TikTok Block: ಟಿಕ್‌ಟಾಕ್ ಮೇಲಿನ ನಿರ್ಬಂಧ ತೆಗೆದು ಹಾಕಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ಘಾಲ್ವಾನ್ ಸಂಘರ್ಷದ ಬಳಿಕ ನಿಷೇದಿಸಲ್ಪಟ್ಟಿರುವ ಚೀನಾ ಮೂಲದ ಅಪ್ಲಿಕೇಶನ್ ಟಿಕ್‌ಟಾಕ್ ಮೇಲಿನ ನಿರ್ಬಂಧವನ್ನು ಭಾರತ ಸರ್ಕಾರ ತೆಗೆದು ಹಾಕಿದೆ ಎನ್ನುವುದು ಸುಳ್ಳು. ಇಂತಹ ಯಾವುದೇ ಆದೇಶವನ್ನು ಭಾರತ ಸರ್ಕಾರವು ಹೊರಡಿಸಿಲ್ಲ. ಇತ್ತೀಚೆಗೆ ಟಿಕ್‌ಟಾಕ್ ಮೇಲಿನ ನಿರ್ಬಂಧವನ್ನು ತೆಗೆದು ಹಾಕಲಾಗಿದೆ ಎನ್ನುವ ಕುರಿತು ಸುಳ್ಳು ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.


ನವದೆಹಲಿ: ಟಿಕ್‌ಟಾಕ್ (TikTok ) ಮೇಲಿನ ನಿರ್ಬಂಧವನ್ನು ತೆಗೆದು ಹಾಕಿದೆ ಎನ್ನುವುದು ಸುಳ್ಳು. ಇಂತಹ ಯಾವುದೇ ಆದೇಶವನ್ನು ಭಾರತ ಸರ್ಕಾರವು ಹೊರಡಿಸಿಲ್ಲ. ಕೆಲವು ದಿನಗಳಿಂದ ಈಚೆಗೆ ಟಿಕ್‌ಟಾಕ್ (China based app) ಮೇಲಿನ ನಿರ್ಬಂಧವನ್ನು (TikTok Block) ತೆಗೆದು ಹಾಕುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಇನ್ನು ಮುಂದೆ ಟಿಕ್‌ಟಾಕ್ ವೆಬ್‌ಸೈಟ್ (TikTok website) ಪ್ರವೇಶಿಸಬಹುದು. ಬಳಕೆದಾರರು ಲಾಗಿನ್ ಆಗಲು ಅಥವಾ ವಿಡಿಯೊಗಳನ್ನು ಅಪ್‌ಲೋಡ್ ಮಾಡಲು ಅಥವಾ ವೀಕ್ಷಿಸಲು ಸಾಧ್ಯವಾಗುತ್ತದೆ ಎನ್ನುವ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಟಿಕ್‌ಟಾಕ್ ಮೇಲಿನ ನಿರ್ಬಂಧವನ್ನು ಭಾರತದಲ್ಲಿ ಇನ್ನೂ ತೆಗೆದುಹಾಕಿಲ್ಲ. ಅದನ್ನು ಇನ್ನೂ ನಿರ್ಬಂಧಿಸಲಾಗಿದೆ. ಹಲವಾರು ಬಳಕೆದಾರರು ವಿಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನ ವೆಬ್‌ಸೈಟ್ ಅನ್ನು ಪ್ರವೇಶಿಸಬಹುದು ಎಂದು ವರದಿ ಮಾಡಿದ್ದು, ಇದು ಸುಳ್ಳು ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.
No lifting of ban on TikTok in india, say Govt sources pic.twitter.com/pwnKJCavoY
— Pankaj Doval (@pankajdoval) August 22, 2025
ಭಾರತ ಸರ್ಕಾರವು ಟಿಕ್‌ಟಾಕ್ ಅನ್ನು ಅನಿರ್ಬಂಧಿಸುವ ಆದೇಶವನ್ನು ಹೊರಡಿಸಿಲ್ಲ. ಅಂತಹ ಸುದ್ದಿ ಸುಳ್ಳು ಮತ್ತು ದಾರಿತಪ್ಪಿಸುವಂತದ್ದು ಎಂದು ಸರ್ಕಾರ ಹೇಳಿದೆ. ಕೆಲವು ಬಳಕೆದಾರರಿಗೆ ಇದರ ವೆಬ್‌ಸೈಟ್ ಪ್ರವೇಶಿಸುವ ಅವಾಕಾಶ ಸಿಕ್ಕಿದೆ. ಆದರೆ ಲಾಗಿನ್ ಆಗಲು, ವಿಡಿಯೊಗಳನ್ನು ಅಪ್‌ಲೋಡ್ ಮಾಡಲು ಅಥವಾ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಚೀನಾ ಮೂಲದ ಪ್ಲಾಟ್‌ಫಾರ್ಮ್ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿಯೂ ಇದು ಲಭ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇಂಟರ್‌ನೆಟ್ ಸೇವಾ ಪೂರೈಕೆದಾರರು ವೆಬ್‌ಸೈಟ್ ಮೇಲಿನ ನಿರ್ಬಂಧವನ್ನು ಮುಂದುವರಿಸಿದ್ದಾರೆ ಎಂದು ಟೆಲಿಕಾಂ ಇಲಾಖೆಯ ಮೂಲಗಳು ಕೂಡ ತಿಳಿಸಿದ್ದು, ಆದರೂ ಕೆಲವರು ಇದಕ್ಕೆ ಹೇಗೆ ಪ್ರವೇಶ ಪಡೆದರು ಎನ್ನುವ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.
2020ರಲ್ಲಿ ನಡೆದ ಘಾಲ್ವಾನ್ ಕಣಿವೆ ಘರ್ಷಣೆಯ ಬಳಿಕ ಭಾರತ ಮತ್ತು ಚೀನಾ ತಮ್ಮ ಸಂಬಂಧವನ್ನು ಸುಧಾರಿಸುವ ಪ್ರಯತ್ನ ನಡೆಸುತ್ತಿದೆ. ಈ ನಡುವೆ ಇದೀಗ ಈ ಸುದ್ದಿ ಹಬ್ಬುತ್ತಿದೆ. 2020ರ ಜೂನ್ 15ರಂದು ಪೂರ್ವ ಲಡಾಖ್‌ನ ಘಾಲ್ವಾನ್‌ನಲ್ಲಿ ನಡೆದ ಘರ್ಷಣೆಯ ಅನಂತರ ಕೇಂದ್ರ ಸರ್ಕಾರ ನಿಷೇಧಿಸಿದ 59 ಅಪ್ಲಿಕೇಶನ್‌ಗಳಲ್ಲಿ ಚೀನಾದ ಟಿಕ್‌ಟಾಕ್ ಮತ್ತು ಅಲಿಎಕ್ಸ್‌ಪ್ರೆಸ್ ಸೇರಿವೆ.
ಇದನ್ನೂ ಓದಿ: Mahesh Shetty Thimarodi: ಮಹೇಶ್ ಶೆಟ್ಟಿ ತಿಮರೋಡಿಗೆ ಜಾಮೀನು ಮಂಜೂರು
ಈ ಅಪ್ಲಿಕೇಷನ್‌ಗಳು ಬಳಕೆಯ ನಿಯಮಗಳನ್ನು ಉಲ್ಲಂಘಿಸಿವೆ. ಬಳಕೆದಾರರ ಗೌಪ್ಯತೆಗೆ ಧಕ್ಕೆ ತರುತ್ತವೆ ಮತ್ತು ಸ್ಪೈವೇರ್ ಅಥವಾ ಮಾಲ್‌ವೇರ್ ಆಗಿ ಬಳಸಲ್ಪಟ್ಟಿವೆ ಎಂದು ಆರೋಪಿಸಲಾಗಿತ್ತು. ಇತ್ತೀಚೆಗೆ ಎರಡು ದೇಶಗಳು ಸ್ಥಿರ, ಸಹಕಾರಿ ಮತ್ತು ಭವಿಷ್ಯದ ಸಂಬಂಧಕ್ಕಾಗಿ ಹಲವಾರು ಕ್ರಮಗಳನ್ನು ಅನಾವರಣಗೊಳಿಸಿದವು. ಇದರಲ್ಲಿ ಗಡಿಯಲ್ಲಿ ಜಂಟಿಯಾಗಿ ಶಾಂತಿಯನ್ನು ಕಾಪಾಡಿಕೊಳ್ಳುವುದು, ಗಡಿ ವ್ಯಾಪಾರವನ್ನು ಪುನಃ ತೆರೆಯುವುದು, ಹೂಡಿಕೆ ಹರಿವನ್ನು ಉತ್ತೇಜಿಸುವುದು ಮತ್ತು ನೇರ ವಿಮಾನ ಸಂಪರ್ಕವನ್ನು ಆದಷ್ಟು ಬೇಗ ಪುನರಾರಂಭಿಸುವುದು ಸೇರಿವೆ.