ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Forest Watcher Recruitment: ಅರಣ್ಯ ಇಲಾಖೆಯಲ್ಲಿ ಭರ್ಜರಿ ನೇಮಕಾತಿ; 750 ಅರಣ್ಯ ವೀಕ್ಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 'ಅರಣ್ಯ ವೀಕ್ಷಕ' ಹುದ್ದೆಗಳ ನೇಮಕಾತಿಗೆ ಸಿದ್ಧತೆ ನಡೆದಿದೆ. ಇಲಾಖೆಯು ನೇರ ನೇಮಕಾತಿಗೆ ಕರಡು ಅಧಿಸೂಚನೆಯನ್ನು ಸಿದ್ಧಪಡಿಸಿದ್ದು, ಆರ್ಥಿಕ ಇಲಾಖೆಯ ಸಹಮತಿಯೂ ದೊರೆತಿದೆ. ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಹೊರಬೀಳಲಿದೆ.

750 ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

-

Prabhakara R
Prabhakara R Jul 16, 2026 3:51 PM

ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯಲ್ಲಿನ ವಿವಿಧ ವೃತ್ತಗಳ ಹಂತದಲ್ಲಿ ಖಾಲಿ ಇರುವ ಒಟ್ಟು 750 (ಉಳಿಕೆ ಮೂಲ ವೃಂದ 700 ಮತ್ತು ಕಲ್ಯಾಣ ಕರ್ನಾಟಕ 50) ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಅರಣ್ಯ ಇಲಾಖೆಯು ನೇರ ನೇಮಕಾತಿಗೆ (Forest Watcher Recruitment 2026) ಕರಡು ಅಧಿಸೂಚನೆ ಸಿದ್ಧಪಡಿಸಿದ್ದು, ಆರ್ಥಿಕ ಇಲಾಖೆಯ ಸಹಮತಿಯೂ ದೊರೆತಿದೆ.

ಈ ನೇಮಕಾತಿಗೆ ಜುಲೈ 20ರಂದು ಅಧಿಕೃತ ಅಧಿಸೂಚನೆ ಹೊರಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ https://aranya.gov.in/ ದಿನಾಂಕ: 01-08-2026ರಿಂದ 31-08-2026ರ ವರೆಗಿನ ಅವಧಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಪಡೆಯಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಂಬಂಧಪಟ್ಟ ಸೂಚಿಸಿದ್ದಾರೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ: 01-08-2026
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 31-08-2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 02-09-2026

ವಿದ್ಯಾರ್ಹತೆ:

ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಅಥವಾ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಹೊಂದಿರಬೇಕು.

ವಯೋಮಿತಿ:

ಅಭ್ಯರ್ಥಿಗಳು ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಇನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one-time measure) 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿರುತ್ತದೆ.

  • ಸಾಮಾನ್ಯ ಅಭ್ಯರ್ಥಿ, ಪ್ರವರ್ಗ 2ಎ, 2 ಬಿ, 3ಎ, 3ಬಿ, ಹಿಂದುಳಿದ ಪ್ರವರ್ಗಗಳು: 30 ವರ್ಷ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1: 32 ವರ್ಷ
  • ಮಾಜಿ ಸೈನಿಕರಿಗೆ ವಯೋಮಿತಿ: 33 ವರ್ಷ

ಅರ್ಜಿ ಶುಲ್ಕ:

  • ಸಾಮಾನ್ಯ ಅರ್ಹತೆ, ಪ್ರವರ್ಗ ॥ಎ, 1ಬಿ, ॥ಎ ಮತ್ತು ।।ಬಿ ಪ್ರವರ್ಗಗಳಿಗೆ ಸೇರಿದ ಪುರುಷ ಅಭ್ಯರ್ಥಿಗಳಿಗೆ - ಅರ್ಜಿ ಶುಲ್ಕ: ರೂ. 200/-
  • ಮಹಿಳಾ ಅಭ್ಯರ್ಥಿಗಳಿಗೆ/ತೃತೀಯ ಲಿಂಗ ಅಭ್ಯರ್ಥಿಗಳಿಗೆ - ರೂ. 100/-
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಪುರುಷ ಅಭ್ಯರ್ಥಿಗಳಿಗೆ - ಅರ್ಜಿ ಶುಲ್ಕ: ರೂ. 100/-
  • ಮಹಿಳಾ ಅಭ್ಯರ್ಥಿಗಳಿಗೆ/ತೃತೀಯ ಲಿಂಗ ಅಭ್ಯರ್ಥಿಗಳಿಗೆ - ರೂ. 50/-
  • ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ

ವೇತನ ಶ್ರೇಣಿ: 27,500-46,675 ರೂ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ಸಲ್ಲಿಸಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಅರಣ್ಯ ಇಲಾಖೆ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ https://aranya.gov.in/ ಲಿಂಕ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ನೇಮಕಾತಿ/ಆಯ್ಕೆ ವಿಧಾನ

ಆನ್‌ಲೈನ್ (Online) ನಲ್ಲಿ ಸ್ವೀಕೃತವಾದ ಅರ್ಜಿಗಳಲ್ಲಿ ಅಭ್ಯರ್ಥಿಗಳು ಭರ್ತಿ ಮಾಡಿರುವ ಮಾಹಿತಿ ಆಧಾರದನ್ವಯ ಆಯ್ಕೆ ಪ್ರಾಧಿಕಾರವು ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:20 (ಹುದ್ದೆ: ಅಭ್ಯರ್ಥಿ) ಅನುಪಾತದಲ್ಲಿ ಶಾರೀರಿಕ ಮಾನದಂಡಗಳ ಪರೀಕ್ಷೆ [Physical Standard Test), ದೈಹಿಕ ತಾಳ್ವಿಕೆ ಪರೀಕ್ಷೆ (Physical Endurance Test] ಮತ್ತು ದೈಹಿಕ ಕಾರ್ಯ ಸಮರ್ಥತೆ [Physical Efficiency Test) ಪರೀಕ್ಷೆಗಾಗಿ ಅಭ್ಯರ್ಥಿಗಳ ವೃತ್ತ ಮಟ್ಟದ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಿ, ಪರೀಕ್ಷೆಗಳ ಕುರಿತು ದಿನಾಂಕವನ್ನು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ https://aranya.gov.in/ನಲ್ಲಿ ಮುಖ ಪುಟದ ಕೆಳಭಾಗದಲ್ಲಿ "ನೇಮಕಾತಿ" ಶೀರ್ಷಿಕೆಯ ಮೂಲಕ ಪ್ರಕಟಪಡಿಸಲಾಗುತ್ತದೆ.

ಅಂತಿಮ ಆಯ್ಕೆಪಟ್ಟಿ

Physical Endurance Test ಮತ್ತು Physical Efficiency Testನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ವೃತ್ತ ಮಟ್ಟದ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ದಾಖಲೆಗಳ ಪರಿಶೀಲನೆ ಬಳಿಕ ಅಧಿಸೂಚಿಸಿರುವ ಪ್ರವರ್ಗವಾರು ಖಾಲಿ ಹುದ್ದೆಗಳಿಗೆ 1:1 (ಹುದ್ದೆ ಅಭ್ಯರ್ಥಿ) ಅನುಪಾತದಲ್ಲಿ ಅಭ್ಯರ್ಥಿಗಳನ್ನು ಅರಣ್ಯ ವೀಕ್ಷಕ ವೃಂದದ ಹುದ್ದೆಗೆ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ನೇಮಕಾತಿ ಅಧಿಸೂಚನೆ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026 (1)