ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೇನಾ ಸನ್ನದ್ಧತೆ ಅನಿವಾರ್ಯ

ನಮ್ಮ ಮಗ್ಗುಲುಮುಳ್ಳು ಪಾಕಿಸ್ತಾನಕ್ಕೆ ‘ಎಐಎಂ-೧೨೦’ ಕ್ಷಿಪಣಿಗಳನ್ನು ಕೊಡಲು ಸಮ್ಮತಿಸಿದೆ ಅಮೆರಿಕ. ಆರ್ಥಿಕವಾಗಿ ಧರಾಶಾಯಿ ಯಾಗಿದ್ದರೂ ಭಾರತವನ್ನು ಸಾಧ್ಯವಾದಷ್ಟರ ಮಟ್ಟಿಗೆ ಹಣಿಯಬೇಕೆಂಬ ವಿಲಕ್ಷಣ ಹಪಾಹಪಿಯನ್ನು ಹೊಂದಿರುವ ಪಾಕಿಸ್ತಾನವು, ಅಮೆರಿಕದ ಈ ಕುಮ್ಮಕ್ಕಿನಿಂದ ಒಂದಿಷ್ಟು ಬಲವನ್ನು ಕ್ರೋಡೀಕರಿಸಿಕೊಂಡು ಭಾರತದ ಮೇಲೆ ಎರಗಲು ಮುಂದಾಗುವ ಸಾಧ್ಯತೆಯಿದೆ

ಸೇನಾ ಸನ್ನದ್ಧತೆ ಅನಿವಾರ್ಯ

-

Ashok Nayak Ashok Nayak Oct 10, 2025 1:55 PM

ಕೊನೆಗೂ ಅಂದುಕೊಂಡಂತೆಯೇ ಆಗಿದೆ. ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಅತಿರೇಕದ ಸುಂಕದ ಹೇರಿಕೆ, ಎಚ್-1ಬಿ ವೀಸಾದ ವಾರ್ಷಿಕ ಶುಲ್ಕವನ್ನು ಮುಗಿಲೆತ್ತರಕ್ಕೆ ಏರಿಸಿದ್ದು ಹೀಗೆ ವಿವಿಧ ಉಪಕ್ರಮಗಳ ಮೂಲಕ ಭಾರತದ ಕಡೆಗೆ ಕೆಂಗಣ್ಣು ಬೀರಿದ್ದರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

ಈಗ ಅದರ ಮುಂದುವರಿದ ಭಾಗ ಎಂಬಂತೆ, ನಮ್ಮ ಮಗ್ಗುಲುಮುಳ್ಳು ಪಾಕಿಸ್ತಾನಕ್ಕೆ ‘ಎಐಎಂ-೧೨೦’ ಕ್ಷಿಪಣಿಗಳನ್ನು ಕೊಡಲು ಸಮ್ಮತಿಸಿದೆ ಅಮೆರಿಕ. ಆರ್ಥಿಕವಾಗಿ ಧರಾಶಾಯಿ ಯಾಗಿದ್ದರೂ ಭಾರತವನ್ನು ಸಾಧ್ಯವಾದಷ್ಟರ ಮಟ್ಟಿಗೆ ಹಣಿಯಬೇಕೆಂಬ ವಿಲಕ್ಷಣ ಹಪಾಹಪಿ ಯನ್ನು ಹೊಂದಿರುವ ಪಾಕಿಸ್ತಾನವು, ಅಮೆರಿಕದ ಈ ಕುಮ್ಮಕ್ಕಿನಿಂದ ಒಂದಿಷ್ಟು ಬಲವನ್ನು ಕ್ರೋಡೀಕರಿಸಿಕೊಂಡು ಭಾರತದ ಮೇಲೆ ಎರಗಲು ಮುಂದಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Vishwavani Editorial; ಔಷಧವೇ ವಿಷವಾಗದಿರಲಿ

ಹೀಗಾಗಿ ಸೇನಾ ಸನ್ನದ್ಧತೆಯು ಅನಿವಾರ್ಯವಾಗಿರುವ ಸ್ಥಿತಿಗೆ ಭಾರತ ಸಾಕ್ಷಿಯಾಗಿದೆ. ಏಕೆಂದರೆ, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಸಂದರ್ಭದಲ್ಲಿ ಸಾಕಷ್ಟು ಬಿಸಿ ಮುಟ್ಟಿಸಿದ್ದರೂ ಗಡಿಭಾಗದಲ್ಲಿ ಪಾಕಿಸ್ತಾನ ಮತ್ತೆ ಕಿತಾಪತಿಗೆ ಶುರುವಿಟ್ಟುಕೊಂಡಿದೆ. ಇತ್ತೀಚಿನ ಕ್ರಿಕೆಟ್ ಪಂದ್ಯ ವೊಂದರಲ್ಲಿ ಪಾಕಿಸ್ತಾನದ ಆಟಗಾರನೊಬ್ಬ, ‘ಭಾರತದ ಯುದ್ಧವಿಮಾನಗಳನ್ನು ಪಾಕ್ ಹೊಡೆದುರುಳಿಸಿತು’ ಎಂಬಂತೆ ಸಂಜ್ಞೆಯ ಮೂಲಕವೇ ತೋರಿಸಿ ಕ್ರೀಡಾಭಿಮಾನಿಗಳನ್ನು ಮಾತ್ರವಲ್ಲದೆ ಒಂದಿಡೀ ಭಾರತೀಯರನ್ನು ಕೆಣಕುವ ದುಸ್ಸಾಹಸಕ್ಕೆ ಕೈಹಾಕಿ ಆಗಿದೆ.

ಭಾರತವನ್ನು ವಿನಾಕಾರಣ ಕೆರಳಿಸುವ ವಿಷಯ ಬಂದಾಗ ಪಾಕಿಸ್ತಾನದ ವಿವಿಧ ಕ್ಷೇತ್ರಗಳವರು ತಂತಮ್ಮ ನೆಲೆಯಲ್ಲಿ ಹೀಗೆ ‘ಯೋಗದಾನ’ವನ್ನು ನೀಡುವುದಿದೆ! ಇರಲಿ, ಭಾರತವೇನೂ ಕೈಕಟ್ಟಿ ಕೂತಿಲ್ಲ. ಈಗಾಗಲೇ ಸಾಕಷ್ಟು ಬಾರಿ ಏಟು ತಿಂದು ಗಾಯಗಳನ್ನು ನೆಕ್ಕಿಕೊಳ್ಳುತ್ತಿರುವ ಶತ್ರುರಾಷ್ಟ್ರವು, ತನಗೆ ಕಿರುಕುಳ ನೀಡಲೆಂದು ಯಾವ ಮಟ್ಟಕ್ಕೆ ಬೇಕಿದ್ದರೂ ಇಳಿಯುತ್ತದೆ ಎಂಬ ಕಹಿಸತ್ಯ ಭಾರತಕ್ಕೆ ಗೊತ್ತಿದೆ.

ಮೋದಿಯವರಂಥ ಸಮರ್ಥ ನಾಯಕ, ಭಾರತೀಯ ಸೇನೆಯಂಥ ವಿಶ್ವಾಸಾರ್ಹ ಯೋಧಪಡೆ ಇರುವವರೆಗೆ ಭಾರತೀಯರಿಗೆ ಯಾವ ಭಯವೂ ಇಲ್ಲ. ಅದನ್ನು ಪಾಕಿಸ್ತಾನ ಅರ್ಥಮಾಡಿ ಕೊಂಡಿಲ್ಲ, ಅಷ್ಟೇ!