Miss Universe India Interview: ಮಿಸ್ ಯೂನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ ಫ್ಯಾಷನ್ ಟಾಕ್
Miss Universe India Manika Vishwakarma: ಮಿಸ್ ಯೂನಿವರ್ಸ್ ಇಂಡಿಯಾ 2025ರ ಮಣಿಕಾ ವಿಶ್ವಕರ್ಮ, ಕರ್ನಾಟಕದ ರಿಜಿನಲ್ ಬ್ಯೂಟಿ ಪೇಜೆಂಟ್‌ನ ಜ್ಯೂರಿ ಪ್ಯಾನೆಲ್‌ನಲ್ಲಿ ಪಾಲ್ಗೊಳ್ಳಲು ಉದ್ಯಾನನಗರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಶ್ವವಾಣಿ ನ್ಯೂಸ್‌ಗೆ ವಿಶೇಷ ಸಂದರ್ಶನ ನೀಡಿದರು.
ಚಿತ್ರಗಳು: ಮಣಿಕಾ ವಿಶ್ವಕರ್ಮ, ಮಿಸ್ ಯೂನಿವರ್ಸ್ ಇಂಡಿಯಾ 2025 -
ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ, ಫ್ಯಾಷನ್ ಪತ್ರಕರ್ತೆ
ಮಿಸ್ ಯೂನಿವರ್ಸ್ ಇಂಡಿಯಾ 2025 ಮಣಿಕಾ ವಿಶ್ವಕರ್ಮ (Manika Viskarma) ಕರ್ನಾಟಕದ ರಿಜಿನಲ್ ವ್ಯಾಪ್ತಿಯ ಬ್ಯೂಟಿ ಪೇಜೆಂಟ್‌ನ ಜ್ಯೂರಿ ಪ್ಯಾನೆಲ್‌ನಲ್ಲಿ ಪಾಲ್ಗೊಳ್ಳಲು ಉದ್ಯಾನನಗರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಶ್ವವಾಣಿ ನ್ಯೂಸ್‌ನೊಂದಿಗೆ ಅವರು ಸಂದರ್ಶನ (Miss Universe India Interview) ನೀಡಿದರು. ಈ ಫ್ಯಾಷನ್ ಸಂದರ್ಶನದ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.
ವಿಶ್ವವಾಣಿ ನ್ಯೂಸ್: ಮೊದಲಿಗೆ ಮಿಸ್ ಯೂನಿವರ್ಸ್ ಕರ್ನಾಟಕ ಬ್ಯೂಟಿ ಪೇಜೆಂಟ್ ಬಗ್ಗೆ ನೀವು ಹೇಳುವುದೇನು?
ಮಣಿಕಾ ವಿಶ್ವಕರ್ಮ: ರಿಜಿನಲ್ ಪೇಜೆಂಟ್ ಡೈರೆಕ್ಟರ್ ನಂದಿನಿ ನಾಗರಾಜ್ ನೇತೃತ್ವದಲ್ಲಿ ನಡೆದ ಈ ಬ್ಯೂಟಿ ಪೇಜೆಂಟ್ ಅತ್ಯಾಕರ್ಷಕ ವೇದಿಕೆ ಹೊಂದಿತ್ತು. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪೇಜೆಂಟ್‌ಗಳಂತಿತ್ತು.
ವಿಶ್ವವಾಣಿ ನ್ಯೂಸ್: ಬೆಂಗಳೂರು ಜನರ ಫ್ಯಾಷನ್ ನೋಡಿದ ನಿಮಗೆ ಅನಿಸಿದ್ದೇನು?
ಮಣಿಕಾ ವಿಶ್ವಕರ್ಮ: ಇಲ್ಲಿನ ಜನರು ಟ್ರೆಡಿಷನಲ್ ಆಗಿರುವುದರೊಂದಿಗೆ ಫ್ಯಾಷನೆಬಲ್ ಆಗಿಯೂ ಇದ್ದಾರೆ.
ವಿಶ್ವವಾಣಿ ನ್ಯೂಸ್: ನೀವು ದಕ್ಷಿಣ ಭಾರತದ ಟ್ರೆಡಿಷನಲ್ ಔಟ್‌ಫಿಟ್ ಲಂಗ-ದಾವಣಿಯಲ್ಲಿ ಅಂದವಾಗಿ ಕಾಣಿಸಿಕೊಂಡಿದ್ದೀರಾ? ಇಷ್ಟವಾಗಿದೆಯಾ?
ಮಣಿಕಾ ವಿಶ್ವಕರ್ಮ: ಖಂಡಿತಾ, ಸದಾ ಗೌನ್‌ಗಳಲ್ಲಿ ಗ್ಲಾಮರಸ್ ಉಡುಗೆಗಳಲ್ಲಿ ಕಾಣಿಸಿಕೊಂಡಿದ್ದ ನನಗೆ ಈ ದಕ್ಷಿಣ ಭಾರತದ ಉಡುಗೆ ತುಂಬಾ ಪ್ರಿಯವಾಗಿದೆ.
ವಿಶ್ವವಾಣಿ ನ್ಯೂಸ್: ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಏನು?
ಮಣಿಕಾ ವಿಶ್ವಕರ್ಮ: ಪೇಜೆಂಟ್ ಹಾಗೂ ಇವೆಂಟ್‌ಗಳನ್ನು ಹೊರತುಪಡಿಸಿದಲ್ಲಿ, ಆದಷ್ಟೂ ಕಂಫರ್ಟಬಲ್ ಔಟ್‌ಫಿಟ್ ಧರಿಸುತ್ತೇನೆ.
ವಿಶ್ವವಾಣಿ ನ್ಯೂಸ್: ನಿಮ್ಮ ಯೂನಿಕ್ ಸ್ಟೈಲ್ ಸ್ಟೇಟ್‌ಮೆಂಟ್ ಏನು?
ಮಣಿಕಾ ವಿಶ್ವಕರ್ಮ: ಎಲ್ಲರೂ ಇಷ್ಟಪಡುವ ನನ್ನ ಮಂದಹಾಸ.
ವಿಶ್ವವಾಣಿ ನ್ಯೂಸ್: ಉದ್ಯಾನನಗರಿಯ ಬಗ್ಗೆ ನೀವು ಹೇಳುವುದೇನು?
ಮಣಿಕಾ ವಿಶ್ವಕರ್ಮ: ಬ್ಯೂಟಿಫುಲ್ ಗಾರ್ಡನ್ ಸಿಟಿಯಿದು.
ವಿಶ್ವವಾಣಿ ನ್ಯೂಸ್: ಸೀಸನ್ ಫ್ಯಾಷನ್ ಬಗ್ಗೆ ಫಾಲೋವರ್ಸ್‌ಗೆ ನೀವು ನೀಡುವ ಟಿಪ್ಸ್ ಏನು?
ಮಣಿಕಾ ವಿಶ್ವಕರ್ಮ: ಸೀಸನ್‌ಗೆ ತಕ್ಕಂತೆ ಔಟ್‌ಫಿಟ್ ಧರಿಸಿ. ಟ್ರೆಂಡ್ ಫಾಲೋ ಮಾಡದಿದ್ದರೂ ಪರವಾಗಿಲ್ಲ, ನೋಡಲು ಅಂದವಾದ ಉಡುಗೆ ಧರಿಸಿ. ಆದಷ್ಟೂ ಫಿಟ್ನೆಸ್ ಕಾಪಾಡಿಕೊಳ್ಳಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)