ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2nd PUC Exam result: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಏ.9ರಂದು, ನೋಡುವುದು ಹೇಗೆ?

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈಗಾಗಲೇ ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಫಲಿತಾಂಶ ಬಿಡುಗಡೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ತಾಂತ್ರಿಕ ಕೆಲಸಗಳು ಹಾಗೂ ಅಂಕಗಳ ಕ್ರೋಡೀಕರಣ ಪ್ರಕ್ರಿಯೆ ಮುಗಿದಿದ್ದು, ಏಪ್ರಿಲ್ 9 ರಂದು ರಿಸಲ್ಟ್ ನೀಡಲು ಇಲಾಖೆ ಉತ್ಸುಕವಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಏ.9ರಂದು, ನೋಡುವುದು ಹೇಗೆ?

ದ್ವಿತೀಯ ಪಿಯುಸಿ ಫಲಿತಾಂಶ -

ಹರೀಶ್‌ ಕೇರ
ಹರೀಶ್‌ ಕೇರ Apr 7, 2026 12:16 PM

ಬೆಂಗಳೂರು, ಏ.07 : ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶವು ಏಪ್ರಿಲ್ 9 ರಂದು ಹೊರ ಬೀಳಲಿದೆ. ಈ ಕುರಿತು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಏಪ್ರಿಲ್ 9ರಂದು ಫಲಿತಾಂಶ ಹೊರ ಬೀಳಲಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈಗಾಗಲೇ ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಫಲಿತಾಂಶ ಬಿಡುಗಡೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಫಲಿತಾಂಶ ಪ್ರಕಟಣೆಯ ಕುರಿತು ಇಲಾಖೆಯು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಈಗಾಗಲೇ ಪತ್ರ ಬರೆದಿದೆ. ಸಚಿವರ ಲಭ್ಯತೆಯನ್ನು ಆಧರಿಸಿ ಅಧಿಕೃತವಾಗಿ ಫಲಿತಾಂಶ ಹೊರಬೀಳಲಿದೆ. ತಾಂತ್ರಿಕ ಕೆಲಸಗಳು ಹಾಗೂ ಅಂಕಗಳ ಕ್ರೋಡೀಕರಣ ಪ್ರಕ್ರಿಯೆ ಮುಗಿದಿದ್ದು, ಏಪ್ರಿಲ್ 9 ರಂದು ರಿಸಲ್ಟ್ ನೀಡಲು ಇಲಾಖೆ ಉತ್ಸುಕವಾಗಿದೆ.

ಇನ್ನು ಪ್ರಕಟ ಆಗುವ ಫಲಿತಾಂಶವನ್ನು ನೋಡುವುದು ಹೇಗೆ ಎಂಬ ಗೊಂದಲಗಳು ವಿದ್ಯಾರ್ಥಿಗಳಿಗೆ ಇರಬಹುದು. ಫಲಿತಾಂಶ ಪಡೆಯಲು ಹಲವು ಲಿಂಕ್​​​ಗಳನ್ನು ಶಿಕ್ಷಣ ನೀಡಿದೆ. karresults.nic.in ಮತ್ತು kseab.karnataka.gov.in ಅನ್ನು ಶಿಕ್ಷಣ ಇಲಾಖೆ ನೀಡಿದೆ. ಒಂದು ವೇಳೆ ಈ ಲಿಂಕ್​​ಗಳಲ್ಲಿ ದೋಷ ಬಂದರೆ, ಇತರ ಆಯ್ಕೆಯನ್ನು ಕೂಡ ನೀಡಲಾಗಿದೆ. PUC ಫಲಿತಾಂಶಗಳನ್ನು ಡಿಜಿಲಾಕರ್ ವೆಬ್‌ಸೈಟ್ – digilocker.gov.in ನಲ್ಲಿಯೂ ಪರಿಶೀಲಿಸಲು ಅವಕಾಶವನ್ನು ನೀಡಲಾಗಿದೆ.

2nd PUC Result 2026: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಲ್ಲ; ಮತ್ತೆ ಯಾವಾಗ ಬಿಡುಗಡೆ?