Festival Fashion 2025: ಆರೆಂಜ್ ಡ್ರೆಸ್ನಲ್ಲಿ ಶ್ರಾವಣ ಮಾಸಕ್ಕೆ ಶುಭ ಕೋರಿದ ಚೈತ್ರಾ ವಾಸುದೇವನ್
Festival Fashion 2025: ಫೆಸ್ಟೀವ್ ಸೀಸನ್ ಆರಂಭವಾಗಿರುವ ಹಿನ್ನೆಲೆಯಲ್ಲಿ ನಿರೂಪಕಿ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಅತ್ಯಾಕರ್ಷಕ ಹೈ ಸ್ಲಿಟ್ ಆರೆಂಜ್ ಡ್ರೆಸ್ನಲ್ಲಿ ಕಾಣಿಸಿಕೊಂಡು ಶ್ರಾವಣ ಮಾಸಕ್ಕೆ ಶುಭಾಶಯ ಕೋರಿದ್ದಾರೆ. ಈ ಸೀಸನ್ ಸ್ಟೈಲ್ ಸ್ಟೇಟ್ಮೆಂಟ್ ಬಗ್ಗೆ ಅವರು ಹೇಳಿರುವುದೇನು? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಚೈತ್ರಾ ವಾಸುದೇವನ್, ನಿರೂಪಕಿ, ಬಿಗ್ಬಾಸ್ ಮಾಜಿ ಸ್ಪರ್ಧಿ., ಚಿತ್ರಕೃಪೆ: ಗೀತಾಂಜಲಿ ಫೋಟೋಗ್ರಾಫಿ.


ವೈಬ್ರೆಂಟ್ ಆರೆಂಜ್ ಡ್ರೆಸ್ನಲ್ಲಿ ನಿರೂಪಕಿ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಕಾಣಿಸಿಕೊಂಡಿದ್ದಾರೆ.

ಚೈತ್ರಾ ಶ್ರಾವಣ ಸಂಭ್ರಮ
ಪ್ರತಿಬಾರಿಯಂತೆ ಈ ಬಾರಿಯು ಅವರು ಫೆಸ್ಟೀವ್ ಸೀಸನ್ ಸಂಭ್ರಮವನ್ನು ಅತ್ಯಾಕರ್ಷಕ ಔಟ್ಫಿಟ್ ಧರಿಸಿ ಕಾಣಿಸಿಕೊಳ್ಳುವ ಮೂಲಕ ಶ್ರಾವಣ ಸಂಭ್ರಮಾಚರಣೆಯನ್ನು ಮಾಡುತ್ತಿದ್ದಾರೆ.

ವೈಬ್ರೆಂಟ್ ಕೇಸರಿ ಡ್ರೆಸ್
ಅಂದಹಾಗೆ, ಚೈತ್ರಾ ಮೊದಲಿನಿಂದಲೂ ಸಖತ್ ಫ್ಯಾಷನೆಬಲ್ ಹುಡುಗಿ. ಪ್ರತಿ ಇವೆಂಟ್ ಮಾತ್ರವಲ್ಲ, ಎಲ್ಲಾ ಹಬ್ಬಗಳಲ್ಲೂ ಎಥ್ನಿಕ್ವೇರ್ಗಳಲ್ಲಿ ಕಾಣಿಸಿಕೊಂಡು ತಮ್ಮ ಫಾಲೋವರ್ಗಳನ್ನು ಸೆಳೆಯುತ್ತಿರುತ್ತಾರೆ. ಇನ್ನು, ಕೆಲವೊಮ್ಮೆ ಎಕ್ಸ್ಕ್ಲ್ಯೂಸಿವ್ ಡಿಸೈನರ್ವೇರ್ ಧರಿಸಿ ಮಿಂಚುತ್ತಿರುತ್ತಾರೆ. ಈ ಬಾರಿ ಶ್ರಾವಣ ಸಂಭ್ರಮಕ್ಕೆ ಎಲಿಗೆಂಟ್ ಲುಕ್ ನೀಡುವಂತಹ ಸಾದಾ ಮಾನೋಕ್ರೋಮ್ ಶೇಡ್ನ ಹೈ ಸ್ಲಿಟ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.

ಫೆಸ್ಟೀವ್ ಸೀಸನ್ ಸ್ಟೈಲ್ ಸ್ಟೇಟ್ಮೆಂಟ್
ವಿಶ್ವವಾಣಿ ನ್ಯೂಸ್ನೊಂದಿಗೆ ತಮ್ಮ ಫೆಸ್ಟೀವ್ ಸೀಸನ್ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್ಮೆಂಟ್ ಕುರಿತಂತೆ ಹಂಚಿಕೊಂಡಿರುವ ಚೈತ್ರಾ, ತಾವು ಸದಾ ವಿಭಿನ್ನ ಹಾಗೂ ಅತ್ಯಾಕರ್ಷಕ ಎಥ್ನಿಕ್ವೇರ್ ಹಾಗೂ ಡಿಸೈನ್ನ ಡಿಸೈನರ್ವೇರ್ ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ, ತಾವು ಇದೀಗ ಧರಿಸಿರುವ ಈ ಆರೆಂಜ್ ವರ್ಣದ ಡಿಸೈನರ್ವೇರ್ ವೇಸ್ಟ್ಲೈನ್ ಸೈಡ್ನಲ್ಲಿ ಹೈ ಸ್ಲಿಟ್ ಹೊಂದಿದೆ. ಅಲ್ಲದೇ, ಪ್ಯಾಂಟ್ ಕೊಂಚ ನ್ಯಾರೋ ಇದ್ದು ಶಾರ್ಟ್ ಲೆಂಥ್ ಹೊಂದಿದೆ. ಸೇಮ್ ವರ್ಣದ ದುಪಟ್ಟಾ ಮ್ಯಾಚ್ ಮಾಡಿರುವುದು ಮತ್ತಷ್ಟು ಸ್ಲಿಮ್ ಲುಕ್ನಲ್ಲಿ ಕಾಣುವಂತೆ ಮಾಡಿದೆ ಎಂದಿದ್ದಾರೆ.

ಚೈತ್ರಾ ಮೇಕೋವರ್
ಇನ್ನು ಈ ಉಡುಪಿನೊಂದಿಗೆ ಧರಿಸಿರುವ ವಾಚ್ ಬ್ರೇಸ್ಲೆಟ್ನಂತೆ ಕಾಣಿಸುತ್ತಿದ್ದು, ಜತೆಗೆ ಮ್ಯಾಚಿಂಗ್ ಇಯರಿಂಗ್ಸ್ ಹಾಗೂ ನೆಕ್ಲೇಸ್ ಡೀಸೆಂಟ್ ಲುಕ್ ಕಲ್ಪಿಸಿದೆ. ಇನ್ನು, ನ್ಯೂಡ್ ಲಿಪ್ಗ್ಲೋಸ್ ಹಾಗೂ ಸಿಂಪಲ್ ಮೇಕಪ್ ಈ ಲುಕ್ಗೆ ಸಾಥ್ ನೀಡಿದೆ. ಒಟ್ಟಿನಲ್ಲಿ, ಈ ಹಬ್ಬದ ಲುಕ್ಗೆ ಆರೆಂಜ್ ವರ್ಣ ಮತ್ತಷ್ಟು ಉತ್ಸಾಹ ತುಂಬಿದೆ ಎಂದು ಚೈತ್ರಾ ಹೇಳಿದ್ದಾರೆ.