Delhi Election 2025: ʼಹ್ಯಾಟ್ರಿಕ್ʼ ಗೆಲುವಿನ ಕನಸು ಕಾಣುತ್ತಿದ್ದ ಅರವಿಂದ್ ಕೇಜ್ರಿವಾಲ್‌ಗೆ ಸೋಲಿನ ರುಚಿ?
ಬಹು ನಿರೀಕ್ಷಿತ ದೆಹಲಿ ಚುನಾವಣೆಯ(Delhi Election 2025) ಮತ ಎಣಿಕೆ ಪ್ರಾರಂಭವಾಗಿದ್ದು,ಎರಡು ಸುತ್ತಿನ ಎಣಿಕೆಯಲ್ಲೂ ಆಮ್ ಆದ್ಮಿ(AAP) ಭಾರೀ ಹಿನ್ನೆಡೆಯನ್ನು ಸಾಧಿಸಿದೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Aravind Kejriwal) ಕೂಡ ಮೊದಲ ಸುತ್ತಿನ ಮತ ಎಣಿಕೆಯಿಂದಲೂ ಭಾರೀ ಹಿನ್ನಡೆಯಲ್ಲಿದ್ದಾರೆ.

Delhi Election 2025

ನವದೆಹಲಿ: ಬಹು ನಿರೀಕ್ಷಿತ ದೆಹಲಿ ಚುನಾವಣೆಯ(Delhi Election 2025) ಮತ ಎಣಿಕೆ ಪ್ರಾರಂಭವಾಗಿದ್ದು,ಎರಡು ಸುತ್ತಿನ ಎಣಿಕೆಯಲ್ಲೂ ಆಮ್ ಆದ್ಮಿ(AAP) ಭಾರೀ ಹಿನ್ನಡೆಯನ್ನು ಸಾಧಿಸಿದೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Aravind Kejriwal) ಕೂಡ ಮೊದಲ ಸುತ್ತಿನ ಮತ ಎಣಿಕೆಯಿಂದಲೂ ಭಾರೀ ಹಿನ್ನಡೆಯಲ್ಲಿದ್ದಾರೆ. ಹ್ಯಾಟ್ರಿಕ್ ಗೆಲುವು ಸಾಧಿಸುವ ಮತ್ತು ಮುಖ್ಯಮಂತ್ರಿ ಗದ್ದುಗೆ ಏರುವ ಕನಸು ಕಾಣುತ್ತಿದ್ದ ಕೇಜ್ರಿವಾಲ್‌ಗೆ ಮುಖಭಂಗವಾಗುತ್ತಿದೆ. ನವದೆಹಲಿ ಕ್ಷೇತ್ರದಿಂದ ಮೂರು ಬಾರಿ ಗೆದ್ದು ವಿಜಯದ ನಗೆ ಬೀರಿದ್ದ ಕೇಜ್ರಿವಾಲ್ ಎರಡು ಸಾವಿರ ಮತಗಳಿಂದ ಹಿಂದಿದ್ದಾರೆ. 42 ಕ್ಷೇತ್ರಗಳಲ್ಲಿ ಮುನ್ನೆಡೆ ಸಾಧಿಸಿರುವ ಬಿಜೆಪಿ ಸ್ಪಷ್ಟ ಬಹುಮತ ಪಡೆಯವ ಸಾಧ್ಯತೆಯಿದೆ. ಹತ್ತು ಹನ್ನೊಂದು ಗಂಟೆಯೊಳಗೆ ಸಂಪೂರ್ಣ ಚಿತ್ರಣ ಬದಲಾಗಬಹುದು.
ಸದ್ಯದ ಮತ ಎಣಿಕೆಯ ಪ್ರಕಾರ 44 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನೆಡೆ ಸಾಧಿಸಿದ್ದು, ಸ್ಪಷ್ಟ ಬಹುಮತದತ್ತ ಸಾಗುತ್ತಿದೆ. ಎಎಪಿ 25, ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ದೆಹಲಿಯ ಹಾಲಿ ಮುಖ್ಯಮಂತ್ರಿ ಅತಿಶಿ ಮಾರ್ಲೇನಾ ತಮ್ಮ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದು, ಅವರ ವಿರುದ್ಧ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ರಮೇಶ್ ಬಿದುರಿ ಮುನ್ನಡೆಯಲ್ಲಿದ್ದಾರೆ.
Enga mams aravind kejriwal thoka poratha nee medhu vadai saptu kondaditu irukiya.. pic.twitter.com/pFrkVmKaDo
— THE GOAT (ஆட்டுக்காரன்) (@rvskannan94) February 8, 2025
27 ವರ್ಷಗಳ ನಂತರ ಬಿಜೆಪಿ ದೆಹಲಿ ಗದ್ದುಗೆ ಏರುವ ಸಾಧ್ಯೆತೆಯಿದ್ದು, ಆಮ್ ಆದ್ಮಿ ಮತ್ತು ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸುತ್ತಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಕೂಡ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಹೇಳಿವೆ.
ಈ ಸುದ್ದಿಯನ್ನೂ ಓದಿ:Delhi Election 2025 : ಚುನಾವಣಾ ಫಲಿತಾಂಶಕ್ಕೂ ಮುನ್ನ ದೆಹಲಿಯ ಗಮನ ಸೆಳೆದ 'ಮಿನಿ ಕೇಜ್ರಿವಾಲ್!
ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಬಿಗಿ ಭದ್ರತೆಯ ನಡುವೆ 19 ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದೆ.