ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel- Hamas War: ಇಸ್ರೇಲ್ ಕಪಿಮುಷ್ಟಿಯಲ್ಲಿ ಗಾಜಾದ ಶೇ.40ರಷ್ಟು ಭೂ ಭಾಗ!

ಸುಮಾರು ಎರಡು ವರ್ಷಗಳಿಂದ ಹಮಾಸ್ ಜೊತೆ ಯುದ್ಧ ಮಾಡುತ್ತಿರುವ ಇಸ್ರೇಲ್, ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಸಿದ್ಧವಾಗಿದ್ದು, ಈಗಾಗಲೇ ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಇಸ್ರೇಲ್ ಭದ್ರತಾ ಸಚಿವ ಸಂಪುಟ ಯೋಜನೆ ರೂಪಿಸಿ ಅದಕ್ಕೆ ಅನುಮೋದನೆ ಪಡೆದುಕೊಂಡಿದೆ. ಇದರ ಭಾಗವಾಗಿ ಈಗಾಗಲೇ ಶೇ 40ರಷ್ಟು ಗಾಜಾವನ್ನು ಇಸ್ರೇಲ್ ವಶಪಡಿಸಿಕೊಂಡಿದ್ದು, ಗುರುವಾರ ಇಸ್ರೇಲ್‌ನ ವೈಮಾನಿಕ ದಾಳಿಗಳಿಂದ ಗಾಜಾ ನಗರದಲ್ಲಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಸಿವಿಲ್ ಡಿಫೆನ್ಸ್ ಏಜೆನ್ಸಿ ವರದಿ ಮಾಡಿದೆ.

ಇಸ್ರೇಲ್ ಕಪಿಮುಷ್ಟಿಯಲ್ಲಿ ಗಾಜಾದ ಶೇ.40ರಷ್ಟು ಭೂ ಭಾಗ!

ಸಾಂದರ್ಭಿಕ ಚಿತ್ರ -

Profile Sushmitha Jain Sep 5, 2025 1:06 PM

ಗಾಜಾ: ಇಸ್ರೇಲ್ (Israel) ಸೇನೆಯು ಗಾಜಾ (Gaza) ನಗರದ 40% ಭಾಗವನ್ನು ತನ್ನ ವಶದಲ್ಲಿಟ್ಟುಕೊಂಡಿದೆ ಎಂದು ಘೋಷಿಸಿದ್ದು, ಮುಂದಿನ ದಿನಗಳಲ್ಲಿ ದಾಳಿಯನ್ನು ವಿಸ್ತರಿಸಿ ತೀವ್ರಗೊಳಿಸಲಿದೆ ಎಂದು ತಿಳಿಸಿದೆ. ಗುರುವಾರ ಇಸ್ರೇಲ್‌ನ ವೈಮಾನಿಕ ದಾಳಿಗಳಿಂದ ಗಾಜಾ ನಗರದಲ್ಲಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಸಿವಿಲ್ ಡಿಫೆನ್ಸ್ ಏಜೆನ್ಸಿ ವರದಿ ಮಾಡಿದೆ. ಒಟ್ಟಾರೆ ಗಾಜಾ ಪಟ್ಟಿಯಲ್ಲಿ ಕನಿಷ್ಠ 64 ಪ್ಯಾಲೆಸ್ಟೀನಿಯರು (Palestinians) ಹತರಾಗಿದ್ದಾರೆಂದು ತಿಳಿದುಬಂದಿದೆ.

ಇಸ್ರೇಲ್‌ನ ದಾಳಿ ತೀವ್ರ

ಇಸ್ರೇಲ್ ಸೇನೆಯ ವಕ್ತಾರ ಬ್ರಿಗೇಡಿಯರ್ ಜನರಲ್ ಎಫೀ ಡೆಫ್ರಿನ್, "ಗಾಜಾ ನಗರದ 40% ಭೂಭಾಗವನ್ನು ನಾವು ವಶಪಡಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ದಾಳಿಯನ್ನು ತೀವ್ರಗೊಳಿಸುತ್ತೇವೆ" ಎಂದು ಹೇಳಿದ್ದಾರೆ. 2023ರ ಅಕ್ಟೋಬರ್‌ನಲ್ಲಿ ಹಮಾಸ್‌ನ ದಾಳಿಯಿಂದ ಉಂಟಾದ ಯುದ್ಧವನ್ನು ಸಂಪೂರ್ಣವಾಗಿ ಗೆಲ್ಲುವವರೆಗೆ ಹಮಾಸ್ ಮೇಲಿನ ಒತ್ತಡವನ್ನು ಹೆಚ್ಚಿಸುವುದಾಗಿ ಡೆಫ್ರಿನ್ ಶಪಥ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಗಾಜಾ ನಗರದ ಉತ್ತರ ಭಾಗದಲ್ಲಿ ಇಸ್ರೇಲ್ ತೀವ್ರ ಬಾಂಬ್ ದಾಳಿಗಳನ್ನು ನಡೆಸಿದೆ, ಆದರೂ ಅಂತಾರಾಷ್ಟ್ರೀಯ ಒತ್ತಡದ ಹೊರತಾಗಿಯೂ ಈ ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತಿದೆ.

ವಲಸೆ ಮತ್ತು ಕ್ಷಾಮ

ಗಾಜಾದ ಬಹುತೇಕ ನಿವಾಸಿಗಳು ಈಗಾಗಲೇ ಒಮ್ಮೆಯಾದರೂ ವಲಸೆ ಹೋಗಿದ್ದು, ಹೊಸ ದಾಳಿಯಿಂದ ಸುಮಾರು 10 ಲಕ್ಷ ಪ್ಯಾಲೆಸ್ಟೀನಿಯರು ಗಾಜಾ ನಗರದಿಂದ ದಕ್ಷಿಣಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಇಸ್ರೇಲ್ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ತಿಂಗಳು ಗಾಜಾ ನಗರದ ಸುತ್ತಮುತ್ತ ಕ್ಷಾಮವನ್ನು ಘೋಷಿಸಿದ ವಿಶ್ವಸಂಸ್ಥೆ, ಇಲ್ಲಿ ಸುಮಾರು 10 ಲಕ್ಷ ಜನರು ವಾಸಿಸುತ್ತಾರೆಂದು ಅಂದಾಜಿಸಿದೆ.

ಈ ಸುದ್ದಿಯನ್ನೂ ಓದಿ: Viral Video: ಇಂಥ ಬ್ಯುಸಿನೆಸ್‌ ಕೂಡ ಮಾಡಬಹುದು! ಹಲ್ಲಿಲ್ಲದ ಪುರುಷರಿಗೆ ಜಗಿದ ಆಹಾರವನ್ನು ತಲುಪಿಸಿ ಹೊಸ ಉದ್ಯಮ ಸ್ಥಾಪಿಸಿದ ಮಹಿಳೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ

ಪ್ಯಾರಿಸ್‌ನಲ್ಲಿ ಮಾತನಾಡಿದ ಯೂರೋಪಿಯನ್ ಕಮಿಷನ್ ಉಪಾಧ್ಯಕ್ಷೆ ತೆರೇಸಾ ರಿಬೆರಾ, ಗಾಜಾದ ಯುದ್ಧವನ್ನು "ಗಾಜಾದಲ್ಲಿ ನರಮೇಧ" ಎಂದು ಕರೆದು, 27 ರಾಷ್ಟ್ರಗಳ ಯೂರೋಪಿಯನ್ ಒಕ್ಕೂಟವು ಇದನ್ನು ತಡೆಯಲು ವಿಫಲವಾಗಿದೆ ಎಂದು ಖಂಡಿಸಿದ್ದಾರೆ. ಇಸ್ರೇಲ್ ಈ ಹೇಳಿಕೆಯನ್ನು "ಹಮಾಸ್‌ನ ಪ್ರಚಾರ" ಎಂದು ಟೀಕಿಸಿದೆ. 2023ರ ಅಕ್ಟೋಬರ್‌ನಲ್ಲಿ ಹಮಾಸ್‌ನ ದಾಳಿಯಿಂದ 1,219 ಜನರು, ಹೆಚ್ಚಿನವರು ಸಾಮಾನ್ಯ ಜನರು, ಸಾವನ್ನಪ್ಪಿದ್ದರು ಎಂದು ಇಸ್ರೇಲ್‌ನ ಅಂಕಿಅಂಶಗಳ ಆಧಾರದಲ್ಲಿ ವರದಿಯಾಗಿದೆ. ಇಸ್ರೇಲ್‌ನ ಪ್ರತಿದಾಳಿಯಿಂದ ಗಾಜಾದಲ್ಲಿ ಕನಿಷ್ಠ 64,231 ಪ್ಯಾಲೆಸ್ಟೀನಿಯರು ಹಾಗೂ ಹೆಚ್ಚಿನ ಸಾಮಾನ್ಯ ಜನರು, ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯು ದೃಢೀಕರಿಸಿದೆ.

ಹಮಾಸ್‌ನ ಹಿರಿಯ ಅಧಿಕಾರಿಗಳು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿಯೊಂದಿಗೆ ದೋಹಾದಲ್ಲಿ ಭೇಟಿಯಾಗಿ ಯುದ್ಧವನ್ನು ಕೊನೆಗೊಳಿಸುವ ಕುರಿತು ಚರ್ಚಿಸಿದ್ದಾರೆ ಎಂದು ಹಮಾಸ್ ಹೇಳಿಕೆ ತಿಳಿಸಿದೆ.