Tiptur News: ತಿಪಟೂರಿನಲ್ಲಿ ಬ್ಯಾಟರಿಗಳು ಸ್ಫೋಟ; ಹೊತ್ತಿ ಉರಿದ ವಾಹನಗಳು
Tiptur News: ಸರಕು ಸಾಗಣೆ ವಾಹನವೊಂದರಲ್ಲಿ ಸಾಗಿಸುತ್ತಿದ್ದ ಬ್ಯಾಟರಿಗಳು ಸ್ಫೋಟಗೊಂಡು ದ್ವಿಚಕ್ರ ವಾಹನ ಸೇರಿದಂತೆ ಬ್ಯಾಟರಿಗಳನ್ನು ಸಾಗಿಸುತ್ತಿದ್ದ ಸರಕು ಸಾಗಣೆ ವಾಹನವೊಂದು ಹೊತ್ತಿ ಉರಿದ ಘಟನೆ ಹುಳಿಯಾರು ರಸ್ತೆಯ ಗೆದ್ದಲಹಳ್ಳಿಯ ಗೊಲ್ಲರಹಟ್ಟಿ ಗೇಟ್ ಬಳಿ ಜರುಗಿದೆ.
-
ತಿಪಟೂರು, ಸೆ.09: ಹುಳಿಯಾರು ರಸ್ತೆಯ ಗೆದ್ದಲಹಳ್ಳಿಯ ಗೊಲ್ಲರಹಟ್ಟಿ ಗೇಟ್ ಬಳಿ (Tiptur News) ಬ್ಯಾಟರಿಗಳು ಸ್ಫೋಟಗೊಂಡು, ದ್ವಿಚಕ್ರ ವಾಹನ ಸೇರಿದಂತೆ ಬ್ಯಾಟರಿಗಳನ್ನು ಸಾಗಿಸುತ್ತಿದ್ದ ಸರಕು ಸಾಗಣೆ ವಾಹನವೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಪಟ್ಟಣದ ಗೊರಗೊಂಡನಹಳ್ಳಿಯಿಂದ ಅಂಗಡಿಯನ್ನು ಖಾಲಿ ಮಾಡಿ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರಿಗೆ ಸಾಗಿಸುತ್ತಿದ್ದ ದಾರಿ ಮಧ್ಯೆ ಈ ಘಟನೆ ಸಂಭವಿಸಿದೆ.

ತಿಪಟೂರು ಪಟ್ಟಣದ ಗೊರಗೊಂಡನಹಳ್ಳಿಯಿಂದ ಅಂಗಡಿಯನ್ನು ಖಾಲಿ ಮಾಡಿ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರಿಗೆ ಸಾಗಿಸುವ ದಾರಿ ಮಧ್ಯೆ ಅವಘಡ ನಡೆದಿದೆ. ಮಹೀಂದ್ರಾ ಸರಕು ಸಾಗಣೆ ವಾಹನದಲ್ಲಿ ತುಂಬಿದ್ದ ಬ್ಯಾಟರಿಗಳು ಸ್ಫೋಟಗೊಂಡು ಜತೆಯಲಿದ್ದ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಹೊತ್ತಿಕೊಂಡಿದೆ. ಚಾಲಕ ಮನು ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿ ಕೂಡಲೇ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನವನ್ನು ಪಕ್ಕದಲ್ಲಿದ್ದ ಹೊಲಕ್ಕೆ ತಂದು ನಿಲ್ಲಿಸಿದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ವಿಷಯ ತಿಳಿದು ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಯು ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಫೆವಿಕ್ವಿಕ್ ಬಳಸಿ ಎಟಿಎಂನಿಂದ ಹಣ ದೋಚಿದ ಖದೀಮರು; ಕೊನೆಗೆ ಸಿನಿಮೀಯ ಶೈಲಿಯಲ್ಲಿ ಅಂದರ್: ರೋಚಕ ಕಾರ್ಯಾಚರಣೆ ಹೇಗಿತ್ತು?
ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ; ಒಬ್ಬ ಆರೋಪಿ ಅರೆಸ್ಟ್
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳನ್ನು (star tortoises) ಡಿಆರ್‌ಐ ಅಧಿಕಾರಿಗಳು ನಗರದ ಗಾಂಧಿನಗರದಲ್ಲಿ ವಶಕ್ಕೆ ಪಡೆದಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಟ್ರಾಲಿ ಬ್ಯಾಗ್‌ನಲ್ಲಿ ನಕ್ಷತ್ರ ಆಮೆಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ.
ಹತ್ತು ಸಾವಿರಕ್ಕೆ ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಯತ್ನಿಸಿದ್ದು, ಪ್ರಕರಣ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಓರ್ವ ವ್ಯಕ್ತಿ ಕಲಾಸಿಪಾಳ್ಯದಿಂದ ನಕ್ಷತ್ರ ಆಮೆಗಳನ್ನು ತಂದುಕೊಟ್ಟಿದ್ದ. ಘಟನೆ ಸಂಬಂಧ ಪ್ರಕರಣ ದಾಖಲಿಸಿದ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ನಕ್ಷತ್ರ ಆಮೆಗಳನ್ನು ಇಟ್ಟುಕೊಂಡರೆ ಅದೃಷ್ಟ ಬರುತ್ತದೆ ಎಂದು ಆರೋಪಿಗಳು ನಂಬಿಸುತ್ತಿದ್ದರು. ಮಾರಾಟಕ್ಕೆ ಯತ್ನಿಸಿದ ವೇಳೆ ಆಮೆಗಳನ್ನು ಜಪ್ತಿ ಮಾಡಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.