ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದಲ್ಲಿ ಇವಿ ಅಳವಡಿಕೆ ತ್ವರಿತಗೊಳಿಸಲು ಐಐಎಫ್‌ಎಲ್ ಸಮಸ್ತ ಫೈನಾನ್ಸ್‌ ಜೊತೆಗೆ ಕೈನೆಟಿಕ್ ಗ್ರೀನ್ ಒಡಂಬಡಿಕೆ

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಕೈನೆಟಿಕ್ ಗ್ರೀನ್ ಎನರ್ಜಿ ಆಂಡ್ ಪವರ್ ಸೊಲ್ಯೂಶನ್ಸ್ ಲಿಮಿಟೆಡ್ ಸಂಸ್ಥೆಯು ದೇಶದ ಪ್ರಮುಖ ಎನ್‌ಬಿಎಫ್‌ಸಿ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಯಾದ ಐಐಎಫ್‌ಎಲ್ ಸಮಸ್ತ ಫೈನಾನ್ಸ್ ಲಿಮಿಟೆಡ್ (ಐಎಸ್‌ಎಫ್‌ಎಲ್) ಜೊತೆ ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದೆ.

ಐಐಎಫ್‌ಎಲ್ ಸಮಸ್ತ ಫೈನಾನ್ಸ್‌ ಜೊತೆಗೆ ಕೈನೆಟಿಕ್ ಗ್ರೀನ್ ಒಡಂಬಡಿಕೆ

Ashok Nayak Ashok Nayak Aug 26, 2025 11:24 PM

ಬೆಂಗಳೂರು: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಕೈನೆಟಿಕ್ ಗ್ರೀನ್ ಎನರ್ಜಿ ಆಂಡ್ ಪವರ್ ಸೊಲ್ಯೂಶನ್ಸ್ ಲಿಮಿಟೆಡ್ ಸಂಸ್ಥೆಯು ದೇಶದ ಪ್ರಮುಖ ಎನ್‌ಬಿಎಫ್‌ಸಿ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಯಾದ ಐಐಎಫ್‌ಎಲ್ ಸಮಸ್ತ ಫೈನಾನ್ಸ್ ಲಿಮಿಟೆಡ್ (ಐಎಸ್‌ಎಫ್‌ಎಲ್) ಜೊತೆ ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದೆ. ಈ ಸಹಭಾಗಿತ್ವವು ನಗರ, ಸಣ್ಣ ನಗರ ಮತ್ತು ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ ಸಂಘಟಿತ ಮತ್ತು ಸ್ಪರ್ಧಾತ್ಮಕ ಫೈನಾನ್ಸಿಂಗ್ ಉತ್ಪನ್ನಗಳನ್ನು ಒದಗಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗಿಸುವ ಗುರಿ ಹೊಂದಿದೆ.

ಈ ಪಾಲುದಾರಿಕೆಯು ಸೆಪ್ಟೆಂಬರ್ 2025 ರಿಂದ ಆರಂಭವಾಗಲಿದ್ದು, ಹಬ್ಬದ ಸೀಸನ್‌ ನ ಹೆಚ್ಚುವರಿ ಗ್ರಾಹಕರ ಬೇಡಿಕೆಯನ್ನು ಪೂರೈಸಲಿದೆ. ಈ ಒಡಂಬಡಿಕೆಯಡಿ, ಐಎಸ್‌ಎಫ್‌ಎಲ್ ಸಂಸ್ಥೆಯು ಕೈನೆಟಿಕ್ ಗ್ರೀನ್‌ ನ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಮಾನ್ಯತೆ ಪಡೆದ ಫೈನಾನ್ಸಿ ಯರ್ ಆಗಿ ಕಾರ್ಯನಿರ್ವಹಿಸಲಿದ್ದು, ಕರ್ನಾಟಕ, ಬಿಹಾರ, ಗುಜರಾತ್, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 13 ರಾಜ್ಯಗಳ 370 ಶಾಖೆಗಳ ವ್ಯಾಪಕ ಫೈನಾನ್ಸಿಂಗ್ ಜಾಲದ ಮೂಲಕ ರಿಟೇಲ್ ಫೈನಾನ್ಸಿಂಗ್ ಉತ್ಪನ್ನಗಳನ್ನು ಒದಗಿಸಲಿದೆ.

ಇದನ್ನೂ ಓದಿ: Tata Motors: ಕೇವಲ ಒಂದೇ ವರ್ಷದಲ್ಲಿ ಉ.ಪ್ರದೇಶದ ಯುಪಿಎಸ್‌ಆರ್‌ಟಿಸಿಯಿಂದ ಮೂರನೇ ಬಾರಿಗೆ ಬಸ್ ಚಾಸಿಸ್ ಆರ್ಡರ್ ಅನ್ನು ಗೆದ್ದ ಟಾಟಾ ಮೋಟಾರ್ಸ್

ಈ ಒಡಂಬಡಿಕೆಯು ಐಎಸ್‌ಎಫ್‌ಎಲ್‌ ನ 2,00,000ಕ್ಕೂ ಹೆಚ್ಚು ಪ್ರೀ ಕ್ವಾಲಿಫೈಡ್ ಗ್ರಾಹಕರಿಗೆ ಕೈನೆಟಿಕ್ ಗ್ರೀನ್‌ ನ ಉತ್ಪನ್ನಗಳನ್ನು ತಲುಪಿಸುವ ಗುರಿಯನ್ನು ಹೊಂದಿದ್ದು, ಜಂಟಿ ಮಾರ್ಕೆಟಿಂಗ್ ಚಟುವಟಿಕೆಗಳು ಮತ್ತು ಕೋ-ಬ್ರಾಂಡೆಡ್ ಪ್ರಚಾರ ಕಾರ್ಯಕ್ರಮಗಳ ಮೂಲಕ ಎಲ್ಲರಿಗೂ ಈ ಸೌಲಭ್ಯ ಒದಗಿಸಲು ಮತ್ತು ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಫೈನಾನ್ಸಿಂಗ್ ಲಭ್ಯತೆಯನ್ನು ಬಲಪಡಿ ಸಲು ಯೋಜಿಸಲಾಗಿದೆ.

ಕೈನೆಟಿಕ್ ಗ್ರೀನ್ 600ಕ್ಕೂ ಹೆಚ್ಚು ಡೀಲರ್‌ಗಳ ವ್ಯಾಪಕ ಜಾಲ ಮತ್ತು 1,50,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದ ಯಶಸ್ವಿ ದಾಖಲೆಯನ್ನು ಹೊಂದಿದ್ದು, ಈ ಒಡಂಬಡಿಕೆಯನ್ನು ಬಲಪಡಿಸುತ್ತದೆ. ಇದರ ಪ್ರಮುಖ ಉತ್ಪನ್ನಗಳಲ್ಲಿ ಇ-ಲೂನಾ ಇ2ಡಬ್ಲ್ಯೂ (ಬಿಟುಸಿ ಮತ್ತು ಬಿಟುಬಿ ಗ್ರಾಹಕರಿಗೆ ಸೂಕ್ತವಾದ ಬಹು-ಉಪಯೋಗಿ ವಾಹನ), ಇ-ಝುಲು ಇ2ಡ ಬ್ಲ್ಯೂ ಸ್ಕೂಟರ್ (ಸುಧಾರಿತ ಫೀಚರ್ ಗಳು ಮತ್ತು ಸೌಕರ್ಯವನ್ನು ಒದಗಿಸುವ ವಾಹನ) ಮತ್ತು ಸಫರ್ ಸರಣಿಯ ಇ3ಡಬ್ಲ್ಯೂ ಕಾರ್ಗೋ ಮತ್ತು ಪ್ಯಾಸೆಂಜರ್ ವಾಹನಗಳು (ಕಾರ್ಯಾಚರಣೆಯ ಉತ್ಕೃಷ್ಟತೆಯನ್ನು ನೀಡುವ ವಾಹನಗಳು) ಸೇರಿವೆ.

ಈ ಒಡಂಬಡಿಕೆಯು ಜನರಿಗೆ ಸುಸ್ಥಿರ ಸಾರಿಗೆಗೆ ಸುಲಭವಾಗಿ ಬದಲಾಯಿಸಲು ಅನುವು ಮಾಡಿ ಕೊಡುತ್ತದೆ, ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಸುಲಭವಾಗಿ ಮತ್ತು ವೈಶಿಷ್ಟ್ಯಯುಕ್ತ ವಾಗಿಸುವ ಮೂಲಕ, ದೊಡ್ಡ ವರ್ಗದ ಜನರನ್ನು ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಅಳವಡಿಸಿ ಕೊಳ್ಳಲು ಪ್ರೋತ್ಸಾಹಿಸುತ್ತದೆ ಮತ್ತು ಭಾರತದಲ್ಲಿ ಇಂಗಾಲಮುಕ್ತ ಕೊನೆಯ ಮೈಲಿ ಸಂಪರ್ಕ ವ್ಯವಸ್ಥೆ ಒದಗಿಸುತ್ತದೆ.

ಈ ಸಹಯೋಗದ ಬಗ್ಗೆ ಮಾತನಾಡಿದ ಕೈನೆಟಿಕ್ ಗ್ರೀನ್‌ ನ ಸಂಸ್ಥಾಪಕ ಮತ್ತು ಸಿಇಓ ಡಾ. ಸುಲಜ್ಜಾ ಫಿರೋಡಿಯಾ ಮೋಟ್ವಾನಿ ಅವರು , “ಐಐಎಫ್‌ಎಲ್ ಸಮಸ್ತ ಫೈನಾನ್ಸ್ ಲಿಮಿಟೆಡ್‌ನೊಂದಿಗೆ ಕೈ ಜೋಡಿಸಲು ನಾವು ಉತ್ಸುಕರಾಗಿದ್ದೇವೆ. ಈ ಸಹಭಾಗಿತ್ವವು ಭಾರತದಾದ್ಯಂತ ಸ್ವಚ್ಛ ಸಾರಿಗೆ ವ್ಯವಸ್ಥೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಕೈನೆಟಿಕ್ ಗ್ರೀನ್‌ ನ ಉತ್ತಮ ಗುಣಮಟ್ಟದ ಎಲೆಕ್ಟ್ರಿಕ್ ವಾಹನಗಳನ್ನು ಐಎಸ್‌ಎಫ್‌ಎಲ್‌ನ ಬಲಿಷ್ಠ ಫೈನಾನ್ಸಿಂಗ್ ವ್ಯವಸ್ಥೆ ಜೊತೆ ಸಂಯೋಜಿ ಸುವ ಮೂಲಕ, ವಿಶೇಷವಾಗಿ ಸಣ್ಣ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ವ್ಯಕ್ತಿಗಳು ಮತ್ತು ವ್ಯಾಪಾರಿಗಳಿಗೆ ಸುಸ್ಥಿರ ಸಾರಿಗೆಯನ್ನು ಸುಲಭವಾಗಿ ಅಳವಡಿಸಿಕೊಳ್ಳಲು ಇರುವ ಫೈನಾನ್ಸಿಂಗ್ ಕೊರತೆಯನ್ನು ತೊಡೆಯುತ್ತೇವೆ. ಈ ಒಡಂಬಡಿಕೆಯು ಪರಿಸರ ಸಂರಕ್ಷಣೆ ಮತ್ತು ಒಳಗೊಳ್ಳು ವಿಕೆಯ ಬೆಳವಣಿಗೆ ಕಡೆಗಿನ ನಮ್ಮ ಬದ್ಧತೆಯನ್ನು ಸಾರುತ್ತದೆ” ಎಂದು ಹೇಳಿದರು.

ಐಐಎಫ್‌ಎಲ್ ಸಮಸ್ತ ಫೈನಾನ್ಸ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ವೆಂಕಟೇಶ್ ಎನ್ ಅವರು ಮಾತನಾಡಿ, “ಐಐಎಫ್‌ಎಲ್ ಸಮಸ್ತದಲ್ಲಿ ಕಡಿಮೆ ಸೇವೆ ಸಿಗುವ ಸಮುದಾಯಗಳಿಗೆ ಅತ್ಯುತ್ತಮ ಪೈನಾನ್ಸಿಂಗ್ ಉತ್ಪನ್ನ ಒಧಗಿಸಿ, ಆ ಮೂಲಕ ಸಬಲೀಕರಣಗೊಳಿಸುವುದು ನಮ್ಮ ಗುರಿಯಾಗಿದೆ. ಕೈನೆಟಿಕ್ ಗ್ರೀನ್‌ ನೊಂದಿಗಿನ ಈ ಒಡಂಬಡಿಕೆಯು ಸುಸ್ಥಿರ ಸಾರಿಗೆಯನ್ನು ಸುಲಭ ವಾದ ಸಾಲ ವ್ಯವಸ್ಥೆ ಜೊತೆ ಸಂಯೋಜಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಸುಲಭ ಮತ್ತು ಕೈಗೆಟಕುವ ಫೈನಾನ್ಸಿಂಗ್ ಒದಗಿಸುವ ಮೂಲಕ, ಹಸಿರು ಸಾರಿಗೆಯನ್ನು ಉತ್ತೇಜಿಸುವುದಷ್ಟೇ ಅಲ್ಲ, ಸಣ್ಣ-ನಗರ ಮತ್ತು ಗ್ರಾಮೀಣ ಭಾರತದಲ್ಲಿ ಆರ್ಥಿಕ ಸಬಲೀಕರಣವನ್ನು ಸಹ ಬೆಂಬಲಿಸುತ್ತೇವೆ” ಎಂದು ಹೇಳಿದರು.

ಈ ಒಡಂಬಡಿಕೆಯು ಎರಡೂ ಸಂಸ್ಥೆಗಳಿಗೆ ಪ್ರಮುಖ ಹೆಜ್ಜೆಯಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ತ್ವರಿತಗೊಳಿಸಲು ಮತ್ತು ಸರ್ಕಾರದ ಸ್ವಚ್ಛ, ಹಸಿರು ಸಾರಿಗೆಯ ದೃಷ್ಟಿಕೋನ ಸಾಧಿಸಲು ಈ ಎರಡೂ ಸಂಸ್ಥೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಲಿವೆ. ಈ ಪಾಲುದಾರಿಕೆ ಮೂಲಕ ಕೈನೆಟಿಕ್ ಗ್ರೀನ್ ಭಾರತದಲ್ಲಿನ ಇವಿ ಉದ್ಯಮದಲ್ಲಿ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದೆ.