ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

United Nations: ಇಸ್ರೇಲ್ ದಾಳಿ ವಿರುದ್ಧ ಕತಾರ್ ಅನ್ನು ಸಮರ್ಥಿಸಿಕೊಂಡ ಪಾಕ್‌ಗೆ ವಿಶ್ವಸಂಸ್ಥೆಯಲ್ಲಿ ಮತ್ತೆ ಮುಜುಗರ

ಇಸ್ರೇಲ್ ದಾಳಿಗಳ ವಿರುದ್ಧ ಕತಾರ್ ಅನ್ನು ಬೆಂಬಲಿಸಿದ ಪಾಕಿಸ್ತಾನವನ್ನು ವಿಶ್ವಸಂಸ್ಥೆಯ ಸಭೆಯಲ್ಲಿ ಭಯೋತ್ಪಾದನೆಯ ಮತ್ತೊಂದು ಪ್ರಾಯೋಜಕ ರಾಷ್ಟ್ರ ಎಂದು ಕರೆಯಲಾಯಿತು. ಇದು ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ ಮಾಡಿದಂತಾಗಿದೆ. ಇಸ್ರೇಲ್ ದಾಳಿಗಳ ವಿರುದ್ಧ ಕತಾರ್‌ಗೆ ಬೆಂಬಲ ನೀಡಿದ ಹಲವು ದೇಶಗಳಲ್ಲಿ ಪಾಕಿಸ್ತಾನ ಕೂಡ ಸೇರಿದೆ.

ವಿಶ್ವಸಂಸ್ಥೆಯಲ್ಲಿ ಮತ್ತೆ ಮುಜುಗರಕ್ಕೆ ಒಳಗಾದ ಪಾಕಿಸ್ತಾನ

-

ನವದೆಹಲಿ: ಇಸ್ರೇಲ್ ದಾಳಿಗಳ (Israeli Attacks) ವಿರುದ್ಧ ಕತಾರ್ (Qatar) ಅನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ವಿಶ್ವಸಂಸ್ಥೆಯಲ್ಲಿ (United Nations) ಪಾಕಿಸ್ತಾನದ (Pakistan) ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾದ ಕತಾರ್ ಮೇಲಿನ ಇತ್ತೀಚಿನ ಇಸ್ರೇಲ್ ದಾಳಿಗಳ ಕುರಿತು ಚರ್ಚಿಸಲು ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವಕೀಲರು (International human rights lawyer) ಪಾಕಿಸ್ತಾನವನ್ನು ಪ್ರಾಯೋಜಿತ ಭಯೋತ್ಪಾದನೆಯ ರಾಷ್ಟ್ರ ಎಂದು ಕರೆದರು. ಇದರಿಂದ ಪಾಕಿಸ್ತಾನ ತೀವ್ರ ಮುಖಭಂಗ ಎದುರಿಸುವಂತಾಯಿತು.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಮಾನವ ಹಕ್ಕುಗಳ ವಕೀಲ ಮತ್ತು ಯುಎನ್ ವಾಚ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಿಲ್ಲೆಲ್ ನ್ಯೂಯರ್ ಇಸ್ರೇಲ್ ದಾಳಿಗಳ ವಿರುದ್ಧ ಕತಾರ್ ಅನ್ನು ಬೆಂಬಲಿಸಿದ ಪಾಕಿಸ್ತಾನವನ್ನು ಭಯೋತ್ಪಾದನೆಯ ಮತ್ತೊಂದು ಪ್ರಾಯೋಜಕ ರಾಷ್ಟ್ರ ಎಂದು ಕರೆದರು.

ಇಸ್ರೇಲಿ ದಾಳಿಗಳ ವಿರುದ್ಧ ಕತಾರ್‌ಗೆ ಬೆಂಬಲ ನೀಡಿದ ಹಲವು ದೇಶಗಳಲ್ಲಿ ಪಾಕಿಸ್ತಾನವು ಸೇರಿತ್ತು. ವಿಶ್ವದ ಅತ್ಯಂತ ಕೆಟ್ಟ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸುವವರಿಂದ ನಾವು ಕಾನೂನಿನ ಬಗ್ಗೆ ಬಹಳಷ್ಟು ಕೇಳಿದ್ದೇವೆ. ಅಪರಾಧಿಗಳನ್ನು ಸವಾಲು ಮಾಡುವ ಸಮಯ ಇದು ಎಂದು ಅವರು ಹೇಳಿದರು.

ಕತಾರ್ ನಿಯೋಗದೊಂದಿಗೆ ಮಾತನಾಡಿದ ನ್ಯೂಯರ್, ರಾಜಧಾನಿಯಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುವುದೇಕೆ ಎಂದು ಪ್ರಶ್ನಿಸಿದ ಅವರು ಒತ್ತೆಯಾಳುಗಳನ್ನು ಇಟ್ಟುಕೊಂಡು ಅವರನ್ನು ಹಿಂಸಿಸುತ್ತಿರುವ ಮತ್ತು ಶಾಂತಿ ಒಪ್ಪಂದಗಳನ್ನು ತಿರಸ್ಕರಿಸುತ್ತಿರುವವರು ಭಯೋತ್ಪಾದಕರು ಎಂದು ಹೇಳಿದರು.

ಭಯೋತ್ಪಾದಕರು ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಐಷಾರಾಮಿ ಹೊಟೇಲ್ ಗಳಲ್ಲಿ ಏಕೆ ಆಶ್ರಯ ಪಡೆದಿದ್ದಾರೆ ಎಂದು ಪ್ರಶ್ನಿಸಿದ ಅವರು, 2007ರಲ್ಲಿ ಹಮಾಸ್ ಗಾಜಾವನ್ನು ವಶಪಡಿಸಿಕೊಳ್ಳಲು ಕತಾರ್ ಏಕೆ ಬೆಂಬಲ ನೀಡಿತು ಎಂದು ಪ್ರಶ್ನಿಸಿದರು.



ಕತಾರ್ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಟೀಕಿಸಿದ್ದಕ್ಕಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರನ್ನು ನ್ಯೂಯರ್ ಟೀಕಿಸಿದರು. ಪಾಕಿಸ್ತಾನದಲ್ಲಿ ಅಮೆರಿಕ ಒಸಾಮಾ ಬಿನ್ ಲಾಡೆನ್ ಅವರನ್ನು ಕೊಂದಾಗ, ಅಂತಾರಾಷ್ಟ್ರೀಯ ಭಯೋತ್ಪಾದನೆಯ ಮಾಸ್ಟರ್ ಮೈಂಡ್‌ಗೆ ನ್ಯಾಯ ದೊರಕಿದೆ ಎಂದು ಅವರು ಹೇಳಿದರು.

ಈ ವೇಳೆ ಪಾಕಿಸ್ತಾನದ ನಿಯೋಗವು ನ್ಯೂಯರ್ ಅವರ ಮಾತಿಗೆ ಅಡ್ಡಿ ಉಂಟು ಮಾಡಿ ಟೀಕೆಗೆ ಗುರಿಯಾಯಿತು. ನಾವು ಆಧಾರರಹಿತ ಆರೋಪಗಳು ಮತ್ತು ಆರೋಪಗಳನ್ನು ಮಾಡುವುದನ್ನು ತಿರಸ್ಕರಿಸುತ್ತೇವೆ ಎಂದು ಪಾಕಿಸ್ತಾನದ ರಾಜತಾಂತ್ರಿಕರೊಬ್ಬರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯೂಯರ್‌, ಪಾಕಿಸ್ತಾನ ಭಯೋತ್ಪಾದನೆಯ ಮತ್ತೊಂದು ಪ್ರಾಯೋಜಕ ರಾಷ್ಟ್ರ ಎಂದರು.

ಇದನ್ನೂ ಓದಿ: MLA C B Suresh Babu: ಜನರ ಅಧಿಕಾರ ಜನರ ಕೈಗೆ: ಶಾಸಕ ಸಿ.ಬಿ. ಸುರೇಶ್ ಬಾಬು

ದೋಹಾದಲ್ಲಿ ತಂಗಿದ್ದಾರೆಂದು ವರದಿಯಾದ ಹಮಾಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವೈಮಾನಿಕ ದಾಳಿ ನಡೆಸಿತು. ಈ ದಾಳಿಯಲ್ಲಿ ಐದು ಹಮಾಸ್ ಸದಸ್ಯರು ಮತ್ತು ಒಬ್ಬ ಕತಾರ್ ಭದ್ರತಾ ಅಧಿಕಾರಿ ಸಾವನ್ನಪ್ಪಿದ್ದಾರೆ. ಹಮಾಸ್ ತನ್ನ ಉನ್ನತ ನಾಯಕರು ದಾಳಿಯಿಂದ ಬದುಕುಳಿದಿದ್ದಾರೆ ಎಂದು ಹೇಳಿದೆ.