ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

5,000 ಕೋಟಿ ರೂ. ಎಲ್ಲಿ ಹೋಗಿದೆ ಎಂದು ಹೇಳುವಿರಾ? ಸಿದ್ದರಾಮಯ್ಯಗೆ ಸುರೇಶ್​​ ಕುಮಾರ್ ಬಹಿರಂಗ ಪತ್ರ

ಗೃಹಲಕ್ಷ್ಮಿ ಯೋಜನೆಗೆ ಮೀಸಲಿರಿಸಿದ್ದ 5,000 ಕೋಟಿ ರೂ. ಎಲ್ಲಿದೆ ಮಾನ್ಯ ಸಿದ್ದರಾಮಯ್ಯನವರೇ? ಎಂದು ಬಿಜೆಪಿ ನಾಯಕ ಸುರೇಶ ಕುಮಾರ್ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಸುರೇಶ್ ಕುಮಾರ್ ಅವರು ಬರೆದಿರುವ ಈ ಪತ್ರ ಸಾಮಾಜಿಕ ವೈರಲ್ ಆಗಿದೆ.

ಸಿದ್ದರಾಮಯ್ಯ ಅವರಿಗೆ ಸುರೇಶ್​​ ಕುಮಾರ್ ಬಹಿರಂಗ ಪತ್ರ

ಸಂಗ್ರಹ ಚಿತ್ರ -

ಬೆಂಗಳೂರು: ಪಕ್ಷದ ಹೈಕಮಾಂಡ್ (Congress high Command) ಸೂಚನೆಯಂತೆ ನೀವು ರಾಜೀನಾಮೆ ನೀಡಿದ್ದೀರಿ. ಮುಂದೆ ಹೊಸ ನಾಯಕನ ಆಯ್ಕೆ ಮಾಡಲಾಗುತ್ತದೆ. ನಿಮ್ಮ ಮುಂದಿನ ದಿನಗಳು ಶುಭಕರವಾಗಿರಲಿ ಎನ್ನುವ ಹಾರೈಕೆಯೊಂದಿಗೆ ನಿಮ್ಮಲ್ಲಿ ಒಂದು ಪ್ರಶ್ನೆ. 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ (Gruhalakshmi Yojana) ಹಣ ರಾಜ್ಯದ ಕುಟುಂಬಗಳಿಗೆ ತಲುಪಿಲ್ಲ. ಇದರ ಒಟ್ಟು ಮೊತ್ತ 5000 ಕೋಟಿ ರೂ. ಈ ಹಣ ಎಲ್ಲಿಗೆ ಹೋಗಿದೆ ಎಂಬುದನ್ನು ತಿಳಿಸಿ ಎಂದು ಬಿಜೆಪಿ ನಾಯಕ ಸುರೇಶ್​​ ಕುಮಾರ್ (BJP leader Suresh Kumar) ಅವರು ಸಿದ್ದರಾಮಯ್ಯ (former cm siddaramaiah) ಅವರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಅವರು ಬರೆದಿರುವ ಪತ್ರದಲ್ಲಿ ಈ ರೀತಿ ಹೇಳಿದ್ದಾರೆ.. ಮಾನ್ಯ ಸಿದ್ದರಾಮಯ್ಯನವರೇ ನಮಸ್ಕಾರ, ಪಕ್ಷದ ಸೂಚನೆಯಂತೆ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೀರಿ. ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ನಾಯಕನ ಆಯ್ಕೆ ಮಾಡಲಾಗುತ್ತದೆ. ತಮ್ಮ ಮುಂದಿನ ದಿನಗಳು ಶುಭಕರವಾಗಿರಲಿ. ಈ ಸಂದರ್ಭದಲ್ಲಿ ಒಂದು ವಿನಮ್ರ ವಿನಂತಿ. ತಾವು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ ಜೊತೆಗೆ ಹಣಕಾಸು ಸಚಿವರು ಕೂಡ ಆಗಿದ್ದೀರಿ. ದೇಶದಲ್ಲೇ ದಾಖಲೆ ಸಂಖ್ಯೆಯ ಬಜೆಟ್ ಮಂಡಿಸಿದ ಹೆಗ್ಗಳಿಕೆ ನಿಮ್ಮದಾಗಿದೆ. ನೀವು ಒಂದು ರೀತಿ ನಮ್ಮ ರಾಜ್ಯದ ಆರ್ಥಿಕ ತಜ್ಞರು ಕೂಡ ಆಗಿದ್ದೀರಿ.

ಯಶವಂತಪುರ-ವಿಜಯಪುರ ದ್ವೈಸಾಪ್ತಾಹಿಕ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಅಸ್ತು

ಕಳೆದ ವರ್ಷಾಂತ್ಯದಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಗೃಹಲಕ್ಷ್ಮಿ ಯೋಜನೆಯಲ್ಲಿ ನಡೆದಿರುವ ವಂಚನೆ ಬಗ್ಗೆ ಗಮನ ಸೆಳೆದಿದ್ದರು. 5000 ಕೋಟಿ ರೂ. ಎಂದರೆ ಸಣ್ಣ ಮೊತ್ತವಲ್ಲ. ಆಗ ಅವರ ಪ್ರಶ್ನೆಗೆ ಸರ್ಕಾರ ನಿರುತ್ತರವಾಗಿತ್ತು. ಈ ಹಣ ಫಲಾನುಭವಿಗಳಿಗೆ ತಲುಪದಿರುವುದು ರಾಜ್ಯದ ತಿಜೋರಿಯಲ್ಲಾಗಿರುವ ಬಹುದೊಡ್ಡ ಲೂಟಿಯಾಗಿದೆ.



ರಾಜ್ಯದ ಜನತೆಯಿಂದ ಸಂಗ್ರಹ ಮಾಡಿರುವ ತೆರಿಗೆಯ ಪ್ರತಿಯೊಂದು ಪೈಸೆಗೂ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಹೀಗಾಗಿ ಗೃಹಲಕ್ಷ್ಮಿಯರಿಗೆ ತಲುಪದ ಹಣ ಎಲ್ಲಿ, ಯಾರಿಗೆ ಹೋಗಿದೆ ಎಂಬುದಕ್ಕೆ ತಾವು ಉತ್ತರ ನೀಡಬೇಕಿದೆ ಎಂದು ಸುರೇಶ್ ಕುಮಾರ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.

Bengaluru Rains: ಬೆಂಗಳೂರಿನಲ್ಲಿ ಭಾರಿ ಮಳೆಗೆ ಗೋಡೆ ಕುಸಿದು ಆಟೋ ಚಾಲಕ ಸಾವು

ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಸರತ್ತು ಸಿದ್ದರಾಮಯ್ಯ ಅವರ ರಾಜೀನಾಮೆಯೊಂದಿಗೆ ಕೊನೆಗೊಂಡಿದೆ. ಆದರೆ ಇದರ ಬೆನ್ನಲ್ಲೇ ಗೃಹ ಲಕ್ಷ್ಮಿ ಯೋಜನೆಯಲ್ಲಿ ನಡೆದಿರುವ ವಂಚನೆಗೆ ಉತ್ತರಿಸಬೇಕಾದ ಜವಾಬ್ದಾರಿ ಸಿದ್ದರಾಮಯ್ಯ ಅವರಿಗೆ ಮಾತ್ರವಲ್ಲ ಮುಂದಿನ ಮುಖ್ಯಮಂತ್ರಿಯ ಮೇಲೆಯೂ ಇರಲಿದೆ. ಈ ನಡುವೆ ಬಿಜೆಪಿ ನಾಯಕ ಸುರೇಶ್​​ ಕುಮಾರ್ ಅವರ ಈ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.