Physical Assault: ಪ್ರೇಮಿಗಳ ವಿಡಿಯೊ ಚಿತ್ರೀಕರಿಸಿ ಹಣಕ್ಕೆ ಬೇಡಿಕೆ; ಪಾರ್ಕ್‌ನಲ್ಲಿ ಅಪ್ರಾಪ್ತ ಪ್ರೇಯಸಿಯನ್ನು ಬಿಟ್ಟು ಪರಾರಿಯಾದ ಯುವಕ
ಉತ್ತರ ಪ್ರದೇಶದ ಕಾನ್ಪುರದ ಮಹಾರಾಜ್‌ಪುರ ಪ್ರದೇಶದಲ್ಲಿ ಬಾಲಕಿಯೊಬ್ಬಳು ಪ್ರಿಯಕರನ ಜತೆ ಪಾರ್ಕ್‌ಗೆ ಹೋದಾಗ ಕಿರುಕುಳಕ್ಕೊಳಗಾಗಿ, ಇಬ್ಬರು ಅಪರಿಚಿತರಿಂದ ಬ್ಲಾಕ್‌ಮೇಲ್‌ಗೆ ಒಳಗಾದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯಲ್ಲಿ ಒಬ್ಬ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಿಯಕರನಿಗಾಗಿ ಶೋಧ ನಡೆಯುತ್ತಿದೆ.

ಸಾಂದರ್ಭಿಕ ಚಿತ್ರ.

ಲಖನೌ: ಉತ್ತರ ಪ್ರದೇಶದ (Uttar Pradesh) ಕಾನ್ಪುರದ (Kanpur) ಮಹಾರಾಜ್‌ಪುರ ಪ್ರದೇಶದಲ್ಲಿ ಬಾಲಕಿಯೊಬ್ಬಳು ಪ್ರಿಯಕರ (Lover) ಜತೆ ಪಾರ್ಕ್‌ಗೆ ಹೋದಾಗ ಕಿರುಕುಳಕ್ಕೊಳಗಾಗಿ (Harassment) ಇಬ್ಬರು ಅಪರಿಚಿತರಿಂದ ಬ್ಲಾಕ್‌ಮೇಲ್‌ಗೆ ಒಳಗಾದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯಲ್ಲಿ ಒಬ್ಬ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಿಯಕರನಿಗಾಗಿ ಶೋಧ ನಡೆಯುತ್ತಿದೆ.
ಮಹಾರಾಜ್‌ಪುರದ ಸ್ಥಳೀಯ ಬಾಲಕಿಯೊಬ್ಬಳು ಫತೇಹ್‌ಪುರ ನಿವಾಸಿ 19 ವರ್ಷದ ಮಹೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಜುಲೈ 26ರಂದು ಮಹೇಶ್ ಆಕೆಯನ್ನು ಭೇಟಿಯಾಗಲು ಬಂದಿದ್ದಾಗ, ಇಬ್ಬರೂ ಸರ್ಸೌಲ್ ಬಜಾರ್ ಪ್ರದೇಶದಲ್ಲಿ ವಿಹಾರಕ್ಕೆ ತೆರಳಿದ್ದರು. ಶಾಲೆಯ ಗೋಡೆಯ ಬಳಿ ಕುಳಿತಿದ್ದಾಗ ದಿವ್ಯಾಂಶು (19) ಮತ್ತು ಆತನ 15 ವರ್ಷದ ಸ್ನೇಹಿತ ಇಬ್ಬರು ಆಗಮಿಸಿ, ಜೋಡಿಯ ವಿಡಿಯೋ ಚಿತ್ರೀಕರಿಸಿದರು. ವಿಡಿಯೊವನ್ನು ಲೀಕ್ ಮಾಡುವ ಬೆದರಿಕೆಯೊಡ್ಡಿ 7,000 ರೂ. ಬೇಡಿಕೆ ಇಟ್ಟರು.
ಮಹೇಶ್ ಆನ್‌ಲೈನ್‌ನಲ್ಲಿ ಹಣ ಕಳುಹಿಸುವುದಾಗಿ ತಿಳಿಸಿದರೂ, ಕ್ಯಾಷ್ ನೀಡುವಂತೆ ಒತ್ತಾಯಿಸಿದ ಆರೋಪಿಗಳು ಬಾಲಕಿಗೆ ಕಿರುಕುಳ ನೀಡಿದರು. ಭಯಗೊಂಡ ಮಹೇಶ್ ಸ್ಥಳದಿಂದ ಪರಾರಿಯಾದ. ಒಂಟಿಯಾದ ಬಾಲಕಿಯಿಂದ ಆರೋಪಿಗಳು 1,000 ರೂ. ಕಿತ್ತುಕೊಂಡು, ಆಕೆಯ ಮೂಗುತಿಯನ್ನು ಎಳೆದು ರಕ್ತಸ್ರಾವವಾಗುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನು ಓದಿ: Physical Assault: ತನ್ನನ್ನೇ ದಿಟ್ಟಿಸಿ ನೋಡಿ ಹಸ್ತಮೈಥುನ ಮಾಡಿಕೊಂಡ: ವ್ಯಕ್ತಿಯ ಅಸಭ್ಯ ವರ್ತನೆಯ ಬಗ್ಗೆ ಮಾಡೆಲ್ ಪೋಸ್ಟ್
ಬಾಲಕಿ ಮಹಾರಾಜ್‌ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಹೇಳಿಕೆಯನ್ನು ದಾಖಲಿಸಲಾಗುವುದು. ದಿವ್ಯಾಂಶುವನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, 15 ವರ್ಷದ ಆರೋಪಿಯನ್ನು ಬಾಲಾಪರಾಧಿಗಳ ಗೃಹಕ್ಕೆ ಕಳುಹಿಸಲಾಗಿದೆ. ಪರಾರಿಯಾಗಿರುವ ಮಹೇಶ್‌ಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಚಕೇರಿಯ ಸಹಾಯಕ ಪೊಲೀಸ್ ಆಯುಕ್ತ ಅಭಿಷೇಕ್ ಪಾಂಡೆ ತಿಳಿಸಿದ್ದಾರೆ. ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಎತ್ತಿದೆ.