ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Plane Hijack: ಬಾಲಿವುಡ್ ತಾರೆಯ ಸಹಿತ ವಿಮಾನ ಅಪಹರಿಸಿದ್ದರಂತೆ ನೇಪಾಳದ ನೂತನ ಪ್ರಧಾನಿಯ ಪತಿ

ನಿನ್ನೆಯಷ್ಟೇ ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸುಶೀಲಾ ಕರ್ಕಿ ಅವರ ಪತಿ ಬಾಲಿವುಡ್ ತಾರೆಯೊಂದಿಗೆ ವಿಮಾನವನ್ನು ಅಪಹರಿಸಿದ್ದರು. ಇದು 1973 ಘಟನೆ. ಈ ಅಪಹರಣವನ್ನು ನಾಲ್ಕನೇ ಬಾರಿ ನೇಪಾಳದ ಪ್ರಧಾನಿಯಾಗಲು ಹೊರಟಿದ್ದ ಗಿರಿಜಾ ಪ್ರಸಾದ್ ಕೊಯಿರಾಲ ರೂಪಿಸಿದ್ದು, ಈ ವಿಮಾನದಲ್ಲಿ ಬಾಲಿವುಡ್ ನಟಿ ಮಾಲಾ ಸಿನ್ಹಾ ಕೂಡ ಇದ್ದರು.

ನೇಪಾಳದ ನೂತನ ಪ್ರಧಾನಿ ಅವರ ಪತಿ ವಿಮಾನ ಅಪಹರಿಸಿದ್ದರು.. !

-

ಕಠ್ಮಂಡು: ನೇಪಾಳದ ನೂತನ ಪ್ರಧಾನಿಯಾಗಿ (Nepals new Prime Minister) ಅಧಿಕಾರ ಸ್ವೀಕರಿಸಿದ ಸುಶೀಲಾ ಕರ್ಕಿ (Sushila Karki) ಅವರ ಪತಿ ಒಂದು ಕಾಲದಲ್ಲಿ ಬಾಲಿವುಡ್ ನಟಿ (Bollywood actress) ಸಮೇತ ಒಂದು ವಿಮಾನವನ್ನು ಅಪಹರಣ ಮಾಡಿದ್ದರು. ಈ ಅಪಹರಣ ನಡೆದಿದ್ದು ಅವರ ಹಣಕಾಸು ವ್ಯವಸ್ಥೆ ಮಾಡಲು. ಇದು 1973ರಲ್ಲಿ ನಡೆದ ಘಟನೆಯಾದರೂ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಹೆಸರುವಾಸಿಯಾಗಿದ್ದ ಸುಶೀಲಾ ಕರ್ಕಿ (Sushila Karki) ಅವರು ಇದೀಗ ದೇಶದ ಪ್ರಧಾನಿಯಾಗಿ (Prime Minister) ಅಧಿಕಾರ ಸ್ವೀಕಾರ ಮಾಡಿದ ಬಳಿಕ ಈ ಘಟನೆ ಹೆಚ್ಚು ಚರ್ಚೆಯಲ್ಲಿದೆ.

ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಶುಕ್ರವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆಯ ಬಳಿಕ ಅವರನ್ನು ನೇಮಕ ಮಾಡಲಾಗಿದೆ. ದೇಶದ ಅತ್ಯುನ್ನತ ಹುದ್ದೆಗೆ ಕರ್ಕಿ ಅವರು ನೇಮಕವಾದ ಬಳಿಕ 1973ರಲ್ಲಿ ಒಂದು ಘಟನೆ ಚರ್ಚೆಯಲ್ಲಿದೆ. ಆ ಕಾಲದಲ್ಲಿ ಅವರ ಪತಿ ದುರ್ಗಾ ಪ್ರಸಾದ್ ಸುಬೇದಿ ಅವರು ವಿಮಾನ ಅಪಹರಿಸಿದ್ದರು.

ಅಂದು ಏನಾಗಿತ್ತು?

ನೇಪಾಳಿ ಕಾಂಗ್ರೆಸ್‌ನ ಯುವ ನಾಯಕರಾಗಿದ್ದ ದುರ್ಗಾ ಪ್ರಸಾದ್ ಸುಬೇದಿ ಅವರು 1973ರ ಜೂನ್ 10ರಂದು ದೇಶದ ಮೊದಲ ಮತ್ತು ಏಕೈಕ ವಿಮಾನ ಅಪಹರಣದ ಮೂವರ ತಂಡವನ್ನು ಮುನ್ನಡೆಸಿದರು. ಈ ಯೋಜನೆಯನ್ನು ರೂಪಿಸಿದ್ದು ನಾಲ್ಕನೇ ಬಾರಿ ನೇಪಾಳದ ಪ್ರಧಾನಿಯಾಗಲು ಹೊರಟಿದ್ದ ಗಿರಿಜಾ ಪ್ರಸಾದ್ ಕೊಯಿರಾಲ. ಅಪಹರಣಗೊಂಡ ಈ ವಿಮಾನದಲ್ಲಿ ಬಾಲಿವುಡ್ ನಟಿ ಮಾಲಾ ಸಿನ್ಹಾ ಕೂಡ ಇದ್ದರು.

ಸುಬೇದಿ ಅವರ ಆತ್ಮಚರಿತ್ರೆ ಬಿಮನ್ ಬಿದ್ರೋಹದಲ್ಲಿ ಹೇಳಿರುವಂತೆ, ಬಿರಾಟ್‌ನಗರದಿಂದ ಕಠ್ಮಂಡುವಿಗೆ ತೆರಳುತ್ತಿದ್ದ ರಾಯಲ್ ನೇಪಾಳ ಏರ್‌ಲೈನ್ಸ್ ವಿಮಾನದ ಅಪಹರಣಕ್ಕೆ ದುರ್ಗಾ ಪ್ರಸಾದ್ ಸುಬೇದಿ, ಗಿರಿಜಾ ಪ್ರಸಾದ್ ಕೊಯಿರಾಲ ಸೇರಿದಂತೆ ಕೆಲವರು ಯೋಜನೆ ರೂಪಿಸಿದ್ದರು. ಇದಕ್ಕೆ ಮುಖ್ಯ ಕಾರಣ ರಾಜ ಮಹೇಂದ್ರ ಅವರ ನೇತೃತ್ವದ ಸರ್ಕಾರವನ್ನು ಉರುಳಿಸುವುದಾಗಿತ್ತು. ಬಹು-ಪಕ್ಷ ಪ್ರಜಾಪ್ರಭುತ್ವವನ್ನು ಮರು ಸ್ಥಾಪಿಸಲು ಸಶಸ್ತ್ರ ಹೋರಾಟಕ್ಕಾಗಿ ಹಣ ಪಡೆಯುವುದು ಇದರ ಉದ್ದೇಶವಾಗಿತ್ತು.

ಈ ವಿಮಾನದಲ್ಲಿ ಸ್ಟೇಟ್ ಬ್ಯಾಂಕಿನ ನಾಲ್ಕು ಮಿಲಿಯನ್ ನೇಪಾಳಿ ರೂಪಾಯಿಗಳಿದ್ದವು. ಅವರು ಈ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಪ್ರಯಾಣಿಕರಿಗೆ ಅಪಹರಣಕಾರರು ಯಾವುದೇ ಅಪಾಯ ಮಾಡಲಿಲ್ಲ. ಈ ವಿಮಾನವನ್ನು ಬಿಹಾರದಲ್ಲಿ ಇಳಿಸಲಾಗಿತ್ತು. ಭಾರತೀಯ ಪೊಲೀಸರು ಅಪಹರಣಕಾರರು ಮತ್ತು ಸಹ-ಸಂಚುಕೋರರನ್ನು ಬಂಧಿಸಿದರು. ಸುಬೇದಿ ಅವರು ನೇಪಾಳಕ್ಕೆ ಹೋಗುವ ಮುನ್ನ ಭಾರತದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದರು.

ಇದನ್ನೂ ಓದಿ: Sushila Karki: ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗಿ ಸುಶೀಲಾ ಕರ್ಕಿ ಪ್ರಮಾಣ ವಚನ ಸ್ವೀಕಾರ

ಭಾರತದಲ್ಲಿ ಅಧ್ಯಯನ ಮಾಡಿದ್ದ ಕರ್ಕಿ

ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಭ್ರಷ್ಟಾಚಾರ ಶೂನ್ಯ ಸಹಿಷ್ಣುತೆಗೆ ಹೆಸರುವಾಸಿಯಾಗಿರುವ ಸುಶೀಲಾ ಕರ್ಕಿ ಅವರಿಗೆ ಈಗ 73 ವರ್ಷ. ಭಾರತದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯಾಗಿರುವ ಇವರು 2016 ರಿಂದ 2017ರವರೆಗೆ ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಪ್ರಸ್ತುತ ಪ್ರಧಾನಿಯಾಗಿ ಇವರ ನೇಮಕವು ರಾಜಕೀಯ ಪಕ್ಷಗಳು ಹಾಗೂ ಯುವ ನೇತೃತ್ವದ ಜೆನ್ ಝಡ್ ಪ್ರತಿಭಟನಾಕಾರರ ಒಮ್ಮತದ ಆಯ್ಕೆಯಾಗಿದೆ.