Holiday Fashion 2025: ಹೀಗಿರಲಿ ನಿಮ್ಮ ಸಂಡೇ ಔಟಿಂಗ್ ಔಟ್ಫಿಟ್ಸ್
Holiday Fashion 2025: ಭಾನುವಾರದಂದು ಔಟಿಂಗ್ ಹೋಗುವುದಾದಲ್ಲಿ, ಆಯಾ ಸೀಸನ್ಗೆ ಹೊಂದುವಂತಹ ಹಾಗೂ ಟ್ರೆಂಡಿಯಾಗಿರುವಂತಹ ಅದರಲ್ಲೂ ಆರಾಮ ಎಂದೆನಿಸುವಂತಹ ಟ್ರೆಂಡಿ ಔಟ್ಫಿಟ್ಸ್ ಆಯ್ಕೆ ಮಾಡಬೇಕು ಎನ್ನುತ್ತಾರೆ ಸ್ಟೈಲಿಸ್ಟ್ ಗಳು. ಈ ಬಗ್ಗೆ ಅವರು ಒಂದಿಷ್ಟು ಸಿಂಪಲ್ ಸಲಹೆ ಕೂಡ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್ -


ಭಾನುವಾರದ ನಿಮ್ಮ ಔಟಿಂಗ್ನ ಹಾಲಿ ಡೇ ಫ್ಯಾಷನ್ವೇರ್ಗಳು ಟ್ರೆಂಡಿಯಾಗಿದ್ದರೇ ಸಾಲದು, ಧರಿಸಿದಾಗ ಆರಾಮ ಎಂದೆನಿಸಬೇಕು. ಜೊತೆಗೆ ಸೀಸನ್ಗೆ ಮ್ಯಾಚ್ ಆಗುವಂತಿರಬೇಕು ಎನ್ನುತ್ತಾರೆ ಸ್ಟೈಲಿಸ್ಟ್ಸ್. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ಈ ಸೀಸನ್ಗೆ ಹೊಂದುವಂತಹ ನಾನಾ ಬಗೆಯ ಹಾಲಿಡೇ ಔಟ್ಫೀಟ್ಗಳು ಟ್ರೆಂಡಿಯಾಗಿವೆ. ಔಟಿಂಗ್ ಪ್ರಿಯರನ್ನು ಸೆಳೆದಿವೆ.

ಟ್ರೆಂಡಿಯಾಗಿರುವ ಔಟ್ಫಿಟ್ಸ್
ಸಿಂಪಲ್ ಪ್ಯಾಂಟ್ ಮೇಲೊಂದು ಡಿಜಿಟಲ್ ಪ್ರಿಂಟ್, ಟೆಕ್ಸ್ಟ್ ,ಟೀ ಶರ್ಟ್, ತ್ರೀ ಫೋರ್ತ್ ಪ್ಯಾಂಟ್, ಇಲ್ಲವೇ ಬರ್ಮಡಾ, ಅದರ ಮೇಲೊಂದು ಫಂಕಿ ಲೈಟ್ವೈಟ್ ಜಾಕೆಟ್, ಬೆನ್ನ ಹಿಂದೊಂದು ಬ್ಯಾಕ್ ಪ್ಯಾಕ್ ಹುಡುಗರ ಸಿಂಪಲ್ ಸಂಡೇ ಔಟಿಂಗ್ ಔಟ್ಫಿಟ್ ಫ್ಯಾಷನ್ನಲ್ಲಿ ಟ್ರೆಂಡಿಯಾಗಿದೆ. ಇನ್ನು, ಹುಡುಗಿಯರ ಫ್ಯಾಷನ್ನಲ್ಲಿ ಟ್ರೆಂಡಿ ಟಾಪ್, ಟೀ ಶರ್ಟ್, ಕೇಪ್ರಿಸ್, ಫ್ಲೋರಲ್ ಆರ್ಟ್ ಮಿನಿ ಫ್ರಾಕ್, ಮ್ಯಾಕ್ಸಿ, ಡಂಗ್ರೀಸ್ ಕಟೌಟ್ ಡ್ರೆಸ್, ಶಾರ್ಟ್ ಕುರ್ತಾ, ಡೆನಿಮ್ ಕೋ ಆರ್ಡ್ ಸೆಟ್ ಈ ಔಟ್ಗಳೊಂದಿಗೆ ನೇತಾಡುವ ಬಗೆಬಗೆಯ ಸ್ಲಿಂಗ್ ಕ್ಯೂಟ್ ಬ್ಯಾಗ್ಗಳು ಸೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್.

ಬಿಂದಾಸ್ ಔಟ್ಫಿಟ್ಸ್
ಔಟಿಂಗ್ಗೆ ಮ್ಯಾಚ್ ಆಗುವಂತಹ ಹುಡುಗಿಯರ ಅಸ್ಸೆಮ್ಮಿಟ್ರಿಕಲ್ ಡ್ರೆಸ್ಗಳು, ಕ್ರಾಪ್ ಟಾಪ್ಗಳು, ಶಾರ್ಟ್ ಲೆಂತ್ ಪ್ಯಾಂಟ್ ಸೆಟ್ಗಳು, ನಿಟ್ವೇರ್ಸ್, ಕಾರ್ಡಿಗಾನ್ಸ್, ಮಿನಿಮಲ್ ಆಕ್ಸೆಸರೀಸ್ ಸೆಟ್ಗಳು ಸೇರಿದಂತೆ ನಾನಾ ಬಗೆಯ ಬಿಂದಾಸ್ ಫ್ಯಾಷನ್ ಈ ಹಾಲಿಡೇ ಫ್ಯಾಷನ್ ಲಿಸ್ಟ್ನಲ್ಲಿ ಟ್ರೆಂಡಿಯಾಗಿವೆ.

ಫಾರ್ಮಲ್ ಉಡುಪು ಸೈಡಿಗಿಡಿ
ಫಾರ್ಮಲ್ ಡ್ರೆಸ್ ಧರಿಸಿದಲ್ಲಿ 100 ಪರ್ಸೆಂಟ್ ಎಂಜಾಯ್ ಮಾಡಲಾಗುವುದಿಲ್ಲ. ಸೋ, ತಿರುಗಾಡಲು ಆರಾಮದಾಯಕವೆನಿಸುವ ಹಾಗೂ ಪೋಟೋಗಳಲ್ಲೂ ಆಕರ್ಷಕವಾಗಿ ಕಾಣುವಂತಹ ಟ್ರೆಂಡಿ ಉಡುಪುಗಳಿಗೆ ಆದ್ಯತೆ ನೀಡಿ. ಪ್ರೊಫೆಷನಲ್ ಲುಕ್, ಔಟಿಂಗ್ ಫ್ಯಾಷನ್ಗೆ ಹೊಂದುವುದಿಲ್ಲ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್ ಜಿಯಾ.

ಯುವಕರ ಫಂಕಿ ಲುಕ್
ಇನ್ನು, ಔಟಿಂಗ್ನಲ್ಲಿ ಯುವಕರನ್ನು ಫಾರ್ಮಲ್ ಲುಕ್ನಲ್ಲಿ ನೋಡಲು ಸಾಧ್ಯವೇ ಇಲ್ಲ! ಹಾಗಾಗಿ ಹುಡುಗರು ಹೆಚ್ಚು ತಲೆಬಿಸಿಯಿಲ್ಲದೇ ಬಿಂದಾಸ್ ಆಗಿ ಕಾಣಿಸಲು ಶಾರ್ಟ್ ಬರ್ಮಡಾ ಮೇಲೆ ಟೀ ಶರ್ಟ್ ಅದರ ಜತೆಗೆ ಫರ್, ಡೆನೀಮ್, ಬಾಂಬರ್ನಂತಹ ಲೇಯರ್ ಲುಕ್ ನೀಡುವ ಜಾಕೆಟ್ಗಳನ್ನು ಧರಿಸಬಹುದು.
- ಸಂಡೇ ಔಟಿಂಗ್ ಉಡುಪುಗಳು ಹೆವ್ವಿಯಾಗಿರಬಾರದು. ಸಿಂಪಲ್ಲಾಗಿರಬೇಕು.
- ಔಟಿಂಗ್ಗೆ ಆದಷ್ಟೂ ಟ್ರೆಡಿಷನಲ್ ಲುಕ್ ಅವಾಯ್ಡ್ ಮಾಡಬೇಕು.
- ಹೆವ್ವಿ ಜ್ಯುವೆಲರಿಗಳನ್ನು ಧರಿಸುವುದು ನಾಟ್ ಓಕೆ.
- ಕಂಫರ್ಟಬಲ್ ಡ್ರೆಸ್, ಫುಟ್ವೇರ್ಸ್ ಧರಿಸುವುದು ಉತ್ತಮ.