆ. ಈ ವಾರ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಟಿ 20 ಸಭೆಯಲ್ಲಿ ಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಕ್ಸಿ (Donald Trump) ಜಿನ್‌ಪಿಂಗ್ ಅವರೊಂದಿಗೆ ಇರುವ ಫೋಟೋವನ್ನು ಟ್ರಂಪ್ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕೆಲ ಸಾಲುಗಳನ್ನೂ ಟ್ರಂಪ್ ಬರೆದಿದ್ದಾರೆ.
ಚೀನಾದ ಮೇಲಿನ ಹಗೆತನಕ್ಕೋಸ್ಕರ ಭಾರತ ಹಾಗೂ ರಷ್ಯಾವನ್ನು ಕಳೆದುಕೊಂಡೆ ಎಂದು ಟ್ರಂಪ್ ಬರೆದಿದ್ದಾರೆ. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ ಎಂದು ಅವರು ಹಾರೈಸಿದ್ದಾರೆ. ಈ ವಾರದ ಆರಂಭದಲ್ಲಿ, ಮೋದಿ ಮತ್ತು ಪುಟಿನ್ ಸೇರಿದಂತೆ ವಿಶ್ವ ನಾಯಕರು ಚೀನಾದ ಟಿಯಾಂಜಿನ್‌ನಲ್ಲಿ SCO ಶೃಂಗಸಭೆಗಾಗಿ ಒಟ್ಟುಗೂಡಿದರು. ಈ ಶೃಂಗಸಭೆಯಲ್ಲಿ ನಾಯಕರು ಅಮೆರಿಕದ ಸುಂಕದ ಕುರಿತು ಮಾತುಕತೆ ನಡೆಸಿದ್ದರು. ಆ ಬಳಿಕ ಟ್ರಂಪ್ ಅವರಿಂದ ಈ ಹೇಳಿಕೆ ಬಂದಿದೆ.
Trust me this is not satire😭😂
— Pooja Sangwan Hooda 🇮🇳 (@ThePerilousGirl) September 5, 2025
Trump actually posted this like a ex girlfriend who is wishing her boyfriend happy future together.
This show how deeply it hurts Trump. That he openly said "we've lost India and Russia to China" pic.twitter.com/vRtJCCi0nO
ನಾವು ಭಾರತ ಮತ್ತು ರಷ್ಯಾವನ್ನು ಅತ್ಯಂತ ಕರಾಳ ಚೀನಾಕ್ಕೆ ಕಳೆದುಕೊಂಡಂತೆ ಕಾಣುತ್ತಿದೆ. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ! ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್," ಎಂದು ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಅದರೊಂದಿಗೆ ಟಿಯಾಂಜಿನ್ ಸಭೆಯಲ್ಲಿ ಪುಟಿನ್ ಮತ್ತು ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿ ಕಾಣಿಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Modi-Putin: ತೈಲ ಒಪ್ಪಂದದ ಮಾತುಕತೆ; ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಕಳೆದ ತಿಂಗಳು ಟ್ರಂಪ್ ಭಾರತದ ಮೇಲೆ ವಿಧಿಸಿದ ಶೇ.50 ರಷ್ಟು ಸುಂಕದ ನಂತರ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳು ಹಳಸಿವೆ. ರಷ್ಯಾ ತೈಲವನ್ನು ಭಾರತ ನಿರಂತರವಾಗಿ ಖರೀದಿಸುವುದರ ಮೇಲೆ ಅಮೆರಿಕ ಶೇ.25 ರಷ್ಟು ಮೂಲ ಸುಂಕ ಮತ್ತು ಹೆಚ್ಚುವರಿಯಾಗಿ ಶೇ.25 ರಷ್ಟು ದಂಡವನ್ನು ವಿಧಿಸಿದೆ. ಟ್ರಂಪ್ ಚೀನಾ ಮೇಲೆಯೂ ಅಧಿಕ ಸುಂಕವನ್ನು ಹೇರಿದ್ದಾರೆ.