ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Air New Zealand CEO: ನ್ಯೂಜಿಲೆಂಡ್ ವಿಮಾನಯಾನ ಸಂಸ್ಥೆಗೆ ಸಿಇಒ ಆಗಿ ಭಾರತೀಯ ಆಯ್ಕೆ! ಯಾರೀತ? ಏನಿವರ ಹಿನ್ನೆಲೆ?

ಭಾರತದ ವಿಮಾನಯಾನ ಸಂಸ್ಥೆಗಳಿಗೆ ನ್ಯೂಜಿಲೆಂಡ್ ವ್ಯಕ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದರೆ ಇದೀಗ ನ್ಯೂಜಿಲೆಂಡ್ ವಿಮಾನಯಾನ ಸಂಸ್ಥೆಗೆ ಭಾರತೀಯ ಮೂಲದ ವ್ಯಕ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಲಿದ್ದಾರೆ. ಭಾರತೀಯ ಮೂಲದ ನಿಖಿಲ್ ರವಿಶಂಕರ್ ಮುಂದಿನ ಅಕ್ಟೋಬರ್ ನಲ್ಲಿ ನ್ಯೂಜಿಲೆಂಡ್ ವಿಮಾನಯಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ನ್ಯೂಜಿಲೆಂಡ್ ಏರ್‌ಗೆ ಭಾರತೀಯ ಮೂಲದ  ಸಿಇಒ

ಆಕ್ಲೆಂಡ್: ಭಾರತೀಯ ಮೂಲದ (Indian-origin tech leader) ನಿಖಿಲ್ ರವಿಶಂಕರ್ (Nikhil Ravishankar) ನ್ಯೂಜಿಲೆಂಡ್ ವಿಮಾನಯಾನ (Air New Zealand) ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (Air New Zealand CEO) ಮುಂದಿನ ಅಕ್ಟೋಬರ್ ನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸುಮಾರು ಐದು ವರ್ಷಗಳ ಕಾಲ ನಿಖಿಲ್ ನ್ಯೂಜಿಲೆಂಡ್ ವಿಮಾನಯಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಇವರು ಪ್ರಸ್ತುತ ಏರ್‌ಲೈನ್‌ನ ಮುಖ್ಯ ಡಿಜಿಟಲ್ ಅಧಿಕಾರಿಯಾಗಿದ್ದಾರೆ. ಇಲ್ಲೊಂದು ಆಶ್ಚರ್ಯಕರ ಸಂಗತಿ ಎಂದರೆ ಈಗ ಭಾರತದ ವಿಮಾನಯಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ನ್ಯೂಜಿಲೆಂಡ್‌ನ ಕ್ಯಾಂಪ್‌ಬೆಲ್ ವಿಲ್ಸನ್ ಅಧಿಕಾರದಲ್ಲಿದ್ದಾರೆ.

ಭಾರತೀಯ ಮೂಲದ ನಿಖಿಲ್ ರವಿಶಂಕರ್ ಏರ್ ನ್ಯೂಜಿಲೆಂಡ್‌ನಲ್ಲಿ ಸುಮಾರು ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಏರ್ ನ್ಯೂಜಿಲೆಂಡ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗ್ರೆಗ್ ಫೋರನ್ ಆಗಿದ್ದು, ಅವರ ಉತ್ತರಾಧಿಕಾರಿಯಾಗಿ ನಿಖಿಲ್ ರವಿಶಂಕರ್ ಅವರು ಅಕ್ಟೋಬರ್ 20ರಂದು ಅಧಿಕಾರ ವಹಿಸಲಿದ್ದಾರೆ. ಪ್ರಸ್ತುತ ನಿಖಿಲ್ ಅವರು ನ್ಯೂಜಿಲೆಂಡ್ ಏರ್‌ಲೈನ್‌ನ ಮುಖ್ಯ ಡಿಜಿಟಲ್ ಅಧಿಕಾರಿಯಾಗಿದ್ದಾರೆ.

ನ್ಯೂಜಿಲೆಂಡ್‌ನ ವಾಯುಯಾನ ವಲಯ ಮತ್ತು ವಿಮಾನಯಾನ ಸಂಸ್ಥೆಯ ಬಗ್ಗೆ ಅಪಾರ ತಿಳುವಳಿಕೆಯನ್ನು ಹೊಂದಿರುವ ನಿಖಿಲ್ ಅವರು ಏರ್‌ಲೈನ್‌ನ ತಂತ್ರಜ್ಞಾನದ ಬೆನ್ನೆಲುಬು ಎಂದು ಏರ್ ನ್ಯೂಜಿಲೆಂಡ್ ಜುಲೈ 30ರಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ರವಿಶಂಕರ್ ಅವರು ಈ ಹಿಂದೆ ಇಂಧನ ಕಂಪನಿ ವೆಕ್ಟರ್ ನ್ಯೂಜಿಲೆಂಡ್‌ನಲ್ಲಿ ಮುಖ್ಯ ಡಿಜಿಟಲ್ ಅಧಿಕಾರಿಯಾಗಿ, ಹಾಂಗ್ ಕಾಂಗ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಾದ್ಯಂತ ಆಕ್ಸೆಂಚರ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ನ್ಯೂಜಿಲೆಂಡ್ ವಿಮಾನಯಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಅಧಿಕಾರ ವಹಿಸಲಿರುವ ನಿಖಿಲ್ ಅವರು ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಏರ್ ನ್ಯೂಜಿಲೆಂಡ್ ಅನ್ನು ಮುನ್ನಡೆಸಲು ಅವಕಾಶ ಸಿಕ್ಕಿರುವುದಕ್ಕೆ ರೋಮಾಂಚನವಾಗಿದೆ. ವಿಮಾನಯಾನ ಸಂಸ್ಥೆಗಳ ನಿರ್ವಹಣೆ ಅತ್ಯಂತ ಸಂಕೀರ್ಣವಾದ ಕಾರ್ಯವಾಗಿದೆ. ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ಸುರಕ್ಷತೆಯು ಆಧಾರವಾಗಿದೆ ಎಂದು ಹೇಳಿದರು.

ಏರ್ ನ್ಯೂಜಿಲೆಂಡ್ ಒಟ್ಟು 49 ದೇಶೀಯ ಮತ್ತು ಅಂತಾರಾಷ್ಟ್ರೀಯ ನಿಲ್ದಾಣಗಳನ್ನು ಹೊಂದಿದೆ. ದಿನಕ್ಕೆ 400ಕ್ಕೂ ಹೆಚ್ಚು ವಿಮಾನಗಳನ್ನು ಕಾರ್ಯನಿರ್ವಹಿಸುತ್ತವೆ. ನ್ಯೂಜಿಲೆಂಡ್ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್ ಮಾಹಿತಿ ಪ್ರಕಾರ ಬೋಯಿಂಗ್ 777ಎಸ್, 787ಎಸ್ , ಏರ್‌ಬಸ್ 320ಎಸ್, ATRಎಸ್ ಮತ್ತು ಕ್ಯೂ300ಎಸ್ ಸೇರಿದಂತೆ 100ಕ್ಕೂ ಹೆಚ್ಚು ವಿಮಾನಗಳನ್ನು ಇದು ಹೊಂದಿದೆ.

ಕಳೆದ ಮಾರ್ಚ್ ನಲ್ಲಿ ಏರ್ ನ್ಯೂಜಿಲೆಂಡ್ ಮತ್ತು ಏರ್ ಇಂಡಿಯಾ ಹೊಸ ವಿಮಾನಗಳನ್ನು ಪರಿಚಯಿಸಲು ಮುಂದಾಗಿತ್ತು. ಇದಕ್ಕೆ ಸಂಬಂಧಿಸಿ ಅನುಮೋದನೆ ಪ್ರಕ್ರಿಯೆಗಳು ನಡೆಯಲಿದೆ. ಇದು ಯಶಸ್ವಿಯಾದರೆ ಎರಡು ದೇಶಗಳ ನಡುವೆ 2028ರ ಅಂತ್ಯದ ವೇಳೆಗೆ ನೇರ ವಿಮಾನಯಾನ ಸೇವೆಯನ್ನು ಪ್ರಾರಂಭವಾಗಲಿದೆ.

ಭಾರತೀಯರು ಪ್ರಸ್ತುತ ನ್ಯೂಜಿಲೆಂಡ್ ಗೆ ತೆರಳಬೇಕಾದರೆ ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ನಗರಗಳಿಂದ ಏರ್ ಇಂಡಿಯಾದಲ್ಲಿ ಸಿಡ್ನಿ, ಮೆಲ್ಬೋರ್ನ್, ಸಿಂಗಾಪುರದಕ್ಕೆ ತೆರಳಿ ಅಲ್ಲಿಂದ ನ್ಯೂಜಿಲೆಂಡ್ ನ ಆಕ್ಲೆಂಡ್, ಕ್ರೈಸ್ಟ್‌ಚರ್ಚ್, ವೆಲ್ಲಿಂಗ್ಟನ್ ಮತ್ತು ಕ್ವೀನ್ಸ್‌ಟೌನ್‌ಗೆ ಹೋಗಬಹುದಾಗಿದೆ.

ಇದನ್ನೂ ಓದಿ: Fake Doctor: ವೈದ್ಯನೂ ಅಲ್ಲ, ಪ್ರಮಾಣ ಪತ್ರವೂ ಇಲ್ಲ; ಹೃದಯ ಶಸ್ತ್ರಚಿಕಿತ್ಸೆ ಮಾಡಿ ಐವರ ಪ್ರಾಣ ತೆಗೆದ ನಕಲಿ ಡಾಕ್ಟರ್‌

ಒಟ್ಟಿನಲ್ಲಿ ವಿಶ್ವದ ಅತ್ಯಂತ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ನ್ಯೂಜಿಲೆಂಡ್ ವಿಮಾನಯಾನ ಸಂಸ್ಥೆಗೆ ಭಾರತೀಯ ಮೂಲದ ತಂತ್ರಜ್ಞಾನ ನಾಯಕರೊಬ್ಬರು ಏರಿರುವುದು ಒಂದು ಮೈಲಿಗಲ್ಲಾಗಿದೆ.