ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI: ಶತಕ ಸಿಡಿಸಿದ ಬಳಿಕ ಶಿಳ್ಳೆ ಹೊಡೆದು ಸಂಭ್ರಮಿಸಲು ಕಾರಣ ತಿಳಿಸಿದ ಕೆಎಲ್‌ ರಾಹುಲ್‌!

ವೆಸ್ಟ್ ಇಂಡೀಸ್ ವಿರುದ್ಧದ ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ ಬಳಿಕ ಭಾರತ ತಂಡದ ಆರಂಭಿಕ ಕೆಎಲ್‌ ರಾಹುಲ್ ಶಿಳ್ಳೆ ಹೊಡೆಯುವ ಮೂಲಕ ವಿಭಿನ್ನವಾಗಿ ಸಂಭ್ರಮಿಸಿದರು. ಎರಡನೇ ದಿನದಾಟದ ಬಳಿಕ ತಾವು ಈ ರೀತಿ ವಿಭಿನ್ನವಾಗಿ ಸಂಭ್ರಮಸಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಶತಕದ ಬಳಿಕ ಶಿಳ್ಳೆ ಹೊಡೆದು ಸಂಭ್ರಮಿಸಲು ಕಾರಣ ತಿಳಿಸಿದ ರಾಹುಲ್‌!

ಶತಕದ ಬಳಿಕ ಶಿಳ್ಳೆ ಹೊಡೆದು ಸಂಭ್ರಮಿಸಲು ಕಾರಣ ತಿಳಿಸಿದ ಕೆಎಲ್‌ ರಾಹುಲ್‌. -

Profile Ramesh Kote Oct 3, 2025 7:30 PM

ಅಹಮದಾಬಾದ್: ವೆಸ್ಟ್‌ ಇಂಡೀಸ್‌ ವಿರುದ್ದ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ(IND vs WI) ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ (KL Rahul), ತವರಿನಲ್ಲಿ ಎರಡನೇ ಶತಕವನ್ನು ಬಾರಿಸಿದರು. ಶತಕದ ಬಳಿಕ ಅವರು ಶಿಳ್ಳೆ ಹೊಡೆಯುವ ಮೂಲಕ ವಿಭಿನ್ನವಾಗಿ ಸಂಭ್ರಮಿಸಿದ್ದರು. ಇವರು ಈ ರೀತಿ ಸಂಭ್ರಮಿಸಿದ್ದು ಇದೇ ಮೊದಲು. ಅಂದ ಹಾಗೆ ಎರಡನೇ ದಿನದಾಟದ ಬಳಿಕ ತಾವು ರೀತಿ ಸಂಭ್ರಮಿಸಿಲು ಕಾರಣವನ್ನು ರಿವೀಲ್‌ ಮಾಡಿದರು. ನನ್ನ ಈ ಶತಕ ತಮ್ಮ ಪತ್ನಿ ಆಥಿಯಾ ಶೆಟ್ಟಿ ಹಾಗೂ ಪುತ್ರಿ ಎವಾರಾಗೆ (Evaarah) ಸಮರ್ಪಿಸಿದ್ದೇನೆಂದು ಹೇಳಿದ್ದಾರೆ.

ಮೊದಲನೇ ದಿನದಾಟದಂತೆ ಎರಡನೇ ದಿನವೂ ರಾಹುಲ್‌ ತಮ್ಮ ಕೌಶಲವನ್ನು ಮುಂದುವರಿಸಿದರು. ಅವರು ಆಡಿದ 190 ಎಸೆತಗಳಲ್ಲಿ 12 ಫೋರ್​ಗಳೊಂದಿಗೆ ಶತಕ ಬಾರಿಸಿದರು. ಇದು ಟೆಸ್ಟ್ ಕ್ರಿಕೆಟ್​ನಲ್ಲಿ ಇವರ 11ನೇ ಶತಕವಾಗಿದೆ. 2016ರ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ ರಾಹುಲ್ ಅವರ ಮೊದಲ ತವರಿನ ಟೆಸ್ಟ್‌ ಶತಕ ಇದಾಗಿದೆ. ಎರಡನೇ ದಿನದಾಟದ ಅಂತ್ಯಕ್ಕೆ ತಮ್ಮ ವಿಶೇಷ ಸಂಭ್ರಮದ ಬಗ್ಗೆ ಕೆಎಲ್‌ ರಾಹುಲ್‌ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಅವರು, "ಇದಕ್ಕೆ ನನ್ನ ಮಗಳು ಕಾರಣ," ಎಂದು ತಿಳಿಸಿದರು. ಹಾಗೆಯೇ ತಮ್ಮ ಈ ಶತಕವನ್ನು ಪುತ್ರಿ ಎವಾರಾಗೆ ಸಮರ್ಪಿಸಿದ್ದೇನೆ ಎಂದು ರಾಹುಲ್ ತಿಳಿಸಿದ್ದಾರೆ.

IND vs WI: ರಾಹುಲ್‌, ಜುರೆಲ್‌, ಜಡೇಜಾ ಶತಕಗಳ ಬಲದಿಂದ ದೊಡ್ಡ ಮುನ್ನಡೆಯತ್ತ ಭಾರತ!

ಎರಡನೇ ದಿನದಾಟ ಮುಗಿದ ಬಳಿಕ ತಮ್ಮ ಅಮೋಘ ಪ್ರದರ್ಶನದ ಬಗ್ಗೆ ಮಾತನಾಡಿದ ಕೆ ಎಲ್ ರಾಹುಲ್, "ಕಳೆದ ವಾರ ನಾನು ಒಂದು ಪಂದ್ಯ ಆಡಿದ್ದೆ. 5-6 ವಾರಗಳ ಕಾಲ ನಾನು ಮೈದಾನದಲ್ಲಿ ಇರಲಿಲ್ಲವಾದ್ದರಿಂದ ಅಲ್ಲಿ ಆಡುವಾಗ ಸ್ವಲ್ಪ ಆತಂಕವಿತ್ತು. ಹಳೆಯ ಲಯಕ್ಕೆ ಮರಳಲು, ರನ್ ಗಳಿಸಲು ಮತ್ತು ಮೈದಾನದಲ್ಲಿ ಸಮಯ ಕಳೆಯಲು ಮತ್ತು 4 ದಿನದಿಂದ 5 ದಿನಗಳ ಪಂದ್ಯಕ್ಕೆ ಬರುವುದು ದೈಹಿಕವಾಗಿ ನಿಜವಾಗಿಯೂ ಸ್ವಲ್ಪ ಸವಾಲಿನಿಂದ ಕೂಡಿರುತ್ತದೆ," ಎಂದು ಹೇಳಿದ್ದಾರೆ.

"ಇಲ್ಲಿನ ಕಂಡೀಷನ್ಸ್‌ ದೈಹಿಕವಾಗಿ ತುಂಬಾ ಸವಾಲಿನಿಂದ ಕೂಡಿದೆ. ಕಳೆದ ವಾರ ನಾನು ಆಡಿದ್ದ ಪಂದ್ಯ ಕೂಡ ಕೆಟ್ಟದಾಗಿತ್ತು. ದೈಹಿಕವಾಗಿ ಇದು ಸವಾಲಿನದಾಗಿದೆ. ಆದರೆ, ಕ್ರೀಸ್‌ನಲ್ಲಿ ಸ್ವಲ್ಪ ಸಮಯವನ್ನು ಕಳೆದು ಬ್ಯಾಟ್‌ ಮಾಡಿದ್ದು ತುಂಬಾ ಖುಷಿಯನ್ನು ತಂದುಕೊಟ್ಟಿದೆ," ಎಂದು ಸಂತಸ ವ್ಯಕ್ತಪಡಿಸಿದ್ದಾರೆ.



"ನನ್ನ ಬ್ಯಾಟಿಂಗ್ ಅನ್ನು ನಾನು ನಿಜವಾಗಿಯೂ ಆನಂದಿಸುತ್ತಿದ್ದೇನೆ. ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುತ್ತಿದ್ದೇನೆ. ಇಂಗ್ಲೆಂಡ್‌ ಮೋಜಿನಿಂದ ಕೂಡಿತ್ತು. ಅಲ್ಲಿ ರನ್ ಗಳಿಸುವುದು ನಿಮಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ಕೆಲ ರನ್‌ಗಳ ಮೂಲಕ ಬಂದಿರುವುದು ನೀವು ನೆರವಾಗುತ್ತದೆ ಮತ್ತು ಸರಣಿಯ ನಂತರ ದೀರ್ಘ ವಿರಾಮದ ನಂತರ ತಾಜಾತನವನ್ನು ಅನುಭವಿಸುತ್ತಿದ್ದೇನೆ ಮತ್ತು ನಾನು ಹಿಂತಿರುಗಿರುವುದನ್ನು ನಿಜವಾಗಿಯೂ ಆನಂದಿಸಿದೆ," ಎಂದು ರಾಹುಲ್ ತಿಳಿಸಿದ್ದಾರೆ.