Aryaa Arora: ವರ್ಕೌಟ್ ಮಾಡಲ್ಲ... ಡಯೆಟ್ ಇಲ್ಲವೇ ಇಲ್ಲ... ಆದ್ರೂ 18ಕೆಜಿ ವೇಯ್ಟ್ ಲಾಸ್! ಈಕೆಯ ಟ್ರಿಕ್ಸ್ ಏನು ಗೊತ್ತಾ?
ಸರಿಯಾದ ಕ್ರಮದಲ್ಲಿ ಆರೋಗ್ಯಕರ ಜೀವನಶೈಲಿಯಿಂದ ತೂಕ ಇಳಿಸಿಕೊಳ್ಳುವುದು ಬಹುತೇಕರಿಗೆ ದೊಡ್ಡ ಸವಾಲಾಗಿ ಬಿಡುತ್ತದೆ. ಅಂತೆಯೇ ಸೋಶಿಯಲ್ ಮಿಡಿಯಾ ಇನ್ ಫ್ಲುಯೆನ್ಸರ್ ಆರ್ಯ ಅರೋರಾ ಅವರು ಯಾವುದೆ ತರನಾಗಿ ಜಿಮ್ ಗೆ ಹೋಗದೆ ವರ್ಕೌಟ್ ಡಯೆಟ್ ಅನ್ನು ಕೂಡ ಮಾಡದೆ ಬರೋಬ್ಬರಿ 18ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಅವರ ತೂಕ ಇಳಿಸಿಕೊಳ್ಳಲು ತಮ್ಮ ಜೀವನ ಕ್ರಮ ದಲ್ಲಿ ಅಗತ್ಯ ಮಾರ್ಪಾಡು ಮಾಡಿಕೊಂಡಿದ್ದು ಈ ಬಗ್ಗೆ ಕೆಲವು ಉಪಯುಕ್ತ ಸಲಹೆಯನ್ನು ಅವರು ಹಂಚಿಕೊಂಡಿದ್ದಾರೆ.


ನವದೆಹಲಿ: ತೂಕ ಇಳಿಸಿಕೊಳ್ಳಬೇಕೆಂದು (Weight Loss) ಬಹುತೇಕರು ಜಿಮ್, ವರ್ಕೌಟ್ , ಡಯೆಟ್ ಪ್ಲ್ಯಾನ್ ಎಂದೆಲ್ಲ ಮಾಡಿ ಆರೋಗ್ಯ ಹಾನಿ ಮಾಡಿಕೊಂಡಿದ್ದು ಇದೆ. ಸರಿಯಾದ ಕ್ರಮ ದಲ್ಲಿ ಆರೋಗ್ಯಕರ ಜೀವನಶೈಲಿಯಿಂದ ತೂಕ ಇಳಿಸಿಕೊಳ್ಳುವುದು ಬಹುತೇಕರಿಗೆ ದೊಡ್ಡ ಸವಾಲಾಗಿ ಬಿಡುತ್ತದೆ. ಅಂತೆಯೇ ಸೋಶಿಯಲ್ ಮಿಡಿಯಾ ಇನ್‌ಫ್ಲುಯೆನ್ಸರ್ ಆರ್ಯ ಅರೋರಾ ಅವರು ಯಾವುದೇ ತರನಾಗಿ ಜಿಮ್‌ಗೆ ಹೋಗದೆ ವರ್ಕೌಟ್ ಡಯೆಟ್ ಅನ್ನು ಕೂಡ ಮಾಡದೆ ಬರೋಬ್ಬರಿ 18ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ.
ಅವರ ತೂಕ ಇಳಿಸಿಕೊಳ್ಳಲು ತಮ್ಮ ಜೀವನ ಕ್ರಮದಲ್ಲಿ ಅಗತ್ಯ ಮಾರ್ಪಾಡು ಮಾಡಿಕೊಂಡಿದ್ದು, ಈ ಬಗ್ಗೆ ಕೆಲವು ಉಪಯುಕ್ತ ಸಲಹೆಯನ್ನು ಅವರು ಹಂಚಿಕೊಂಡಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿಯೂ ತೂಕ ಇಳಿಯುತ್ತಿಲ್ಲ ಎಂದು ದೂರುವ ಬದಲು ಜೀವನ ಕ್ರಮದಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ತೂಕ ವನ್ನು ಬಹಳ ಸುಲಭವಾಗಿ ಇಳಿಸಬಹುದು ಎಂಬುದನ್ನು ಆರ್ಯ ಅರೋರಾ ತಿಳಿಸಿಕೊಟ್ಟಿದ್ದಾರೆ.
ನಿಮ್ಮ ದೇಹಕ್ಕೆ ಎಷ್ಟು ಕ್ಯಾಲೋರಿ ಬೇಕು?
ತೂಕವನ್ನು ಸರಳವಾಗಿ ಕಡಿಮೆ ಮಾಡಲು ಇಚ್ಛಿಸುವವರು ಮೊದಲು ತಮ್ಮ ದೇಹಕ್ಕೆ ಒಂದು ದಿನಕ್ಕೆ ಎಷ್ಟು ಕ್ಯಾಲೋರಿ ಬೇಕು ಎಂಬುದನ್ನು ಅರಿಯಬೇಕು. ಇದನ್ನು ಚಾಟ್ ಜಿಪಿಟಿ ಮೂಲಕ ಸುಲಭವಾಗಿ ತಿಳಿಯಬಹುದು. ಚಾಟ್ ಜಿಪಿಟಿಯಲ್ಲಿ ತೂಕ, ಎತ್ತರ, ವಯಸ್ಸು ಮತ್ತು ಲಿಂಗವನ್ನು ನಮೂದಿಸಿ ತೂಕ ಇಳಿಸಲು ಕ್ಯಾಲೋರಿ ಸೇವನೆ ಎಷ್ಟು? ಎಂದು ಕೇಳಿದರೆ ಅದರಲ್ಲಿ ಉತ್ತರ ಸಿಗಲಿದೆ. ನಾನು ಕೂಡ ಇದೇ ಕ್ರಮ ಅನುಸರಿಸಿದ್ದೇನೆ ಎಂದು ಆರ್ಯ ಅರೋರ ಅವರು ತಿಳಿಸಿದ್ದಾರೆ. ಅದು 1800 ಕ್ಯಾಲೋರಿ ಎಂದು ತಿಳಿಸಿದರೆ ನಿಮ್ಮ ಆಹಾರದಲ್ಲಿ ಅದಕ್ಕೂ ಕಡಿಮೆಯ ಕ್ಯಾಲೋರಿ ಇರುವ ಆಹಾರ ಮಾತ್ರ ಸೇವಿಸಬೇಕು. ಕ್ಯಾಲೋರಿಗಳ ಬಗ್ಗೆ ಆಗಾಗ ಟ್ರ್ಯಾಕ್ ಮಾಡಿ ಏನು ತಿನ್ನುತ್ತಿದ್ದೇನೆ ಎಷ್ಟು ಪ್ರಮಾಣ ತಿನ್ನುತ್ತಿದ್ದೇನೆ ಎಂಬುದು ಅರಿತಿರಬೇಕು ಎಂದು ಅರೋರಾ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Health Tips: ಮಲಗುವ ಭಂಗಿ ಹೇಗಿದ್ದರೆ ಒಳ್ಳೆಯದು?
ಪೋಷಕಾಂಶ ಅಗತ್ಯ:
ಕಂಟೆಂಟ್ ಕ್ರಿಯೇಟರ್ ಆರ್ಯ ಅರೋರಾ ಅವರು ಪ್ರತಿಯೊಂದು ಆಹಾರದಲ್ಲಿಯೂ ಪೋಷಕಾಂಶಕ್ಕೆ ಅಧಿಕ ಒತ್ತು ನೀಡಿದ್ದಾರೆ. 40% ಪ್ರೋಟೀನ್, 30% ಫೈಬರ್, 20% ಕಾರ್ಬೋ ಹೈಡ್ರೇಟ್ ಗಳು ಮತ್ತು 10% ಕೊಲೆಸ್ಟ್ರಾಲ್ ಇರುವ ಆಹಾರವನ್ನು ಸೇವಿಸುತ್ತಾರೆ. ತೂಕ ಇಳಿಸಲು ಹೊಟ್ಟೆ ಖಾಲಿ ಬಿಟ್ಟು ಉಪವಾಸ ಮಾಡುದಕ್ಕಿಂತಲು ದೇಹಕ್ಕೆ ಅಗತ್ಯವಾದ ಪೋಷಕಾಂಶ ನೀಡಿ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುವುದು ಮುಖ್ಯ ಎಂದು ಆರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಕ್ಕರೆ, ಹಿಟ್ಟು, ಎಣ್ಣೆ ಮತ್ತು ಹುರಿದ ಆಹಾರಗಳನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡ ಬೇಕು. ಕೆಲವೊಮ್ಮೆ ಸೇವಿಸಿದರೂ ಸ್ವಲ್ಪ ಮಾತ್ರವೇ ಸೇವಿಸುವುದು ಉತ್ತಮ. ಪ್ರತಿದಿನ 2-3 ಲೀಟರ್ ನೀರು ಕುಡಿಯಬೇಕು. 7-8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಇದೇ ಜೀವನ ಕ್ರಮ ನೀವು ಅನು ಸರಿಸಿದರೆ ಜೀರ್ಣಕ್ರಿಯೆ ಮತ್ತು ಹಸಿವು ನಿಯಂತ್ರಣದಲ್ಲಿರುತ್ತದೆ ಎಂದು ಅವರು ಹೇಳಿದ್ದಾರೆ.
ತೂಕ ಇಳಿಕೆ ಮಾಡಲು ಆಹಾರ ನಿಯಂತ್ರಣ ಮಾಡಿ ಸೇವಿಸಿದರಷ್ಟೇ ಸಾಲದು, ಅದರೊಂದಿಗೆ ಮಾನಸಿಕ ಆರೋಗ್ಯ ಕೂಡ ಮುಖ್ಯ. ಅದಕ್ಕಾಗಿ ಪ್ರತಿದಿನ ಕೆಲವು ದಿನಚರಿಯನ್ನು ಹವ್ಯಾಸ ವಾಗಿ ಅನುಸರಿಸಬೇಕು ಎಂದು ಅವರು ತಿಳಿಸಿದ್ದಾರೆ. ನಮ್ಮ ಹಾರ್ಮೋನು ನಿಯಂತ್ರಣದಲ್ಲಿ ಇಡಲು ಧ್ಯಾನ, ಯೋಗ ಇತ್ಯಾದಿಯನ್ನು ಮಾಡಬೇಕು ಎಂದು ಅವರು ತಿಳಿಸಿದ್ದಾರೆ.