ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagalkot News: ಪಿಕೆಪಿಎಸ್‌ ಚುನಾವಣೆ ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ

PKPS election: ಅಕ್ಟೋಬರ್ 29ರಂದು ರನ್ನಬೆಳಗಲಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ‌-ಉಪಾಧ್ಯಕ್ಷ ಚುನಾವಣೆ ವೇಳೆ ಗಲಭೆ ನಡೆದಿದೆ. ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಲ್ಲದೆ ಕೋಲಿನಿಂದ ಬಡಿದಾಡಿಕೊಂಡಿದ್ದಾರೆ. ಪರಿಸ್ಥಿತಿ ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ಪಿಕೆಪಿಎಸ್ ಚುನಾವಣೆ ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ

-

Prabhakara R Prabhakara R Nov 2, 2025 6:55 PM

ಬಾಗಲಕೋಟೆ, ನ.2: ಕೃಷಿ ಸಹಕಾರ ಸಂಘದ ಚುನಾವಣೆ (ಪಿಕೆಪಿಎಸ್) ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆ (Bagalkot News) ಮುಧೋಳ ತಾಲೂಕಿನ ರನ್ನಬೆಳಗಲಿಯಲ್ಲಿ ನಡೆದಿದೆ. ಎರಡೂ ಗುಂಪುಗಳ ಕಾರ್ಯಕರ್ತರು ಬಟ್ಟೆ ಹರಿಯುವ ರೀತಿ ಹೊಡೆದಾಡಿಕೊಂಡಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಅಕ್ಟೋಬರ್ 29ರಂದು ರನ್ನಬೆಳಗಲಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ‌-ಉಪಾಧ್ಯಕ್ಷ ಚುನಾವಣೆ ವೇಳೆ ಗಲಭೆ ನಡೆದಿದೆ. ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಲ್ಲದೆ ಕೋಲಿನಿಂದ ಬಡಿದಾಡಿಕೊಂಡಿದ್ದಾರೆ. ಕಾರ್ಯಕರ್ತರ ನಿಯಂತ್ರಣಕ್ಕೆ ಮುಧೋಳ ಪೊಲೀಸರು ಹರಸಾಹಸ‌ ಪಟ್ಟಿದ್ದು, ಲಘು ಲಾಠಿ ಪ್ರಹಾರ ಮಾಡಿ ಉದ್ರಿಕ್ತರನ್ನು ಚದುರಿಸಿದ್ದಾರೆ. ಪಿಕೆಪಿಎಸ್ ಕಚೇರಿ ಮುಂದೆಯೇ ಮಾರಾಮಾರಿ ನಡೆದಿದ್ದು, ಹೊಡೆದಾಟದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಕ್ಟೋಬರ್ 29ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿತ್ತು. ಅಂದೇ ಫಲಿತಾಂಶ ಬಿಡುಗಡೆ ಕೂಡ ಇತ್ತು. ಒಟ್ಟು 13 ಸದಸ್ಯರ ಪೈಕಿ 6 ಕಾಂಗ್ರೆಸ್ ಬೆಂಬಲಿತರು, 6 ಬಿಜೆಪಿ ಬೆಂಬಲಿತರು ಹಾಗೂ ಇತರೆ ಒಬ್ಬ ಅಭ್ಯರ್ಥಿ ಅಖಾಡದಲ್ಲಿದ್ದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಗದೀಶ್ ಮಾಳಗಿ, ಹರಳಯ್ಯ ಎಂಬುವರನ್ನು ಬಿಜೆಪಿಯವರು ತಮ್ಮತ್ತ ಸೆಳೆದಿದ್ದರು.

Bagalkot News (3)

ಈ ಸುದ್ದಿಯನ್ನೂ ಓದಿ | Murder Case: ಲೈಟ್ ಆಫ್ ವಿಚಾರಕ್ಕೆ ಗಲಾಟೆ; ಸಹೋದ್ಯೋಗಿಯನ್ನೇ ಹೊಡೆದು ಕೊಂದ ವ್ಯಕ್ತಿ

ಜಗದೀಶ್ ಮಾಳಗಿ, ಹರಳಯ್ಯ ಮತದಾನ ಮಾಡಲು ಪಿಕೆಪಿಎಸ್ ಕಚೇರಿಗೆ ಬಂದಿದ್ದರು. ಈ ವೇಳೆ ಸೊಸೈಟಿ ಒಳ ಹೋಗುವುದನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆಯಲು ಮುಂದಾದರು. ಆಗ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿದೆ.

ನಾಲೆಯಲ್ಲಿ ಕೊಚ್ಚಿ ಹೋದ ನಾಲ್ವರು ಮಕ್ಕಳು

ಶ್ರೀರಂಗಪಟ್ಟಣ: ಪ್ರವಾಸಕ್ಕೆ ಬಂದಿದ್ದ ಮದರಸಾದ ನಾಲ್ವರು ಮಕ್ಕಳು ನೀರಲ್ಲಿ ಕೊಚ್ಚಿ (Drown in water) ಹೋಗಿರುವುದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಬಳಿಯ ರಾಮಸ್ವಾಮಿ ನಾಲೆಯಲ್ಲಿ ನಡೆದಿದೆ. ಮೈಸೂರಿನ ಶಾಂತಿನಗರದ ಮದರಸಾದ ಮಕ್ಕಳಾದ ಹನಿ ‌(14), ಅರ್ಫಿನ್ (13), ತರ್ವೀನ್ (13) ನಾಪತ್ತೆ ಆಗಿದ್ದಾರೆ. ಇನ್ನು ಐಶಾ (13) ಎಂಬ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಜೀವ ಬಿಟ್ಟಿದ್ದಾಳೆ. ಕಾಣೆಯಾದವರ ಶೋಧ ಕಾರ್ಯ ನಡೆಯುತ್ತಿದೆ.

ಶಾಂತಿನಗರದ ಮದರಸಾದ ಮಕ್ಕಳನ್ನು ಪಿಕ್‌ನಿಕ್‌ಗೆ ಎಂದು ಕರೆದುಕೊಂಡು ಬರಲಾಗಿತ್ತು. ನೆನ್ನೆ ಸಂಜೆ 5.30ರ ಸಮಯಕ್ಕೆ ನಾಲೆ ಬಳಿ ಆಟವಾಡುವಾಗ ಮಕ್ಕಳು ನಾಲೆಗೆ ಇಳಿದಿದ್ದರು. ಆದರೆ ನೋಡು ನೋಡುತ್ತಿದ್ದಂತೆ ನಾಲ್ವರು ಮಕ್ಕಳು ಕೊಚ್ಚಿ ಹೋಗಿದ್ದರು. ಇದರಲ್ಲಿ ಬಾಲಕಿ ಐಶಾಳನ್ನು ಕಾಪಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ. ಇನ್ನು ಹನಿ, ಅರ್ಫಿನ್ ಹಾಗೂ ತರ್ವೀನ್ ನಾಪತ್ತೆ ಆಗಿದ್ದರು. ಈ ಸಂಬಂಧ ನೆನ್ನೆಯಿಂದಲೇ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ರಾತ್ರಿ ಆಗಿದ್ದರಿಂದ ನೆನ್ನೆ ಶೋಧ ಕಾರ್ಯ ಸ್ಥಗಿತ ಮಾಡಲಾಗಿತ್ತು. ಇಂದು ಶೋಧ ಕಾರ್ಯ ಮುಂದುವರಿಯಲಿದೆ. ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.