IND vs SA: ಮೂರನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಆಡಿದ್ದೇಕೆ? ತಿಲಕ್ ವರ್ಮಾ ಪ್ರತಿಕ್ರಿಯೆ!
IND vs SA: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಬ್ಯಾಟಿಂಗ್ ಸಾಲಿನಲ್ಲಿ ನಡೆಯುತ್ತಿರುವ ಬದಲಾವಣೆಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ತಂಡದ ಪ್ರತಿಯೊಬ್ಬ ಬ್ಯಾಟ್ಸ್‌ಮನ್ ಎಲ್ಲಿ ಬೇಕಾದರೂ ಬ್ಯಾಟಿಂಗ್ ನಡೆಸಲು ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದಾರೆ.
ಬ್ಯಾಟಿಂಗ್ ಕ್ರಮಾಂಕದ ಬದಲಾವನೆ ಬಗ್ಗೆ ತಿಲಕ್ ಸ್ಪಷ್ಟನೆ. -
ಧರ್ಮಶಾಲಾ: ಬ್ಯಾಟಿಂಗ್ ಕ್ರಮಾಂಕದಲ್ಲಿನ ಅಚ್ಚರಿ ಬದಲಾವಣೆಗೆ ತಂಡದ ಆಡಳಿತ ಮಂಡಳಿಯ ಒತ್ತು ನೀಡುವುದನ್ನು ಸಮ್ಮತಿಸಿರುವ ಭಾರತೀಯ ಬ್ಯಾಟ್ಸ್‌ಮನ್ ತಿಲಕ್ ವರ್ಮಾ (Tilak Verma), ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚಿನ ಆಟಗಾರರು (IND vs SA) ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧರಿದ್ದಾರೆ ಎಂದು ಶನಿವಾರ ಹೇಳಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಪ್ರಸ್ತುತ 1-1 ರಲ್ಲಿ ಸಮಬಲಗೊಂಡಿದ್ದು, ಮೂರನೇ ಪಂದ್ಯ ಭಾನುವಾರ ನಡೆಯಲಿದೆ. ಅಂದ ಹಾಗೆ ಎರಡನೇ ಪಂದ್ಯದಲ್ಲಿ ಅಕ್ಷರ್ ಪಟೇಲ್ (Axar Patel) ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು.
ಮುಂದಿನ ವರ್ಷದ ಟಿ20 ವಿಶ್ವಕಪ್ ದೃಷ್ಟಿಯಿಂದ ಭಾರತ ಮಧ್ಯಮ ಕ್ರಮಾಂಕದೊಂದಿಗೆ ಪ್ರಯೋಗ ನಡೆಸುತ್ತಿದೆ. ಈ ಸ್ವರೂಪದಲ್ಲಿ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ನಿರ್ಣಾಯಕವಾಗಿದೆ ಎಂದು ತಿಲಕ್ ಹೇಳಿದರು. "ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ ಎಲ್ಲರೂ ಯಾವುದೇ ಸ್ಥಾನದಲ್ಲಿ ಆಡಬಹುದು. ತಂಡಕ್ಕೆ ನನ್ನ ಅಗತ್ಯವಿರುವಲ್ಲೆಲ್ಲಾ ನಾನು ಮೂರನೇ ಸ್ಥಾನದಿಂದ ಆರನೇ ಸ್ಥಾನದವರೆಗೆ ಎಲ್ಲಿ ಬೇಕಾದರೂ ಆಡಬಹುದು," ಎಂದು ಅವರು ಎರಡನೇ ಪಂದ್ಯಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
IND vs SA 3rd T20I: ಭಾರತದ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ವಿವರ!
"ಪ್ರತಿಯೊಂದು ತಂಡವು ಒಂದು ನಿರ್ಧಾರವು ಕಾರ್ಯತಂತ್ರದ ಭಾಗವೆಂದು ಭಾವಿಸಿದರೆ ಎಲ್ಲರೂ ಅದನ್ನು ಒಪ್ಪುತ್ತಾರೆ," ಎಂದು ಅವರು ಹೇಳಿದರು. ಪರಿಸ್ಥಿತಿಯನ್ನು ನೋಡಿದ ನಂತರವೇ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಲಕ್ ತಿಳಿಸಿದ್ದಾರೆ.
ತಿಲಕ್ ಟೀಮ್ ಮ್ಯಾನೇಜ್‌ಮೆಂಟ್‌ನ ನಿರ್ಧಾರಗಳನ್ನು ಸಮರ್ಥಿಸಿಕೊಂಡರು. "ಒಂದು ಕೆಟ್ಟ ಪಂದ್ಯ ಸಂಭವಿಸಬಹುದು. ಅಕ್ಷರ್ ಪಟೇಲ್ ಇಲ್ಲಿ ಉತ್ತಮ ಪ್ರದರ್ಶನ ನೀಡಿದರು. ಅದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ," ಎಂದು ಅವರು ಹೇಳಿದರು. ಶೀತ ಹವಾಮಾನದ ಹೊರತಾಗಿಯೂ, ಧರ್ಮಶಾಲಾ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಬಹುದು ಎಂದು ಅವರು ಹೇಳಿದರು. "ನಾನು ಈ ಹಿಂದೆ ಇಲ್ಲಿ ಭಾರತ ಪರ 19 ವರ್ಷದೊಳಗಿನವರ ಸರಣಿಯಲ್ಲಿ ಆಡಿದ್ದೇನೆ. ನಾವು ವಿಕೆಟ್ ಅನ್ನು ನೋಡುತ್ತಿದ್ದೇವೆ ಮತ್ತು ಬಹಳಷ್ಟು ರನ್‌ಗಳು ಗಳಿಸಲ್ಪಡುತ್ತವೆ ಎಂದು ತೋರುತ್ತದೆ," ಎಂದು ಅವರು ಹೇಳಿದ್ದಾರೆ.
IND vs SA: ಕ್ವಿಂಟನ್ ಡಿ ಕಾಕ್ ಅಬ್ಬರ, ಭಾರತ ತಂಡಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!
ಸಂಜೆ 7 ಗಂಟೆಗೆ ಆರಂಭವಾಗುವ ಪಂದ್ಯದಲ್ಲಿ ಇಬ್ಬನಿಯ ಪಾತ್ರಕ್ಕೆ ತಂಡ ಮಾನಸಿಕವಾಗಿ ಸಿದ್ಧವಾಗಿದೆ. ಈ ಬಗ್ಗೆ ತಿಲಕ್, "ಟಾಸ್ ನಮ್ಮ ಕೈಯಿಂದ ಹೊರಗಿದೆ. ಇಬ್ಬನಿಯ ಸವಾಲನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಮತ್ತು ಸ್ವಲ್ಪ ಒದ್ದೆಯಾದ ಚೆಂಡಿನೊಂದಿಗೆ ಅಭ್ಯಾಸ ಮಾಡಿದ್ದೇವೆ. ಇಲ್ಲಿನ ಹವಾಮಾನವು ಸಾಕಷ್ಟು ತಂಪಾಗಿದೆ, ಆದರೆ ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಮಾನಸಿಕವಾಗಿ ಬಲಿಷ್ಠರು ಎಲ್ಲೆಡೆ ಗೆಲ್ಲುತ್ತಾರೆ," ಎಂದು ತಿಳಿಸಿದ್ದಾರೆ.