ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Air India Plain: ತಪ್ಪಿದ ಭಾರೀ ದುರಂತ; ಸ್ಯಾನ್ ಫ್ರಾನ್ಸಿಸ್ಕೋ-ದೆಹಲಿ ವಿಮಾನ ತುರ್ತು ಭೂಸ್ಪರ್ಶ

ಸ್ಯಾನ್ ಫ್ರಾನ್ಸಿಸ್ಕೋದಿಂದ ದೆಹಲಿಗೆ (San Francisco-Delhi Flight) ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ವಿಮಾನದ ಸಿಬ್ಬಂದಿಗೆ ತಾಂತ್ರಿಕ ದೋಷದ ಅನುಮಾನ ಬಂದ ನಂತರ ವಿಮಾನವನ್ನು ಮಂಗೋಲಿಯಾದ ಉಲಾನ್‌ಬಟಾಟರ್‌ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಳಿಸಲಾಗಿದೆ. ಸಿಲುಕಿರುವ ಪ್ರಯಾಣಿಕರಿಗೆ ನೆರವು ನೀಡಲು ಏರ್ ಇಂಡಿಯಾ ಅಧಿಕಾರಿಗಳು ಮಂಗೋಲಿಯಾ ವಿಮಾನ ನಿಲ್ದಾಣ ಅಧಿಕಾರಿಗಳು ಮತ್ತು ಸ್ಥಳೀಯ ತಂಡಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. ಜೂನ್ 12, 2025 ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನ ಟೇಕ್‌ ಆಫ್‌ ಆದ ಕೆಲವೇ ಸೆಕೆಂಡುಗಳಲ್ಲಿ ಪತನಗೊಂಡಿತ್ತು. ಇದರಲ್ಲಿ 169 ಭಾರತೀಯರು, 53 ವಿದೇಶಿ ಪ್ರಜೆಗಳು ಇದ್ದರು.

ತಪ್ಪಿದ ದುರಂತ; ಸ್ಯಾನ್ ಫ್ರಾನ್ಸಿಸ್ಕೋ-ದೆಹಲಿ ವಿಮಾನದಲ್ಲಿ ತಾಂತ್ರಿಕ ದೋಷ

ಸಂಗ್ರಹ ಚಿತ್ರ -

Vishakha Bhat Vishakha Bhat Nov 3, 2025 6:52 PM

ಉಲಾನ್‌ಬಾತರ್: ಸ್ಯಾನ್ ಫ್ರಾನ್ಸಿಸ್ಕೋದಿಂದ ದೆಹಲಿಗೆ (Delhi) ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ (Air India Plain) ತಾಂತ್ರಿಕ ದೋಷ ಕಂಡು ಬಂದಿದೆ. ವಿಮಾನದ ಸಿಬ್ಬಂದಿಗೆ ತಾಂತ್ರಿಕ ದೋಷದ ಅನುಮಾನ ಬಂದ ನಂತರ ವಿಮಾನವನ್ನು ಮಂಗೋಲಿಯಾದ ( Mongolia) ಉಲಾನ್‌ಬಟಾಟರ್‌ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಳಿಸಲಾಗಿದೆ. ಈ ಕುರಿತು ಏರ್‌ ಇಂಡಿಯಾ ಸಹ ಸ್ಪಷ್ಟನೆ ನೀಡಿದ್ದು, ವಿಮಾನವು ಉಲಾನ್‌ಬತಾರ್‌ನಲ್ಲಿ ಸುರಕ್ಷಿತವಾಗಿ ಇಳಿಯಿತು ಮತ್ತು ಅಗತ್ಯ ತಪಾಸಣೆಗೆ ಒಳಗಾಗುತ್ತಿದೆ. ಎಲ್ಲಾ ಪ್ರಯಾಣಿಕರನ್ನು ಬೆಂಬಲಿಸಲು ನಾವು ನಮ್ಮ ಸಿಬ್ಬಂದಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಪರಿಸ್ಥಿತಿ ಸುರಕ್ಷಿತವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಾಧ್ಯವಾದಷ್ಟು ಬೇಗ ಎಲ್ಲರನ್ನೂ ಗಮ್ಯಸ್ಥಾನಕ್ಕೆ ತಲುಪಿಸಲು ನಾವು ಪ್ರಯತ್ನಿಸುತ್ತೇವೆ. ಅನಿರೀಕ್ಷಿತ ಪರಿಸ್ಥಿತಿಯಿಂದ ಪ್ರಯಾಣಿಕರಿಗಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ಏರ್ ಇಂಡಿಯಾದಲ್ಲಿ, ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ" ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಬೋಯಿಂಗ್ 777 ವಿಮಾನವು ಹಾರಾಟ ನಡೆಸುತ್ತಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆಯ ಬಗ್ಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.

ಸಿಲುಕಿರುವ ಪ್ರಯಾಣಿಕರಿಗೆ ನೆರವು ನೀಡಲು ಏರ್ ಇಂಡಿಯಾ ಅಧಿಕಾರಿಗಳು ಮಂಗೋಲಿಯಾ ವಿಮಾನ ನಿಲ್ದಾಣ ಅಧಿಕಾರಿಗಳು ಮತ್ತು ಸ್ಥಳೀಯ ತಂಡಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. ಪ್ರಯಾಣಿಕರಿಗೆ ಆಹಾರ, ಹಾಗೂ ಕನಿಷ್ಠ ಸೇವೆಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ತಾಂತ್ರಿಕ ಸಮಸ್ಯೆಯನ್ನು ಎಂಜಿನಿಯರ್‌ಗಳು ಪರಿಶೀಲಿಸುತ್ತಿದ್ದರೂ, ಸುರಕ್ಷತಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಮತ್ತು ಉಲಾನ್‌ಬತಾರ್‌ನಲ್ಲಿ ಇಳಿಯುವ ನಿರ್ಧಾರವನ್ನು ಕೇವಲ ಮುನ್ನೆಚ್ಚರಿಕೆ ಕ್ರಮವಾಗಿ ತೆಗೆದುಕೊಳ್ಳಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಅಕ್ಟೋಬರ್ 9 ರಂದು ಆಸ್ಟ್ರಿಯಾದ ವಿಯೆನ್ನಾದಿಂದ ನವದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಶಂಕಿತ ತಾಂತ್ರಿಕ ದೋಷದಿಂದಾಗಿ ದುಬೈ ವಿಮಾನ ನಿಲ್ದಾಣಕ್ಕೆ ‌ತಿರುಗಿಸಲಾಗಿತ್ತು. ಈ ಕುರಿತು ಮಾಹಿತಿ ನೀಡಿದ್ದ ಏರ್ ಇಂಡಿಯಾ ವಿಮಾನಯಾನ ವಕ್ತಾರರು "ಅ.9ರಂದು ವಿಯೆನ್ನಾದಿಂದ ನವದೆಹಲಿಗೆ ತೆರಳುತ್ತಿದ್ದ AI154 ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ವಿಮಾನವನ್ನು ದುಬೈಗೆ ತಿರುಗಿಸಲಾಯಿತು. ವಿಮಾನವನ್ನು ದುಬೈನಲ್ಲಿ ಸುರಕ್ಷಿತವಾಗಿ ಇಳಿಸಿ ಅಗತ್ಯ ತಪಾಸಣೆಗೆ ಒಳಪಡಿಸಲಾಯಿತು. ಈ ಕುರಿತು ಪ್ರಯಾಣಿಕರಿಗೆ ವಿಳಂಬದ ಕುರಿತು ಮಾಹಿತಿ ನೀಡಿದ್ದೇವು ಹಾಗೂ ಅವರಿಗೆ ಬೇಕಾದ ಎಲ್ಲ ಅಗತ್ಯ ವ್ಯವಸ್ಥೆಯನ್ನು ಮಾಡಿದ್ದೇವು ಮತ್ತು ವಿಮಾನವು ದುಬೈನಿಂದ ಭಾರತ ಕಾಲಮಾನ ಬೆಳ್ಳಿಗೆ 8:45ರ ಸುಮಾರಿಗೆ ತೆರಳಿದೆ ಎಂದು ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ: Fire Accident: ತಪ್ಪಿದ ಭಾರೀ ದುರಂತ; ಏರ್‌ ಇಂಡಿಯಾ ವಿಮಾನದ ಬಳಿಯೇ ಸುಟ್ಟು ಕರಕಲಾದ ಬಸ್‌

ಜೂನ್ 12, 2025 ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನ ಟೇಕ್‌ ಆಫ್‌ ಆದ ಕೆಲವೇ ಸೆಕೆಂಡುಗಳಲ್ಲಿ ಪತನಗೊಂಡಿತ್ತು. ಇದರಲ್ಲಿ 169 ಭಾರತೀಯರು, 53 ವಿದೇಶಿ ಪ್ರಜೆಗಳು ಇದ್ದರು. ವಿಮಾನದ ಎರಡೂ ಎಂಜಿನ್‌ಗಳು ಹಾರಿದ ಕೇವಲ 32 ಸೆಕೆಂಡ್‌ಗಳಲ್ಲಿ ಸ್ಥಗಿತಗೊಂಡಿದ್ದವು. ಒಟ್ಟು 241 ಮಂದಿ ಮೃತಪಟ್ಟಿದ್ದರು.