Israel-Iran Conflict: ಇರಾನಿನ 6 ವಾಯು ನೆಲೆಗಳ ಮೇಲೆ ಇಸ್ರೇಲ್ ದಾಳಿ; 15 ಯುದ್ಧ ವಿಮಾನಗಳು ಧ್ವಂಸ, ವಿಡಿಯೋ ನೋಡಿ
ಇಸ್ರೇಲ್-ಇರಾನ್ ಸಂಘರ್ಷ (Israel-Iran Conflict) ಮುಂದುವರೆದಿದ್ದು ಇಸ್ರೇಲ್ ಇರಾನ್ ಮೇಲೆ ಮತ್ತೆ ದಾಳಿಯನ್ನು ಮಾಡಿದೆ. ಇಸ್ರೇಲ್ ಇರಾನ್ ನ 6 ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ಪಶ್ಚಿಮ, ಪೂರ್ವ ಮತ್ತು ಮಧ್ಯ ಇರಾನ್‌ನಾದ್ಯಂತ ಇರುವ ಆರು ಇರಾನಿನ ವಾಯುನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದೆ.


ಟೆಹ್ರಾನ್: ಇಸ್ರೇಲ್-ಇರಾನ್ ಸಂಘರ್ಷ (Israel-Iran Conflict) ಮುಂದುವರೆದಿದ್ದು ಇಸ್ರೇಲ್ ಇರಾನ್ ಮೇಲೆ ಮತ್ತೆ ದಾಳಿಯನ್ನು ಮಾಡಿದೆ. ಇಸ್ರೇಲ್ ಇರಾನ್ ನ 6 ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ಪಶ್ಚಿಮ, ಪೂರ್ವ ಮತ್ತು ಮಧ್ಯ ಇರಾನ್‌ನಾದ್ಯಂತ ಇರುವ ಆರು ಇರಾನಿನ ವಾಯುನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 15 ಯುದ್ಧ ವಿಮಾನಗಳು ಹಾನಿಗೊಳಗಾಗಿವೆ ಎಂದು ತಿಳಿದು ಬಂದಿದೆ. ಈ ದಾಳಿಯಲ್ಲಿ ಎಫ್ -15 ಮತ್ತು ಎಫ್ -5 ಯುದ್ಧ ವಿಮಾನಗಳು, ಇಂಧನ ತುಂಬುವ ವಿಮಾನ ಮತ್ತು ಎಎಚ್ -1 ಕೋಬ್ರಾ ದಾಳಿ ಹೆಲಿಕಾಪ್ಟರ್ ನಾಶವಾಗಿದೆ ಎಂದು ತಿಳಿದು ಬಂದಿದೆ.
ದಾಳಿ ಕುರಿತು ಇರಾನ್ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ಐಡಿಎಫ್ "ಹಾನಿಗೊಳಗಾದ ರನ್‌ವೇಗಳು, ಭೂಗತ ಬಂಕರ್‌ಗಳು, ಇಂಧನ ತುಂಬುವ ವಿಮಾನ ಮತ್ತು ಇರಾನ್ ಆಡಳಿತಕ್ಕೆ ಸೇರಿದ ಎಫ್ -14, ಎಫ್ -5 ಮತ್ತು ಎಹೆಚ್ -1 ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದೆ. ಟೆಹ್ರಾನ್‌ನ ಮೆಹ್ರಾಬಾದ್, ಮಶಾದ್ ಮತ್ತು ಡೆಜ್‌ಫುಲ್ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.
חיל-האוויר תקף שישה שדות תעופה של המשטר האיראני במערב, במזרח ובמרכז איראן במאמץ להעמקת העליונות האווירית.
— Israeli Air Force (@IAFsite) June 23, 2025
בתקיפות נפגעו מסלולי המראה, דירים תת-קרקעיים, מטוס תדלוק, ומטוסים מסוג F-14, F-5 ו-AH-1, השייכים למשטר האיראני. pic.twitter.com/HNPcxqiriI
ಈ ಸುದ್ದಿಯನ್ನೂ ಓದಿ: Israel-Iran Conflict: ಇಸ್ರೇಲ್ -ಇರಾನ್ ಯುದ್ಧಕ್ಕೆ ಎಂಟ್ರಿ ಕೊಟ್ಟೇ ಬಿಡ್ತು ಅಮೆರಿಕ; ಇರಾನ್‌ನ 3 ಪರಮಾಣು ನೆಲೆಗಳ ಮೇಲೆ ದಾಳಿ
ಪಶ್ಚಿಮ ಇರಾನ್‌ನಲ್ಲಿರುವ ಕೆರ್ಮಾನ್‌ಶಾದಲ್ಲಿನ ಮಿಲಿಟರಿ ಮೂಲಸೌಕರ್ಯದ ಮೇಲೆ ವೈಮಾನಿಕ ದಾಳಿ ನಡೆಸುತ್ತಿರುವುದಾಗಿ ಇಸ್ರೇಲಿ ಸೇನೆ ಸೋಮವಾರ ಘೋಷಿಸಿದ್ದು, ಉಭಯ ದೇಶಗಳ ನಡುವಿನ ಯುದ್ಧವು ಸತತ 11 ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ (Iran- Israel War) ಯುದ್ಧಕ್ಕೆ ಎಂಟ್ರಿಯಾದ ಅಮೆರಿಕ (America Entry) ಇರಾನ್‌ನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತ್ತು. ಮೂರು ದೊಡ್ಡ ಪರಮಾಣು ತಾಣಗಳಾದ ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್‌ಗಳ ಮೇಲೆ ದಾಳಿ ಮಾಡಿದ ನಂತರ ಉಪಗ್ರಹ ಚಿತ್ರ ರಿಲೀಸ್ ಆಗಿದೆ. ಇರಾನ್‌ನ ಫೋರ್ಡೋ ಪರಮಾಣು ಸ್ಥಾವರದ ಮೇಲೆ ಅಮೆರಿಕ ದಾಳಿ ಮಾಡಿದ ಕೆಲವೇ ಗಂಟೆಗಳ ನಂತರ, ವಾಣಿಜ್ಯ ಉಪಗ್ರಹ ಚಿತ್ರ ಬಿಡುಗಡೆ ಮಾಡಿದೆ.