Beauty Trend 2025: ಮುಂಬರುವ ನವರಾತ್ರಿ ಫೆಸ್ಟೀವ್ ಸೀಸನ್ಗೆ ಲಗ್ಗೆ ಇಟ್ಟ ಬ್ಯೂಟಿ ಪ್ಯಾಕೇಜ್ಗಳು
Beauty Trend 2025: ಮುಂಬರುವ ನವರಾತ್ರಿ ಫೆಸ್ಟೀವ್ ಸೀಸನ್ಗಾಗಿ ಈಗಾಗಲೇ ನಾನಾ ಬಗೆಯ ಬ್ಯೂಟಿ ಪ್ಯಾಕೇಜ್ಗಳು ಬ್ಯೂಟಿ ಲೋಕಕ್ಕೆ ಲಗ್ಗೆ ಇಟ್ಟಿವೆ. ಮಾನಿನಿಯರನ್ನು ಸೆಳೆಯುತ್ತಿವೆ. ಈ ಪ್ಯಾಕೇಜ್ಗಳಲ್ಲಿ ಏನೇನೆಲ್ಲಾ ಇವೆ? ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

ಚಿತ್ರಕೃಪೆ: ಪಿಕ್ಸೆಲ್ -


ಮುಂಬರುವ ನವರಾತ್ರಿ ಹಾಗೂ ದಸರೆಗೆ ಬ್ಯೂಟಿ ಲೋಕದಲ್ಲಿ ನಾನಾ ಬಗೆಯ ಬ್ಯೂಟಿ ಪ್ಯಾಕೇಜ್ಗಳು ಬಿಡುಗಡೆಗೊಂಡಿವೆ. ಮಾನಿನಿಯರ ಸೌಂದರ್ಯಕ್ಕೆ ಸಾಥ್ ನೀಡುವ ನಾನಾ ಬಗೆಯ ಮೇಕೋವರ್ ಸೌಲಭ್ಯ ಹಾಗೂ ಫೆಸ್ಟೀವ್ ಬ್ಯೂಟಿ ಪ್ಯಾಕೇಜ್ಗಳು ಹಬ್ಬದ ಸಂಭ್ರಮ-ಸಡಗರ ಹೆಚ್ಚಿಸಲು ಸಜ್ಜಾಗಿವೆ.

ನವರಾತ್ರಿಗೆ ಕೊಂಬೋ ಆಫರ್
ನವರಾತ್ರಿಯ 9 ದಿನವು ಹಬ್ಬದ ಸಂಭ್ರಮವಿರುವುದರಿಂದ ನಾನಾ ಬಗೆಯ ಮೇಕಪ್ ಜತೆಗೆ ಹೇರ್ಸ್ಟೈಲ್, ಫೇಶಿಯಲ್ ಜತೆಗೆ ಹೇರ್ ಮಸಾಜ್, ಪೆಡಿಕ್ಯೂರ್-ಮೆನಿಕ್ಯೂರ್ ಜತೆಗೆ ನೇಲ್ ಆರ್ಟ್, ಐಬ್ರೋ ಶೇಪ್, ಹೇರ್ ಕಟ್ ಜತೆಗೆ ಸೆಟ್ಟಿಂಗ್, ವ್ಯಾಕ್ಸಿಂಗ್ ಜತೆಗೆ ಬ್ಲೀಚಿಂಗ್ ಹೀಗೆ ನಾನಾ ಬಗೆಯ ಸೌಂದರ್ಯ ಹೆಚ್ಚಿಸುವ ಆಫರ್ಗಳು ಈಗಾಗಲೇ ಬ್ಯೂಟಿ ಲೋಕದಲ್ಲಿ ಎಂಟ್ರಿ ನೀಡಿವೆ.

ತಿಂಗಳ ಕಾಲ ಮುಂದುವರೆದ ಸೇವೆ
ಸದ್ಯಕ್ಕೆ ವೆಡ್ಡಿಂಗ್ ಪ್ಯಾಕೇಜ್ಗಳು ಕಡಿಮೆಯಾಗಿದ್ದು, ಹಬ್ಬದ ಸೀಸನ್ ಕಳೆಗಟ್ಟಿದೆ. ಹಾಗಾಗಿ ಮುಂಬರುವ ದೀಪಾವಳಿ ಫೆಸ್ಟೀವ್ ಸೀಸನ್ ಇರುವುದರಿಂದ ನಾನಾ ಬ್ರಾಂಡ್ಗಳು ಬಗೆ ಬಗೆಯ ಫೆಸ್ಟೀವ್ ಬ್ಯೂಟಿ ಪ್ಯಾಕೇಜ್ಗಳನ್ನು ತಂತಮ್ಮ ಬ್ಯೂಟಿ ಪಾರ್ಲರ್ಗಳಲ್ಲಿ ನೀಡುತ್ತಿವೆ. ಇನ್ನು ನವರಾತ್ರಿಯಲ್ಲಿ ಒಂಬತ್ತು ದಿನಗಳವರೆಗೂ ಪ್ರತಿದಿನ ಒಂದಲ್ಲ ಒಂದು ಹಬ್ಬವನ್ನು ಪ್ರತಿಯೊಬ್ಬರು ಆಚರಿಸುತ್ತಾರೆ. ಹಾಗಾಗಿ ಇಂತಹ ಆಫರ್ಗಳನ್ನು ಬಿಡುಗಡೆಗೊಳಿಸಿದ್ದೇವೆ ಎನ್ನುತ್ತಾರೆ ಬ್ಯೂಟಿ ಸ್ಪಾವೊಂದರ ಮ್ಯಾನೇಜರ್ ರಿಯಾ.

ಹೋಮ್ ಸರ್ವೀಸ್ ಸೌಲಭ್ಯ
ನವರಾತ್ರಿಯ ಸಮಯದಲ್ಲಿ ಬ್ಯೂಟಿ ಪಾರ್ಲರ್ಗೆ ಬರಲಿಕ್ಕಾಗದವರಿಗೆಂದೇ ನಾನಾ ಬ್ಯೂಟಿ ಬ್ರಾಂಡ್ಗಳು ಹೋಮ್ ಸರ್ವೀಸ್ ನೀಡುತ್ತಿವೆ.

ಮೇಕೋವರ್ಗೆ ಹೆಚ್ಚಿದ ಬೇಡಿಕೆ
ಮುಂಬರುವ ಹಬ್ಬದ ಸೀಸನ್ನಲ್ಲಿ ಮೇಕಪ್ ಹಾಗೂ ಸೀರೆ ಡ್ರೇಪಿಂಗ್ಗೆ ಬೇಡಿಕೆ ಹೆಚ್ಚಾಗಲಿದೆ. ಇದರೊಂದಿಗೆ ಬಹುತೇಕ ಹೆಣ್ಣುಮಕ್ಕಳು ಟ್ರೆಡಿಷನಲ್ ಲುಕ್ನಲ್ಲಿ ಕಾಣ ಬಯಸುವುದರಿಂದ ಫೆಸ್ಟೀವ್ ಮೇಕಪ್ ಮಾಡಿಸುವವರ ಸಂಖ್ಯೆ ಕೂಡ ಅಧಿಕಗೊಳ್ಳಲಿದೆ ಎನ್ನುತ್ತಾರೆ ಮೇಕಪ್ ತಜ್ಞೆ ದಿಯಾ ಹಾಗೂ ರೇಷ್ಮಾ.