ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ghee Benefits: ಬೇಸಿಗೆಯಲ್ಲಿ ತುಪ್ಪ ಸೇವನೆಯ ಪ್ರಯೋಜನಗಳೇನು?

ಬೇಸಿಗೆಯಲ್ಲಿ ಬಿಸಿಲಿನ ಉಷ್ಣಾಂಶ ಹೆಚ್ಚಾಗಿ ಇರುವುದರಿಂದ ನಮ್ಮ ದೇಹಕ್ಕೆ ತಂಪು ನೀಡುವ ಆಹಾರ ಪದಾರ್ಥಗಳು ಹೆಚ್ಚು ಮುಖ್ಯವಾಗುತ್ತವೆ. ಆಯುರ್ವೇದ ಪ್ರಕಾರ ತುಪ್ಪಕ್ಕೆ ನಮ್ಮ ದೇಹ ವನ್ನು ತಂಪು ಮಾಡುವ ಗುಣವಿದೆ. ಹೀಗಾಗಿ ಇದರ ಸೇವನೆಯು ನಮ್ಮ  ದೇಹವನ್ನು ಉಷ್ಣಾಂಶದಿಂದ ಸಮತೋಲನ ಗೊಳಿಸಿ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.

ಬೇಸಿಗೆಯಲ್ಲಿ ತುಪ್ಪ ಸೇವನೆ ದೇಹಕ್ಕೆ ಒಳಿತೆ?

ತುಪ್ಪ.

Profile Pushpa Kumari Apr 22, 2025 6:00 AM

ನವದೆಹಲಿ: ಆಹಾರದ ರುಚಿಯನ್ನು ಹೆಚ್ಚಿಸಲು ತುಪ್ಪವನ್ನು (Ghee) ಬಳಸಲಾಗುತ್ತದೆ. ಕೆಲವರು ಪ್ರತಿನಿತ್ಯವೂ ಅಡುಗೆಯಲ್ಲಿ  ತುಪ್ಪವನ್ನು ಬಳಸಿದರೆ ಇನ್ನು ಕೆಲವರು ಅನೇಕ ತಿನಿಸುಗಳನ್ನು ತುಪ್ಪದೊಂದಿಗೆ ಸೇವಿಸುವ ಅಭ್ಯಾಸ ಹೊಂದಿದ್ದಾರೆ. ಆಯುರ್ವೇದದಲ್ಲಿಯೂ ತುಪ್ಪವನ್ನು ಔಷಧಿ ಎಂದು ಪರಿಗಣಿಸಲಾಗಿದೆ. ಒಮೆಗಾ -3, ಕೊಬ್ಬಿನಾಮ್ಲಗಳು ಮತ್ತು ವಿಟಮಿನ್‌ನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವ ಇದು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ (Health Tips). ಆದರಲ್ಲೂ ಬೇಸಿಗೆಯ ಸಂದರ್ಭದಲ್ಲಿ ತುಪ್ಪ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ.

ಬೇಸಿಗೆಯಲ್ಲಿ ಬಿಸಿಲಿನ ಉಷ್ಣಾಂಶ ಹೆಚ್ಚಾಗಿ ಇರುವುದರಿಂದ ನಮ್ಮ ದೇಹಕ್ಕೆ ತಂಪು ನೀಡುವ ಆಹಾರ ಪದಾರ್ಥಗಳು ಹೆಚ್ಚು ಮುಖ್ಯವಾಗುತ್ತವೆ. ಆಯುರ್ವೇದ ಪ್ರಕಾರ ತುಪ್ಪಕ್ಕೆ ನಮ್ಮ ದೇಹವನ್ನು ತಂಪು ಮಾಡುವ ಗುಣವಿದೆ. ಹೀಗಾಗಿ ಇದರ ಸೇವನೆಯು ನಮ್ಮ ದೇಹವನ್ನು ಉಷ್ಣಾಂಶದಿಂದ ಸಮತೋಲನಗೊಳಿಸಿ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ಬೇಸಿಗೆಯಲ್ಲಿ ತುಪ್ಪದ ಸೇವನೆ ಬಹಳ ಉತ್ತಮ.

ನೀರಿನ ಅಂಶ ಸಿಗುತ್ತದೆ

ಬೇಸಿಗೆಯಲ್ಲಿ ಸಾಮಾನ್ಯವಾಗಿ ನಮಗೆ ನಿರ್ಜಲೀಕರಣ ಸಮಸ್ಯೆ ಎದುರಾಗುತ್ತದೆ. ಆದರೆ ದೇಹಕ್ಕೆ ತಂಪಾದ ಆಹಾರ ಪದಾರ್ಥಗಳ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಬೆವರಿನ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ನೀರಿನ ಅಂಶ ಕೂಡ ದೊರೆತಂತೆ ಆಗುತ್ತದೆ. ಹಾಗಾಗಿ ನಿರ್ಜಲೀಕರಣ ಸಮಸ್ಯೆಯಿಂದ ಪಾರಾಗಲು ತುಪ್ಪ ಸೇವನೆ ಅತ್ಯುತ್ತಮ ಮಾರ್ಗ ಎನಿಸಿಕೊಂಡಿದೆ.

ದೇಹವನ್ನು ಹೈಡ್ರೀಕರಿಸುತ್ತದೆ

ತುಪ್ಪವು ಮಾಯಿಶ್ಚರೈಸಿಂಗ್ ಗುಣಗಳನ್ನು ಹೊಂದಿದ್ದು, ಅದು ನಿಮ್ಮ ದೇಹವನ್ನು ಹೈಡ್ರೀಕರಿಸುತ್ತದೆ. ತುಪ್ಪದಲ್ಲಿರುವ ಲ್ಯೂಬ್ರಿಕೇಟಿಂಗ್ ಮತ್ತು ಪೋಷಣೆಯ ಗುಣ ನಿಮ್ಮ ದೇಹವನ್ನು ಒಳಗಿನಿಂದ ತಂಪಾಗಿರಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ದೇಹ ನಿರ್ಜಲೀಕರಣಗೊಳ್ಳುವ ಸಮಸ್ಯೆ ಸಾಮಾನ್ಯ. ಈ ಸಮಯದಲ್ಲಿ ಅತಿಯಾದ ಬೆವರುವಿಕೆ, ಸುಸ್ತು ಇರುತ್ತದೆ. ಹಾಗಾಗಿ ನಿಯಮಿತವಾಗಿ ತುಪ್ಪವನ್ನು ಸೇವಿಸುವುದರಿಂದ ನಿರ್ಜಲೀಕರಣದ ಸಮಸ್ಯೆಯನ್ನು ತಪ್ಪಿಸಬಹುದು. ಜೊತೆಗೆ  ತುಪ್ಪ ಸೇವನೆ ಚರ್ಮದ ಆರೋಗ್ಯಕ್ಕೂ ಒಳಿತು. ಇದರಿಂದ  ಚರ್ಮವನ್ನು ಇನ್ನಷ್ಟು ತೇವಾಂಶದಿಂದ ಇರಿಸಬಹುದು

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ

ತಪ್ಪದಲ್ಲಿ ವಿಟಮಿನ್-ಎ, ಸಿ ಮತ್ತು ಬ್ಯುಟರಿಕ್ ಆಮ್ಲ ಹೆಚ್ಚಾಗಿ ಇರುತ್ತದೆ.. ತುಪ್ಪದಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ವೈರಲ್ ಗುಣವೂ ಇದೆ. ಇದು ಸೋಂಕಿನ ಅಪಾಯದಿಂದ ರಕ್ಷಿಸಿ  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಅಷ್ಟೇ ಅಲ್ಲದೆ, ತುಪ್ಪವು ವಿಟಮಿನ್ ಎ ಮತ್ತು ಸಿ ಯ ಸಮೃದ್ಧ ಮೂಲವಾಗಿದೆ. ಇದು ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪ್ರಮುಖ ಕಾರಣವಾಗುತ್ತದೆ.

ಇದನ್ನು ಓದಿ: Health Tips: ನಮಗೆ ಒಆರ್‌ಎಸ್ ಅಗತ್ಯ ಬೀಳುವುದು ಯಾವಾಗ?

ಜೀರ್ಣಕ್ರಿಯೆ ಸುಧಾರಿಸುತ್ತದೆ

ತುಪ್ಪ ಸೇವನೆಯಿಂದ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯು ಸುಧಾರಿಸುತ್ತದೆ‌. ಬೇಸಿಗೆಯಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಪ್ರತಿದಿನ ತುಪ್ಪದಿಂದ ಮಾಡಿದ ಪದಾರ್ಥಗಳನ್ನು ಸೇವನೆ ಮಾಡಿ. ಇದು ಜೀರ್ಣಕ್ರಿಯೆ ಸುಧಾರಿಸುವ ಜತೆಗೆ ಆರೋಗ್ಯಕರ ಪ್ರಯೋಜನ ನೀಡುತ್ತದೆ.

ಶಕ್ತಿ ಮತ್ತು ಚೈತನ್ಯ ಸಿಗುತ್ತದೆ

ತುಪ್ಪದಲ್ಲಿ ಅನೇಕ ಆರೋಗ್ಯಕರ ಅಂಶಗಳಿರುವುದರಿಂದ ನಮ್ಮ ದೇಹಕ್ಕೆ ಬೇಕಾದ ಶಕ್ತಿ ಒದಗಿಸುವ ಜತೆಗೆ ಚೈತನ್ಯ ನೀಡುತ್ತದೆ. ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋಗುವ ಸಂದರ್ಭ ತುಪ್ಪ ಸೇವಿಸಿದರೆ ಆಯಾಸವನ್ನು ತಪ್ಪಿಸಬಹುದು.ಇದು ನಮ್ಮನ್ನು ಆರೋಗ್ಯಕರವಾಗಿ ಮತ್ತು ಚೈತನ್ಯದಿಂದ ಇರಿಸುವಂತೆ ಮಾಡುತ್ತದೆ.