ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bagalakote news: ಮಸೀದಿ ಗೋಡೆಯಲ್ಲಿ ʼಜೈ ಶ್ರೀರಾಮ್‌ʼ ಎಂದು ಮಗನಿಂದ ಬರೆಸಿದ ವ್ಯಕ್ತಿ, ಬಾಗಲಕೋಟೆ ಮತ್ತೆ ಪ್ರಕ್ಷುಬ್ಧ

ಬಾಗಲಕೋಟೆಯ ಸೆಕ್ಟರ್ 44ರ ಮಸೀದಿ ಕಾಂಪೌಂಡ್‌ ಮೇಲೆ ಬರಹ ಬರೆದು ಬಳಿಕ ಆಟೋದಲ್ಲಿ ತೆರಳುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಪ್ರಕರಣ ಸಂಬಂಧ ನವನಗರ ಠಾಣೆ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಮಸೀದಿ ಮೇಲೆ ಮಗನಿಂದ ʼಜೈ ಶ್ರೀರಾಮ್‌ʼ ಬರೆಸಿದ ವ್ಯಕ್ತಿ, ಬಾಗಲಕೋಟೆ ಬಿಗು

ಬಾಗಲಕೋಟೆ ಮಸೀದಿ ಗೋಡೆ ಮೇಲೆ ಬರಹ -

ಹರೀಶ್‌ ಕೇರ
ಹರೀಶ್‌ ಕೇರ Mar 7, 2026 8:27 AM

ಬಾಗಲಕೋಟೆ, ಮಾರ್ಚ್ 07: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣದಿಂದ (Stone Pelting Case) ಉಂಟಾಗಿದ್ದ ಪ್ರಕ್ಷುಬ್ಧತೆ ಕಡಿಮೆಯಾಗುವ ಮುನ್ನವೇ ಬಾಗಲಕೋಟೆಯಲ್ಲಿ (Bagalakote news) ಮತ್ತೊಂದು ಕೋಮು ಸೌಹಾರ್ದತೆ ಹಾಳು ಮಾಡುವ ಘಟನೆ ನಡೆದಿದೆ. ಮಸೀದಿ (Masjid) ಗೋಡೆ ಮೇಲೆ ವ್ಯಕ್ತಿಯೋರ್ವ ತನ್ನ ಮಗನ ಕೈಯಿಂದ ಜೈ ಶ್ರೀರಾಮ್‌ (Jai Sriram) ಎಂದು ಬರೆಯಿಸಿದ್ದು, ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ.

ಬಾಗಲಕೋಟೆಯ ಸೆಕ್ಟರ್ 44ರ ಮಸೀದಿ ಕಾಂಪೌಂಡ್‌ ಮೇಲೆ ಬರಹ ಬರೆದು ಬಳಿಕ ಆಟೋದಲ್ಲಿ ತೆರಳುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಪ್ರಕರಣ ಸಂಬಂಧ ನವನಗರ ಠಾಣೆ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮೊದಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಗೋಡೆ ಮೇಲೆ ಬರೆದಿದ್ದ ಬರಹವನ್ನು ನೀರು ಹಾಕಿ ಅಳಿಸಿ ಸಮಾಧಾನಪಡಿಸಿದ್ದಾರೆ. 12 ವರ್ಷದ ಮಗುವಿನ ಕೈಯಿಂದ ಮಸೀದಿ ಗೋಡೆ ಮೇಲೆ ಜೈ ಶ್ರೀರಾಮ್ ಎಂದು ಬರೆದಿರುವ ಸಂಬಂಧ ಲಾಡಖಾನ್ ಎಂಬವರು ನೀಡಿದ ದೂರಿನ ಮೇರೆಗೆ ನವನಗರ ಠಾಣೆಯಲ್ಲಿ FIR ದಾಖಲಾಗಿದ್ದು, ಈ ಬಗ್ಗೆ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಕೈಗೊಂಡಿರುವ ಪೊಲೀಸರು, ಅಲರ್ಟ್ ಆಗಿದ್ದಾರೆ.

kalaburagi news: ಬಾಗಲಕೋಟೆ ಬಳಿಕ ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಮಾರಾಮಾರಿ

ಮೊನ್ನೆಯಷ್ಟೇ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮುಸ್ಲಿಮರು ಕಲ್ಲು, ಚಪ್ಪಲಿ ತೂರಿದ್ದರು. ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಹಿಂದೂ ಮುಸ್ಲಿಮರ ನಡುವಿನ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಹಿಂದೂ ಸಂಘಟನೆಗಳು ಬಿಜೆಪಿ ನಾಯಕರು ಸಿಡಿದೆದ್ದು ಘಟನೆ ನಡೆದ ಸ್ಥಳದಿಂದಲೇ ಮತ್ತೆ ಶಿವಾಜಿ ಮೆರವಣಿಗೆ ಮಾಡುತ್ತೇವೆಂದು ಪಟ್ಟು ಹಿಡಿದಿದ್ದರು. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಪೊಲೀಸರು ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರು. ಈ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.