ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನೇಪಾಳ ಗಲಭೆ ವೇಳೆ 49 ಮಂದಿ ಭಾರತೀಯರಿದ್ದ ಬಸ್‌ ಮೇಲೆ ದಾಳಿ: ಹಲವು ಪ್ರಯಾಣಿಕರಿಗೆ ಗಾಯ

ನೇಪಾಳದಲ್ಲಿ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆ ಹಿಂಸಾತ್ಮಕವಾಗಿ ತಿರುಗಿ 51 ಜನರು ಸಾವಿಗೀಡಾಗಿದ್ದಾರೆ. ಈ ನಡುವೆ, ಸೆಪ್ಟೆಂಬರ್ 9ರಂದು ಭಾರತ-ನೇಪಾಳ ಗಡಿಯ ಸೋನೌಲಿ ಬಳಿ ಪಶುಪತಿನಾಥ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ಭಾರತೀಯ ಪ್ರವಾಸಿಗರ ಬಸ್‌ ಮೇಲೆ ಗಲಭೆಕೋರರು ದಾಳಿ ನಡೆಸಿದ್ದು, ಹಲವರಿಗೆ ಗಾಯಗಳಾಗಿವೆ.

ನೇಪಾಳದಲ್ಲಿ ಭಾರತೀಯ ಪ್ರವಾಸಿಗರ ಬಸ್‌ ಮೇಲೆ ದಾಳಿ

-

Profile Sushmitha Jain Sep 12, 2025 11:15 PM

ನವದೆಹಲಿ: ನೇಪಾಳದಲ್ಲಿ (Nepal) Zen-Z ಯುವಕರ ನೇತೃತ್ವದ ಭ್ರಷ್ಟಾಚಾರ (Corruption) ವಿರೋಧಿ ಪ್ರತಿಭಟನೆಯು (Protest) ಭಯಂಕರ ಸ್ವರೂಪ ಪಡೆದುಕೊಂಡಿದ್ದು, 51 ಜನರ ಸಾವು ಸೇರಿದಂತೆ ಗಂಭೀರ ಕಳವಳ ಉಂಟು ಮಾಡಿದೆ. ಸೆಪ್ಟೆಂಬರ್ 9ರಂದು ಭಾರತ-ನೇಪಾಳ ಗಡಿಯ ಸೋನೌಲಿ ಬಳಿಯಲ್ಲಿ ಪಶುಪತಿನಾಥ ದೇವಸ್ಥಾನದ (Pashupatinath Temple) ದರ್ಶನ ಮಾಡಿ ಭಾರತಕ್ಕೆ ಹಿಂದಿರುಗುತ್ತಿದ್ದ 49 ಮಂದಿ ಸಂಚರಿಸುತ್ತಿದ್ದ ಬಸ್‌ ಮೇಲೆ ಗಲಭೆಕೋರರು ದಾಳಿ ನಡೆಸಿದಿದ್ದು, ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಈ ಘಟನೆಯು ಭಾರತೀಯರಲ್ಲಿ ಆತಂಕವನ್ನುಂಟು ಮಾಡಿದ್ದು, ಭಾರತೀಯ ರಾಯಭಾರಿ ಕಚೇರಿಯು ವಿಶೇಷ ವಿಮಾನದ ಮೂಲಕ ಉಳಿದ ಪ್ರಯಾಣಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದೆ.

ಬಸ್ ದಾಳಿಯ ವಿವರ

ಪಾಶುಪತಿನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಾರತಕ್ಕೆ ಹಿಂದಿರುಗುತ್ತಿದ್ದ ಬಸ್‌ಗೆ ಸೋನೌಲಿ ಬಳಿಯಲ್ಲಿ ಗಲಭೆಕೋರರು ಕಲ್ಲು ಎಸೆದಿದ್ದಾರೆ. ಬಸ್ ಚಾಲಕ ರಾಮು ನಿಷಾದ್, “ನಾವು ದರ್ಶನ ಮಾಡಿ ಹಿಂದಿರುಗುತ್ತಿದ್ದೆವು. ಹಠಾತ್ ಗಲಭೆಕೋರರು ಬಸ್ ಅಡ್ಡಗಟ್ಟಿ ದಾಳಿ ಮಾಡಿದರು. ಮಹಿಳೆಯರು ಮತ್ತು ವೃದ್ಧರು ಸೇರಿದಂತೆ ಪ್ರಯಾಣಿಕರಿಗೆ ಗಾಯಗಳಾಗಿವೆ” ಎಂದು ಹೇಳಿದ್ದಾರೆ. ಗಾಯಗೊಂಡವರನ್ನು ಕಠ್ಮಂಡುವಿನ ಆಸ್ಪತ್ರೆಗೆ ಕರೆತೆಗೆದುಕೊಂಡು ಚಿಕಿತ್ಸೆ ನೀಡಲಾಗಿದೆ. ಭಾರತೀಯ ರಾಯಭಾರಿ ಕಚೇರಿಯು ನೇಪಾಳ ಸರ್ಕಾರದೊಂದಿಗೆ ಸಮನ್ವಯದೊಂದಿಗೆ ಉಳಿದ ಪ್ರಯಾಣಿಕರನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆತಂದಿದೆ.

ಈ ಸುದ್ದಿಯನ್ನು ಓದಿ: Viral Video: ತನಿಖಾಧಿಕಾರಿಯನ್ನೇ ಜೈಲಿಗಟ್ಟಿದ ಕೋರ್ಟ್‌- ಅಷ್ಟಕ್ಕೂ ನಡೆದಿದ್ದೇನು?

ನೇಪಾಳದ ಗಲಭೆಯ ಸ್ಥಿತಿ

ನೇಪಾಳದ ಗಲಭೆಯ ಸಾವಿನ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಪೊಲೀಸ್ ವಕ್ತಾರರ ಪ್ರಕಾರ, ಈ ಗಲಭೆಯು ಸಾಮಾಜಿಕ ಮಾಧ್ಯಮ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ಆರಂಭವಾಗಿ ಸಂಸತ್ತನ್ನು ಸುಟ್ಟುಹಾಕುವಷ್ಟು ತೀವ್ರಗೊಂಡಿದೆ. ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ ನೀಡಿದ್ದರೂ, ಗಲಭೆ ಮುಂದುವರಿದಿದೆ. ನೇಪಾಳ ಸೇನೆಯು ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಭಾರತದ ಭದ್ರತಾ ಕ್ರಮ

ನೇಪಾಳದ ಗಲಭೆಯಿಂದ ಭಾರತದ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸಶಸ್ತ್ರ ಸೀಮಾ ಬಲ (SSB) 67 ಕೈದಿಗಳು (ಒಬ್ಬ ಮಹಿಳೆ ಸೇರಿ) ಭಾರತಕ್ಕೆ ಒನುಸುಳುವುದನ್ನು ತಡೆದು ಬಂಧಿಸಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಗಡಿ ಚೌಕಿಗಳಲ್ಲಿ ಬಂಧಿಸಲಾಗಿದೆ. SSB ಸಿಬ್ಬಂದಿ ಗಡಿಯಲ್ಲಿ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. ಗಡಿಯಾಚೆಗಿನ ಚಲನವಲನಗಳ ಮೇಲೆ ತೀವ್ರ ನಿಗಾವಹಿಸುತ್ತಿದ್ದಾರೆ.