ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Assembly session: ಸ್ಪೀಕರ್ ಪೀಠಕ್ಕೆ ಅಗೌರವ; ವಿಧಾನಸಭೆಯಿಂದ 18 ಬಿಜೆಪಿ ಶಾಸಕರ ಅಮಾನತು

Assembly session: ಸ್ಪೀಕರ್ ಪೀಠಕ್ಕೆ ಅಗೌರವ ತೋರುವಂತ ನಡೆಯನ್ನು ಬಿಜೆಪಿಯ ಶಾಸಕರು ನಡೆದುಕೊಂಡಿದ್ದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಕಲಾಪದಿಂದ 6 ತಿಂಗಳವರೆಗೆ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಆದೇಶ ಮಾಡಿದ್ದಾರೆ.

ವಿಧಾನಸಭೆಯಿಂದ 18 ಬಿಜೆಪಿ ಶಾಸಕರ ಅಮಾನತು

-

Prabhakara R
Prabhakara R Mar 21, 2025 5:07 PM

ಬೆಂಗಳೂರು: ವಿಧಾನಸಭೆ ಸ್ಪೀಕರ್ ಪೀಠಕ್ಕೆ ಅಗೌರವ ತಂದ ಆರೋಪದಲ್ಲಿ ಆರು ತಿಂಗಳ ಕಾಲ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದಾರೆ. ತಕ್ಷಣವೇ ಹೊರ ನಡೆಯುವಂತೆ ಸೂಚಿಸಿದರೂ ಸ್ಪೀಕರ್ ಆದೇಶ ಧಿಕ್ಕರಿಸಿ ಸದನದಲ್ಲೇ (Assembly session:) ಇದ್ದ 18 ಬಿಜೆಪಿಯ ಶಾಸಕರನ್ನು ಮಾರ್ಷಲ್‌ಗಳು ಸದನದಿಂದ ಹೊರ ಹಾಕಿದ್ದಾರೆ. ವಿಧಾನಸಭೆಯ ಕಲಾಪ ಶುಕ್ರವಾರ ಮಧ್ಯಾಹ್ನ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕರಿಂದ ಗಲಾಟೆ, ಗದ್ದಲ ಆರಂಭವಾಯಿತು. ಈ ವೇಳೆ ಸ್ಪೀಕರ್ ಪೀಠಕ್ಕೆ ಅಗೌರವ ತೋರುವಂತ ನಡೆಯನ್ನು ಬಿಜೆಪಿಯ ಶಾಸಕರು ನಡೆದುಕೊಂಡಿದ್ದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಕಲಾಪದಿಂದ 6 ತಿಂಗಳವರೆಗೆ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಆದೇಶ ಮಾಡಿದ್ದಾರೆ.

ಅಮಾನತುಗೊಂಡ 18 ಬಿಜೆಪಿ ಶಾಸಕರ ಪಟ್ಟಿ

  1. ದೊಡ್ಡನಗೌಡ ಪಾಟೀಲ್
  2. ಡಾ.ಸಿ.ಎನ್. ಅಶ್ವತ್ಥನಾರಾಯಣ
  3. ಡಾ.ಭರತ್ ಶೆಟ್ಟಿ
  4. ಶರಣು ಸಲಗರ
  5. ಬಿ ಸುರೇಶ್ ಗೌಡ
  6. ಮುನಿರತ್ನ
  7. ಚನ್ನಬಸಪ್ಪ
  8. ಉಮಾನಾಥ್ ಕೋಟ್ಯಾನ್
  9. ಬಿ.ಪಿ ಹರೀಶ್
  10. ಧೀರಜ್ ಮುನಿರಾಜು
  11. ಯಶವಂತ
  12. ಬಸವರಾಜ ಮತ್ತಿಮೂಡ
  13. ಚಂದ್ರು ಲಮಾಣಿ
  14. ರಾಮಮೂರ್ತಿ
  15. ಯಶವತ್ ಸುವರ್ಣಾ
  16. ಶೈಲೇಂದ್ರ ಬೆಲ್ದಾಳೆ
  17. ಭೈರತಿ ಬಸವರಾಜ
  18. ಸಿ.ಕೆ.ರಾಮಮೂರ್ತಿ

ಸ್ಪೀಕರ್ ಪೀಠಕ್ಕೆ ಅಗೌರವ ತೋರುವುದನ್ನು ಸಹಿಸುವುದಿಲ್ಲ ಎಂಬುದಾಗಿ ಸ್ಪೀಕರ್ ಯುಟಿ ಖಾದರ್ ಅವರು ಅಮಾನತು ಆದೇಶದ ಸಂದರ್ಭದಲ್ಲಿ ಹೇಳಿದ್ದಾರೆ. ಇನ್ನು ಅಮಾನತಿನ ಅವಧಿಯಲ್ಲಿ ಶಾಸಕರ ಸೂಚನೆಗಳಿಗೆ ಮಾನ್ಯತೆ ಇರುವುದಿಲ್ಲ. ದಿನದ ಭತ್ಯೆಗೂ ಕೊಕ್‌ ಬೀಳಲಿದ್ದು, ಟಿಎ-ಡಿಎ ಸಿಗುವುದಿಲ್ಲ. ಸ್ಥಾಯಿ ಸಮಿತಿ ಸಭೆಗಳಿಗೆ ಅವಕಾಶವಿರುವುದಿಲ್ಲ ಹಾಗೂ ಆರು ತಿಂಗಳು ವಿಧಾನ ಸಭೆ ಪ್ರಾಂಗಣ ಪ್ರವೇಶಿಸುವಂತಿಲ್ಲ.

ಈ ಸುದ್ದಿಯನ್ನೂ ಓದಿ | Vishweshwar Bhat Column Impact: : ʼಹಕ್ಕಿ-ಕಪ್ಪೆಗಳ ಬಗ್ಗೆಯೂ ಸದನದಲ್ಲಿ ಸಭಾತ್ಯಾಗ ಮಾಡಬೇಕುʼ ಅಂಕಣ ಪ್ರಸ್ತಾಪ

ಮತ್ತೊಂದೆಡೆ ರಾಜಭವನದ ಅಂಗಳಕ್ಕೆ ಶಾಸಕರ ಅಮಾನತು ವಿಚಾರ ತಲುಪಿದ್ದು, ರಾಜ್ಯಪಾಲರನ್ನು ಭೇಟಿ ಮಾಡಲು ಬಿಜೆಪಿ ಶಾಸಕರು ಮುಂದಾಗಿದ್ದಾರೆ.