ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶವೇ ತಲೆ ತಗ್ಗಿಸುವ ಸುದ್ದಿ: ಪುಣೆಯಲ್ಲಿ ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ ಕರ್ನಾಟಕದ ವ್ಯಕ್ತಿ

ಮಹಾರಾಷ್ಟ್ರದ ಪುಣೆಯಲ್ಲಿ ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವ ಘಟನೆ ನಡೆದಿದೆ. ಈ ಸುದ್ದಿ ಹೊರಬರುತ್ತಿದ್ದಂತೆ ಜನರೆಲ್ಲ ಛೀ...ಥೂ...ಎಂದು ಉಗಿಯತೊಡಗಿದ್ದಾರೆ. ಕರ್ನಾಟಕದ ವ್ಯಕ್ತಿಯೊಬ್ಬ ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸದ್ಯ ಈತ ತಲೆಮರೆಸಿಕೊಂಡಿದ್ದು, ದೂರು ದಾಖಲಿಸಿರುವ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ!

Ramesh B Ramesh B Aug 7, 2025 9:47 PM

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವ ಘಟನೆ ನಡೆದಿದೆ. ಈ ಸುದ್ದಿ ಹೊರಬರುತ್ತಿದ್ದಂತೆ ಜನರೆಲ್ಲ ಛೀ...ಥೂ...ಎಂದು ಉಗಿಯತೊಡಗಿದ್ದಾರೆ. ಇಂತಹ ಕಾಮುಕರೂ ಇದ್ದಾರಾ ಎಂದು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡತೊಡಗಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ ಕರ್ನಾಟಕದ ವ್ಯಕ್ತಿಯೊಬ್ಬ ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸದ್ಯ ಈತ ತಲೆಮರೆಸಿಕೊಂಡಿದ್ದು, ದೂರು ದಾಖಲಿಸಿರುವ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ (Viral Video) ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಕೃತ್ಯ ಎಸಗಿದವನನ್ನು 35 ವರ್ಷದ ಹೊನ್ನಪ್ಪ ಹೊಸಮನಿ ಎಂದು ಗುರುತಿಸಲಾಗಿದೆ. ಈತ ಪುಣೆಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಮಾಡಬಾರದ ಕೆಲಸ ಮಾಡಿ ಈಗ ತಲೆಮರೆಸಿಕೊಂಡಿದ್ದಾನೆ.

ವೈರಲ್‌ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Viral Video: ಪೊಲೀಸರ ಏಟಿಗೆ ಮೂರ್ಛೆ ತಪ್ಪಿದ ಪತ್ರಕರ್ತರು! ಆಘಾತಕಾರಿ ವಿಡಿಯೋ ವೈರಲ್

ಪ್ರಾಣಿ ಪ್ರಿಯರು ಕಿಡಿಕಿಡಿ

ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಾಣಿ ಪ್ರಿಯರು ಕಿಡಿಕಾರಿದ್ದು ಅಧಿಕೃತವಾಗಿ ಪುಣೆಯ ವಿಶ್ರಾಂತವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೊನ್ನಪ್ಪ ಹೊಸಮನಿ ಕೆಲವು ದಿನಗಳಿಂದ ಬೀದಿ ನಾಯಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ʼʼಪುಣೆಯ ಟಿಂಗ್ರೆ ನಗರದಲ್ಲಿ ಬೀದಿ ನಾಯಿಗಳ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ ಕರ್ನಾಟಕದ ಕಾರ್ಮಿಕ ಹೊನಪ್ಪ ಹೊಸಮನಿ ಪ್ರಸ್ತುತ ನಾಪತ್ತೆಯಾಗಿದ್ದಾನೆʼʼ ಎಂದು ವಿಮಾನ ನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಗೋವಿಂದ್ ಜಾಧವ್ ತಿಳಿಸಿದ್ದಾರೆ. ಆತನ ಪತ್ತೆಗೆ ಬಲೆ ಬೀಸಿದ್ದು, ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

ಮಲ್ಲಪ್ಪ ವಿರುದ್ಧ ದೂರು ನೀಡಿದ ಸರ್ಕಾರೇತರ ಸಂಸ್ಥೆ ಅನಿಮಲ್‌ ಹೆವೆನ್‌ನ ಕಾರ್ಯಕರ್ತೆ ರಾಗಿಣಿ ಮೋರೆ ಈ ಬಗ್ಗೆ ಮಾಹಿತಿ ನೀಡಿ, ʼʼಮಲ್ಲಪ್ಪ ಹೆಣ್ಣು ಬೀದಿ ನಾಯಿಯನ್ನು ಎತ್ತಿಕೊಂಡು ಶೆಡ್‌ನೊಳಗೆ ಹೋಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳೀಯರು ಇದನ್ನು ಗಮನಿಸಿ ನಮ್ಮ ಗಮನಕ್ಕೆ ತಂದಿದ್ದಾರೆʼʼ ಎಂದು ತಿಳಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಶೆಡ್‌ನೊಳಗಿನಿಂದ ಮಲ್ಲಪ್ಪ ಫೋನ್‌ನಲ್ಲಿ ಮಾತನಾಡುತ್ತ ರಸ್ತೆ ಬದಿಗೆ ಆಗಮಿಸುವುದನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಬಳಿಕ ಆತ ರಸ್ತೆ ಬದಿ ನಿಂತಿದ್ದ ನಾಯಿ ಬಳಿಗೆ ತೆರಳುತ್ತಾನೆ. ಮೊಬೈಲ್‌ ನೋಡುತ್ತ ಅದರ ಬೆನ್ನು, ಮೈ ಸವರುತ್ತಾನೆ. ಅದು ತಪ್ಪಿಸಿಕೊಂಡು ಹೋಗಲು ಮುಂದಾದಾಗ ಅದನ್ನು ಎತ್ತಿಕೊಂಡು ತನ್ನ ಶೆಡ್‌ನೊಳಗೆ ಹೋಗಿ ಬಾಗಿಲು ಹಾಕಿ ಅದಕ್ಕೆ ಕಿರುಕುಳ ನೀಡುತ್ತಾನೆ. ಸ್ವಲ್ಪ ಹೊತ್ತಿನ ಬಳಿಕ ಆಗ ಬಾಗಿಲು ತೆರೆದಾಗ ನಾಯಿ ಓಡುತ್ತ ಈಚೆ ಬರುತ್ತದೆ. ಈತ ಹಿಂದೆಯೂ ನಾಯಿಯೊಂದಿಗೆ ಕ್ರೂರವಾಗಿ ನಡೆದುಕೊಂಡಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ

ಸದ್ಯ ಈ ಘಟನೆ ಭಾರಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಮಾನವೀಯತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಆತನ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಬೀದಿನಾಯಿಯನ್ನೂ ಕಾಮುಕರು ಬಿಡುತ್ತಿಲ್ಲವಲ್ಲ ಎಂದು ಹಲವರು ಆಘಾತ ವ್ಯಕ್ತಪಡಿಸಿದ್ದಾರೆ.