ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Aadhaar Seva Center Recruitment 2026: ಎಸ್‌ಎಎಸ್‌ಎಲ್‌ಸಿ ಪಾಸಾಗಿದ್ದರೆ ಸಾಕು ಆಧಾರ್‌ ಸೂಪರ್‌ವೈಸರ್‌ ಹುದ್ದೆಗಳಿಗೆ ಅಪ್ಲೈ ಮಾಡಿ; ಅರ್ಜಿ ಶುಲ್ಕ ಇಲ್ಲ

Job Guide: ಕಾಮನ್‌ ಸರ್ವಿಸ್‌ ಸೆಂಟರ್‌ ದೇಶಾದ್ಯಂತ ಖಾಲಿ ಇರುವ 253 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆಧಾರ್‌ ಸೂಪರ್‌ವೈಸರ್‌/ಆಪರೇಟರ್‌ ಹುದ್ದೆ ಇದಾಗಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದ್ದರೆ ಅಪ್ಲೈ ಮಾಡಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮಾರ್ಚ್‌ 10.

ಆಧಾರ್‌ ಸೂಪರ್‌ವೈಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ. -

Ramesh Ballamoole
Ramesh Ballamoole Feb 18, 2026 4:31 PM

ಬೆಂಗಳೂರು, ಫೆ. 18: ಎಸ್‌ಎಸ್‌ಎಲ್‌ಸಿ ಮುಗಿಸಿ ಒಂದೊಳ್ಳೆ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಆಧಾರ್‌ ಸೇವಾ ಸೆಂಟರ್‌ನಲ್ಲಿ ಉದ್ಯೋಗಾವಕಾಶವಿದೆ. ಕಾಮನ್‌ ಸರ್ವಿಸ್‌ ಸೆಂಟರ್‌ (CSC) ದೇಶಾದ್ಯಂತ ಖಾಲಿ ಇರುವ 253 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ (Aadhaar Seva Center Recruitment 2026). ಕರ್ನಾಟಕದಲ್ಲಿ 34 ಹುದ್ದೆಗಳಿವೆ. ಸೂಪರ್‌ವೈಸರ್‌/ಆಪರೇಟರ್‌ ಹುದ್ದೆ ಇದಾಗಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದ್ದರೆ ಅಪ್ಲೈ ಮಾಡಬಹುದು (Job Guide). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮಾರ್ಚ್‌ 10.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಆಧಾರ್‌ ಸೂಪರ್‌ವೈಸರ್‌/ಆಪರೇಟರ್‌ ಹುದ್ದೆ ಇದಾಗಿದೆ. ಬೆಂಗಳೂರು ಗ್ರಾಮಾಂತರ-1, ಬೀದರ್‌-1, ಚಿಕ್ಕಬಳ್ಳಾಪುರ-1, ಗದಗ-2, ಹಾಸನ-1, ಹಾವೇರಿ-3, ಕೋಲಾರ-3, ಮಂಡ್ಯ-1, ಉಡುಪಿ-2, ಉತ್ತರ ಕನ್ನಡ-3, ಯಾದಗಿರಿ-1, ಬಾಗಲಕೋಟೆ-2, ವಿಜಯನಗರ-5, ಬೆಳಗಾವಿ-5, ಚಿತ್ರದುರ್ಗ-1 ಮತ್ತು ತುಮಕೂರಿನಲ್ಲಿ 2 ಹುದ್ದೆಗಳಿವೆ. ದೇಶದ ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯ ಅಥವಾ ಶಿಕ್ಷಣ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ, ಐಟಿಐ, ದ್ವಿತೀಯ ಪಿಯುಸಿ ಮತ್ತು ಡಿಪ್ಲೋಮಾ ಪೂರೈಸಿದವರು ಅರ್ಜಿ ಸಲ್ಲಿಸಲು ಅರ್ಹರು. ಜತೆಗೆ ಕಂಪ್ಯೂಟರ್‌ ಬಳಕೆ ತಿಳಿದಿರಬೇಕು ಎಂದು ಅದಿಸೂಚನೆ ತಿಳಿಸಿದೆ.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಆಧಾರ್‌ ಸೇವಾ ಕೇಂದ್ರ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ. ಯಾವ ಅಭ್ಯರ್ಥಿಯೂ ಅರ್ಜಿ ಶುಲ್ಕ ಸಲ್ಲಿಸಬೇಕಿಲ್ಲ. ಗಮನಿಸಿ, ಇದು ಗುತ್ತಿಗೆ ಆಧಾರಿತ ಹುದ್ದೆಯಾಗಿದ್ದು, 1 ವರ್ಷದ ಅವಧಿಗೆ ನೇಮಕ ನಡೆಯಲಿದೆ.

ಬ್ಯಾಂಕ್‌ ಆಫ್‌ ಬರೋಡದಲ್ಲಿದೆ 166 ಹುದ್ದೆ; ಅಪ್ಲೈ ಮಾಡುವ ವಿಧಾನ ಇಲ್ಲಿದೆ

ಆಯ್ಕೆ ವಿಧಾನ ಮತ್ತು ಮಾಸಿಕ

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 21,700 ರುಪಾಯಿ-69,100 ರುಪಾಯಿ ಮಾಸಿಕ ವೇತನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Aadhaar Seva Center Recruitment 2026 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
    (https://career.csccloud.in/apply-now/MTE1OA==)
  • ಕೊಟ್ಟಿರುವ ಅಪ್ಲಿಕೇಷನ್‌ ಫಾರ್ಮ್‌ ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಸೂಕ್ತವಾದ ಸಹಿ, ಫೋಟೊ ಮತ್ತು ರೆಸ್ಯೂಮ್‌ ಲಗತ್ತಿಸಿ (ರೆಸ್ಯೂಮ್‌ ಪಿಡಿಎಫ್‌, ಡಾಕ್‌ ಅತವಾ ಡಾಕ್ಸ್‌ ಫಾರ್ಮಾಟ್‌ನಲ್ಲಿರಬೇಕು. ಗಮನಿಸಿ ಇದರ ಗಾತ್ರ 1,024 ಕೆಬಿ ಮೀರಿರಬಾರದು.)
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಗಮನಿಸಿ: ಹೆಸರು ನೋಂದಾಯಿಸಲು ಇಲ್ಲಿ ಕ್ಲಿಕ್‌ ಮಾಡಿ
(https://career.csccloud.in/login)

ಹೆಚ್ಚಿನ ವಿವರಗಳಿಗೆ ಕಾಮನ್‌ ಸರ್ವಿಸ್‌ ಸೆಂಟರ್‌ ಅಧಿಕೃತ ವೆಬ್‌ಸೈಟ್‌ ವಿಳಾಸ: https://csc.gov.in/askಗೆ ಭೇಟಿ ನೀಡಿ.

ಇನ್ನಷ್ಟು ಉದ್ಯೋಗ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.