POK protest: ಪಿಒಕೆಯಲ್ಲಿ ಪ್ರತಿಭಟನಾಕಾರರ ವಿರುದ್ಧದ ಕ್ರಮವನ್ನು ಮಾಟಗಾತಿಯ ಬೇಟೆಗೆ ಹೋಲಿಸಿದ ಎಎಸಿ ನಾಯಕ ಶೌಕತ್ ನವಾಜ್ ಮಿರ್
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಅವಾಮಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಬಿಸಿ ಕರಾಚಿ ಮತ್ತು ಇಸ್ಲಾಮಾಬಾದ್‌ಗೂ ಹಬ್ಬಿದೆ. ಈ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಸುಮಾರು 12 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಗುಂಡಿನ ಹತ್ಯೆಗೈದ ಬಳಿಕ ಪಾಕಿಸ್ತಾನದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

-

ಇಸ್ಲಾಮಾಬಾದ್: ವಿವಿಧ ಬೇಡಿಕೆಗಳನ್ನು ಪೂರೈಸದ ಕಾರಣ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (Pakistan-occupied Kashmir) ಭುಗಿಲೆದ್ದ ಪ್ರತಿಭಟನೆಯ ಕಾವು ಈಗ ಕರಾಚಿ (Karachi) ಮತ್ತು ಇಸ್ಲಾಮಾಬಾದ್‌ಗೂ (Islamabad) ಹರಡಿವೆ. ಸುಮಾರು 12 ಮಂದಿಯನ್ನು ಪೊಲೀಸರು ಗುಂಡಿಕ್ಕಿ ಕೊಂದ ಬಳಿಕ ಆಡಳಿತದ ವಿರುದ್ಧ ಆಕ್ರೋಶ ಹೆಚ್ಚಾಗಿವೆ. ಅತೀ ದೊಡ್ಡ ಪ್ರತಿಭಟನೆಯ ನೇತೃತ್ವ ವಹಿಸಿರುವ ಅವಾಮಿ ಕ್ರಿಯಾ ಸಮಿತಿ (Awami Action Committee) ನಾಯಕ ಶೌಕತ್ ನವಾಜ್ ಮಿರ್ (Shaukat Nawaz Mir), ಪೊಲೀಸರ ಕಾರ್ಯಾಚರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತನ್ನದೇ ಜನರನ್ನು ಕೊಲ್ಲುವ ಮಾಟಗಾತಿಯರು ಎಂದು ಹೇಳಿದ್ದಾರೆ.
ಇಸ್ಲಾಮಾಬಾದ್ ಬೇಡಿಕೆಗಳನ್ನು ಪೂರೈಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅವಾಮಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕೆಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಇದನ್ನು ಪಾಕಿಸ್ತಾನದಲ್ಲಿ 38 ವರ್ಷಗಳಲ್ಲಿ ನಡೆದಿರುವ ಅತಿದೊಡ್ಡ ಪ್ರತಿಭಟನೆ ಎಂದು ಕರೆಯಲಾಗಿದೆ. ಈ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಸುಮಾರು 12 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಇದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.
🇵🇰 has bestowed favors upon us. There is no enmity with 🇵🇰 The grievance is with the institutions that they brought and placed here an “officer”such that as you eliminated a political party in Punjab,the same way want to eliminate the Kashmiris.
— Ridaa Aghha (@agha1158941) October 3, 2025
Shokat Nawaz Mir #azadkashmir pic.twitter.com/cupiKqjcEm
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ಪಾಕಿಸ್ತಾನದ ಇತರ ಭಾಗಗಳಿಗೂ ಹರಡಿದ್ದು, ಕರಾಚಿಯಲ್ಲಿ ನೂರಾರು ಜನರು ಬೀದಿಗಿಳಿದಿದ್ದಾರೆ. ಇಸ್ಲಾಮಾಬಾದ್‌ನಲ್ಲಿರುವ ರಾಷ್ಟ್ರೀಯ ಪ್ರೆಸ್ ಕ್ಲಬ್‌ಗೆ ಗುರುವಾರ ನುಗ್ಗಿರುವ ಪೊಲೀಸರು, ಪಿಒಕೆಯಲ್ಲಿ ನಡೆದ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪತ್ರಕರ್ತರು ಮತ್ತು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದರು.
ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶೌಕತ್ ನವಾಜ್ ಮಿರ್, ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಅವರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ್ದು, ಈ ಸರ್ಕಾರ ಮಾಟಗಾತಿಯಂತೆ ಬೇಟೆ ನಡೆಸುತ್ತಿದೆ. ಅದು ತನ್ನದೇ ಜನರನ್ನು ಕೊಲ್ಲುತ್ತಿದೆ ಎಂದು ಹೇಳಿದರು.
ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿಗೆ ಸೇರಿದ ವಕೀಲರ ಗುಂಪು ಪ್ರೆಸ್ ಕ್ಲಬ್ ಹೊರಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸ್ ತಂಡ ಅವರ ಮೇಲೆ ದಾಳಿ ನಡೆಸಿತ್ತು. ರಕ್ಷಣೆಗಾಗಿ ಪ್ರೆಸ್ ಕ್ಲಬ್ ಒಳಗೆ ನುಗ್ಗಿದವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿತ್ತು.
ಇದನ್ನೂ ಓದಿ: Physical Abusing: ಕಾಮತೃಷೆಗೆ ಮಗನನ್ನೇ ಬಳಸಿಕೊಂಡ ಪಾಪಿ ತಾಯಿ- ಲೈಂಗಿಕ ದೌರ್ಜನ್ಯದ ವೇಳೆ ಪತಿ ಕೈಗೆ ಸಿಕ್ಕಿ ಬಿದ್ಳು!
ಯಾಕಾಗಿ ಪ್ರತಿಭಟನೆ?
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಗೆ ಮೀಸಲಾಗಿರುವ 12 ವಿಧಾನಸಭಾ ಸ್ಥಾನಗಳನ್ನು ರದ್ದುಗೊಳಿಸುವುದರ ಜತೆಗೆ ರಾಜಕಾರಣಿಗಳಿಗೆ ನೀಡಲಾಗಿರುವ ಸವಲತ್ತುಗಳು ಕೊನೆಗೊಳಿಸಬೇಕು ಎಂಬುದು ಪ್ರತಿಭಟನಾಕಾರರು ಬೇಡಿಕೆ.
ಮೀಸಲಾತಿಯು ಪ್ರಾತಿನಿಧಿಕ ಆಡಳಿತವನ್ನು ದುರ್ಬಲಗೊಳಿಸುತ್ತದೆ ಎಂದಿರುವ ಪ್ರತಿಭಟನಾಕಾರರು ಇದರೊಂದಿಗೆ ದೀರ್ಘಕಾಲದಿಂದ ವಿಳಂಬವಾಗಿದ್ದ ಸುಧಾರಣೆಗಳ ಅನುಷ್ಠಾನಗೊಳಿಸಲು ಒತ್ತಾಯಿಸುತ್ತಿದ್ದಾರೆ.
ಪ್ರತಿಭಟನಾಕಾರರ ಒಟ್ಟು 38 ಪ್ರಮುಖ ಬೇಡಿಕೆಗಳನ್ನು ಪೂರೈಸುವಲ್ಲಿ ಸರ್ಕಾರ ವಿಫಲವಾದ ಕಾರಣ ಪ್ರತಿಭಟನೆ ಆರಂಭವಾಗಿದ್ದು, ಇವರ ಮೇಲೆ ಮಿಲಿಟರಿ ಬಲ ಪ್ರಯೋಗದಿಂದ ಇದು ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಗಿದೆ.