Philippines earthquake: ಫಿಲಿಪೈನ್ಸ್‌ನಲ್ಲಿ 7.6 ತೀವ್ರತೆಯ ಭೂಕಂಪ; ಸುನಾಮಿ ಆತಂಕ
ಮಿಂಡಾನಾವೊದ ದಾವೊ ಓರಿಯಂಟಲ್‌ನಲ್ಲಿರುವ ಮನಾಯ್ ಪಟ್ಟಣದ ಬಳಿ 10 ಕಿ.ಮೀ ಆಳದಲ್ಲಿ ಕಡಲಾಚೆಯ ಭೂಕಂಪ ಸಂಭವಿಸಿದೆ. ಇನ್ನು ದುರ್ಘಟನೆಯಲ್ಲಿ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ. ಮಧ್ಯ ಮತ್ತು ದಕ್ಷಿಣ ಫಿಲಿಪೈನ್ಸ್‌ನ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆಯಾಗಿ ಎತ್ತರದ ಪ್ರದೇಶಗಳಿಗೆ ಅಥವಾ ಒಳನಾಡಿಗೆ ಸ್ಥಳಾಂತರಗೊಳ್ಳುವಂತೆ ಫಿವೊಲ್ಕ್ಸ್ ಸೂಚನೆ ನೀಡಿದೆ.

-

ಫಿಲಿಪೈನ್ಸ್: ಫಿಲಿಪೈನ್ಸ್‌ನಲ್ಲಿ ಇಂದು ಬೆಳ್ಳಂ ಬೆಳಗ್ಗೆ 7.6 ತೀವ್ರತೆಯ ಭೂಕಂಪ(Philippines earthquake) ಸಂಭವಿಸಿದೆ. ಈ ಪ್ರಬಲ ಭೂಕಂಪದ ಕಾರಣ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಉಂಟಾಗುವ ಭೀತಿ ಎದುರಾಗಿದೆ. ಪರಿಣಾಮವಾಗಿ ಕರಾವಳಿ ಪ್ರದೇಶದ ಜನರನ್ನು ಸ್ಥಳಾಂತರಿಸಲು ಸೂಚನೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ (ಫಿವೊಲ್ಕ್ಸ್) ಮಾಹಿತಿ ನೀಡಿದ್ದು, ಮಿಂಡಾನಾವೊದ ದಾವೊ ಓರಿಯಂಟಲ್‌ನಲ್ಲಿರುವ ಮನಾಯ್ ಪಟ್ಟಣದ ಬಳಿ 10 ಕಿ.ಮೀ ಆಳದಲ್ಲಿ ಕಡಲಾಚೆಯ ಭೂಕಂಪ ಸಂಭವಿಸಿದೆ. ಇನ್ನು ದುರ್ಘಟನೆಯಲ್ಲಿ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
Patients and staff seen evacuating the Tagum City Davao Regional Medical Center in the Philippines amid intense shaking caused by magnitude 7.6 earthquake. pic.twitter.com/melwzIQdCy
— Noteworthy News (@newsnoteworthy) October 10, 2025
ಮಧ್ಯ ಮತ್ತು ದಕ್ಷಿಣ ಫಿಲಿಪೈನ್ಸ್‌ನ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆಯಾಗಿ ಎತ್ತರದ ಪ್ರದೇಶಗಳಿಗೆ ಅಥವಾ ಒಳನಾಡಿಗೆ ಸ್ಥಳಾಂತರಗೊಳ್ಳುವಂತೆ ಫಿವೊಲ್ಕ್ಸ್ ಸೂಚನೆ ನೀಡಿದೆ. ಏತನ್ಮಧ್ಯೆ, ಹವಾಯಿಯಲ್ಲಿರುವ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಭೂಕಂಪದ ಕೇಂದ್ರಬಿಂದುವಿನಿಂದ 186 ಮೈಲುಗಳ ಒಳಗೆ ಅಪಾಯಕಾರಿ ಅಲೆಗಳು ಸಂಭವಿಸಬಹುದು ಎಂದು ಹೇಳಿದೆ. ಫಿಲಿಪೈನ್ಸ್ ಕರಾವಳಿಯ ಕೆಲವು ಭಾಗಗಳಲ್ಲಿ 3 ಮೀಟರ್ ಎತ್ತರದ ಅಲೆಗಳು ಹಾಗೂ ಇಂಡೋನೇಷ್ಯಾ ಮತ್ತು ಪಲಾವ್‌ನಲ್ಲಿ ಸಣ್ಣ ಅಲೆಗಳು ಸಂಭವಿಸುವ ಸಾಧ್ಯತೆಯಿದೆ.
ಈ ಸುದ್ದಿಯನ್ನೂ ಓದಿ: Earthquake: ಭಾರೀ ಭೂಕಂಪ; ಫಿಲಿಪೈನ್ಸ್‌ನಲ್ಲಿ ಬರೋಬ್ಬರಿ 31 ಬಲಿ
ಭೂಕಂಪ ಸಂಭವಿಸಿದಾಗ ಜನರು ಭಯಭೀತರಾಗಿದ್ದು, ಕೆಲವು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ" ಎಂದು ಎಡ್ವಿನ್ ಜುಬಾಹಿಬ್ ಸ್ಥಳೀಯ ಮಾಧ್ಯಮಗಳಿಗೆ ಹೇಳಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. ಇನ್ನು ಭೂಮಿ ಕಂಪಿಸಿದ ಅನುಭವಾಗುತ್ತಿದ್ದಂತೆ ಜನ ಭೀತಿಯಿಂದ ಓಡುತ್ತಿರುವ ವಿಡಿಯೊಗಳು ಆಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
#BREAKING
— Brian’s Breaking News and Intel (@intelFromBrian) October 10, 2025
Damage from 7.4 earthquake in Tagum, Philippines
pic.twitter.com/OVHrVHrB9a
ಕೆಲವು ದಿನಗಳ ಹಿಂದೆಯಷ್ಟೇ ಮಧ್ಯ ಫಿಲಿಪೈನ್ಸ್‌ನಲ್ಲಿ ಭಾರೀ ಭೂಕಂಪ ಸಂಭವಿಸಿತ್ತು. 6.9 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ವರದಿಯ ಪ್ರಕಾರ, ಫಿಲಿಪೈನ್ಸ್‌ನ ಪಲೊಂಪನ್‌ನ ಪಶ್ಚಿಮಕ್ಕೆ ಮತ್ತು ಸೆಬು ಪ್ರಾಂತ್ಯದ ಬೊಗೊ ನಗರದ ರಾತ್ರಿ 10 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದೆ.
ಫಿಲಿಪೈನ್ಸ್ ರೆಡ್‌ಕ್ರಾಸ್‌ನ ಅಧ್ಯಕ್ಷ ರಿಚರ್ಡ್ ಗಾರ್ಡನ್ ಮಾಹಿತಿ ನೀಡಿದ್ದು, ಭಾರೀ ಭೂಕಂಪಕ್ಕೆ ಸ್ಯಾನ್ ರೆಮಿಜಿಯೊ ಪಟ್ಟಣದಲ್ಲಿ ಬ್ಯಾಸ್ಕೆಟ್‌ಬಾಲ್ ಆಟದ ಸಮಯದಲ್ಲಿ ಕ್ರೀಡಾ ಸಂಕೀರ್ಣ ಕುಸಿದು ಬಿದ್ದಿತ್ತು. ಪರಿಣಾಮವಾಗಿ ಫಿಲಿಪೈನ್ಸ್ ಕೋಸ್ಟ್ ಗಾರ್ಡ್‌ನ ಮೂವರು ಸದಸ್ಯರು ಮತ್ತು ಒಬ್ಬ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ. ಕೆಲವು ಚರ್ಚ್‌ಗಳು, ಶಾಲೆಗಳು ಕುಸಿದು ಬಿದ್ದಿವೆ. ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು ಎಂದು ಅವರು ಹೇಳಿದರು.