ರೀಲ್ಸ್‌ಗಾಗಿ ಇದೆಂಥ ಅಸಹ್ಯ ಸಾಹಸ; ಚರಂಡಿ ನೀರಿನಲ್ಲಿ ಆಹಾರ ಅದ್ದಿ ತಿಂದ ಯುವಕ
Viral Video: ಹೆಚ್ಚಿನ ಲೈಕ್ ಹಾಗೂ ವೀವ್ಸ್‌ಗಾಗಿ ಯುವಕರು ನಾನಾ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇನ್‌ಫ್ಲುಯೆನ್ಸರ್ ಒಬ್ಬ ಕೇವಲ ವೀಕ್ಷಣೆಗಾಗಿ ಚರಂಡಿ ನೀರಿನಲ್ಲಿ ಆಹಾರ ಅದ್ದಿ ತಿನ್ನುವ ವಿಡಿಯೊವೊಂದು ವೈರಲ್ ಆಗಿದೆ. ಈ ದೃಶ್ಯ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು ಅಸಹ್ಯ ಎಂದು ಕಿಡಿಕಾರಿದ್ದಾರೆ.
ಚರಂಡಿ ನೀರಿನಲ್ಲಿ ಆಹಾರ ಅದ್ದಿ ತಿಂದ ಯುವಕ -
ನವದೆಹಲಿ, ಏ. 30: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎನ್ನುವ ಉದ್ದೇಶದಿಂದ ಅಪಾಯಕಾರಿ, ವಿಚಿತ್ರ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಲೈಕ್ ಹಾಗೂ ವೀವ್ಸ್‌ಗಾಗಿ ಯುವಕರು ನಾನಾ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇನ್‌ಫ್ಲುಯೆನ್ಸರ್ ಒಬ್ಬ ಕೇವಲ ವೀಕ್ಷಣೆಗಾಗಿ ಚರಂಡಿ ನೀರಿನಲ್ಲಿ ಆಹಾರ ಅದ್ದಿ ತಿನ್ನುವ ವಿಡಿಯೊ ವೈರಲ್ (Viral News) ಆಗಿದೆ. ಈ ದೃಶ್ಯ ನೋಡಿದ ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದು ಅಸಹ್ಯ ಎಂದು ಕಿಡಿಕಾರಿದ್ದಾರೆ.
ಪುನೀತ್ ಸೂಪರ್‌ಸ್ಟಾರ್ ಎಂದು ಕರೆಸಿಕೊಳ್ಳುವ ಈತ ಸೋಷಿಯಲ್ ಮೀಡಿಯಾದಲ್ಲಿ ಅತಿರೇಕದ ರೀಲ್ಸ್ ಮಾಡುವುದಕ್ಕೆ ಹೆಸರುವಾಸಿ. ಇತ್ತೀಚೆಗೆ ಚರಂಡಿ ನೀರಿನಲ್ಲೆ ಆಹಾರವನ್ನು ಮುಳುಗಿಸಿ ಅದ್ದಿ ತಿಂದಿದ್ದಾನೆ. ತನ್ನ ಕೈಯಲಿದ್ದ ಚೋಲೆ ಕುಲ್ಚೆಯನ್ನು ಕೊಳಚೆ ನೀರಿನಲ್ಲಿ ಮುಳುಗಿಸಿ ತಿಂದಿದ್ದಾನೆ.
ವಿಡಿಯೊ ನೋಡಿ:
मानती हूं सोशल मीडिया influencer क़ा दौर है, और लोग अच्छी कमाई कर लेते हैँ पर.......
— Nalini (@Nalini9452) April 28, 2026
इस हद तक जाकर नाले में डुबकी लगाना और गंदे पानी का सेवन करना 🤮... ये तो सरासर जाहिलियत है, कहीं कोई ऐसी वैसी बीमारी हो गयी तो लेने के देने भी पड़ सकते है... pic.twitter.com/OfbT2F2vdW
ವೈರಲ್ ಆಗಿರುವ ದೃಶ್ಯದಲ್ಲಿ ಆತ ಚರಂಡಿ ನೀರಿನ ಬಳಿ ನಿಂತಿರುವ ದೃಶ್ಯ ಕಾಣಬಹುದು. ಆತ ವಿಡಿಯೊದಲ್ಲಿ ''ಇಂದು ನಾನು ‘ನಲಾ ಕೆಫೆ’ಗೆ ಬಂದಿದ್ದೇನೆ. ಅಂದರೆ ಚರಂಡಿ ಕೆಫೆ. ನಾನು ಚೋಲೆ ಕುಲ್ಚೆ ತಿನ್ನುತ್ತೇನೆ'' ಎಂದು ಹೇಳಿದ್ದಾನೆ. ವಿಡಿಯೊದಲ್ಲಿ ಆತ ಚರಂಡಿ ನೀರಿನಲ್ಲಿ ಚೋಲೆ ಕುಲ್ಚೆಯನ್ನು ಅದ್ದಿ ಸೇವಿಸುವುದನ್ನು ತೋರಿಸಲಾಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ. ಇಂತಹ ಹುಚ್ಚುತನ ಪ್ರದರ್ಶನ ಮಾಡುವ ಜನರಿಗೆ ಏನು ಹೇಳಬೇಕು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ನೆಟ್ಟಿಗರ ಆಕ್ರೋಶ
ಒಬ್ಬರು "ಇಂತಹ ವ್ಯಕ್ತಿಗಳೇ ಭಾರತದ ಚಿತ್ರಣವನ್ನು ಕಳಂಕಗೊಳಿಸುತ್ತಿದ್ದಾರೆ” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಭಾರತ ಗಂಭೀರ ದೇಶವಾಗಿದ್ದರೆ ಈ ವ್ಯಕ್ತಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡಿದ್ದಕ್ಕಾಗಿ ಇಷ್ಟೊತ್ತಿಗಾಗಲೇ ಜೈಲಿನಲ್ಲಿರುತ್ತಿದ್ದ. ಈತ ವರ್ಷಗಳಿಂದ ಪದೆ ಪದೇ ಇಂತಹ ಕೆಲಸ ಮಾಡುತ್ತಿದ್ದಾನೆʼʼ ಎಂದಿದ್ದಾರೆ.
ಕೊಳಚೆ ನೀರಿನಲ್ಲಿ ಹಾನಿಕಾರಕ ಕ್ರಿಮಿಗಳಿರುತ್ತವೆ. ಇವು ಆರೋಗ್ಯಕ್ಕೆ ಹಾನಿ ಮಾಡಬಹುದು. ಇಂತಹ ಕೃತ್ಯಗಳನ್ನು ತೋರಿಸುವುದು ತಪ್ಪು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ಪುನೀತ್ ಸೂಪರ್‌ಸ್ಟಾರ್ ಈ ಹಿಂದೆಯೂ ಅರ್ಥ ಇಲ್ಲದ ವಿಡಿಯೊ ಚಿತ್ರೀಕರಿಸಿದ್ದಾನೆ. ಮೈಮೇಲೆ ಫಿನಾಯಿಲ್ ಹಾಕಿಕೊಳ್ಳುವುದು, ಕೆಸರು ನೀರು ಸುರಿದುಕೊಳ್ಳುವುದು ಹೀಗೆ ವಿಚಿತ್ರಕಾರಿ ವಿಡಿಯೊ ಮಾಡುತ್ತಾನೆ.