Karnataka CM Row: ಜನವರಿ 15ರೊಳಗೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಖ್ಯಾತ ಜ್ಯೋತಿಷಿ ಭವಿಷ್ಯ!
ಬಬಲೇಶ್ವರ ಜ್ಯೋತಿಷಿ ಮನೆತನದ ಬಾಗಲಕೋಟೆಯ ಖ್ಯಾತ ಜ್ಯೋತಿಷಿ ಉಲ್ಲಾಸ್ ಜೋಶಿ ಅವರು ರಾಜ್ಯ ರಾಜಕೀಯದ ಬಗ್ಗೆ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವುದು ಯಾವಾಗ ಎಂಬ ಬಗ್ಗೆ ಜ್ಯೋತಿಷಿ ಭವಿಷ್ಯ ನುಡಿದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ -
ಬೆಂಗಳೂರು, ಡಿ.22: ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ (Karnataka CM Row) ಚರ್ಚೆಗೆ ತುಸು ಬ್ರೇಕ್ ಬಿದ್ದಿತ್ತು. ಆದರೆ, ಇದೀಗ ಸಿಎಂ ಕುರ್ಚಿ ಬಗ್ಗೆ ಖ್ಯಾತ ಜ್ಯೋತಿಷಿಯೊಬ್ಬರು ಸ್ಫೋಟಕ ಭವಿಷ್ಯ ನುಡಿದಿದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವುದು ಯಾವಾಗ ಎಂಬ ಬಗ್ಗೆ ಮಾತನಾಡಿದ್ದಾರೆ.
ಹೌದು, ಬಬಲೇಶ್ವರ ಜ್ಯೋತಿಷಿ ಮನೆತನದ ಬಾಗಲಕೋಟೆಯ ಖ್ಯಾತ ಜ್ಯೋತಿಷಿ ಉಲ್ಲಾಸ್ ಜೋಶಿ ಅವರು ರಾಜ್ಯ ರಾಜಕೀಯದ ಬಗ್ಗೆ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ. ಜನವರಿ 15ರ ಒಳಗಾಗಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ. ಅಲ್ಲದೆ ಸಚಿವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಿದ್ದಾರೆ.

ಆ ರಾಘವೇಂದ್ರ ಸ್ವಾಮಿಗಳೇ ನನ್ನ ನಾಲಿಗೆಯಿಂದ ಇದನ್ನು ನುಡಿಸುತ್ತಾರೆ. ನಾನು ಮೊದಲಿಗೆ ಜಪಮಣಿ ಪಠಿಸುತ್ತಾ ರಾಘವೇಂದ್ರಸ್ವಾಮಿಗೆ ಪ್ರಶ್ನೆ ಹಾಕುತ್ತೇನೆ. ಅದಕ್ಕೆ ರಾಘವೇಂದ್ರ ಸ್ವಾಮಿಗಳು ಉತ್ತರಿಸುವುದನ್ನು ಭವಿಷ್ಯವಾಗಿ ಹೇಳುತ್ತೇನೆ. ಇಲ್ಲಿವರೆಗೆ ಅನೇಕರಿಗೆ ಭವಿಷ್ಯ ಹೇಳಿದ್ದು, ಅದು ಯಾವುದೂ ಸುಳ್ಳಾಗಿಲ್ಲ. ಯಾರಿಗೂ ನಾನು ಹೇಳಿದ್ದು ಸುಳ್ಳಾಗಿಲ್ಲ. ಜನವರಿ 15ರ ಒಳಗಾಗಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗ್ತಾರೆ' ಎಂದು ತಿಳಿಸಿದ್ದಾರೆ.
ಡೈರಿ ಸರ್ಕಲ್-ನಾಗವಾರ, ಸಿಲ್ಕ್ ಬೋರ್ಡ್-ಕೆ.ಆರ್.ಪುರ ಮೆಟ್ರೋ 2026ರ ಡಿಸೆಂಬರ್‌ಗೆ ಉದ್ಘಾಟನೆ
ವಿದ್ಯುತ್ ವ್ಯತ್ಯಯ; ಲಿಫ್ಟ್‌ನೊಳಗೆ ಸಿಲುಕಿದ ಡಿ.ಕೆ.ಶಿವಕುಮಾರ್
ಬೆಂಗಳೂರು: ವಿದ್ಯುತ್ ವ್ಯತ್ಯಯದಿಂದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಲಿಫ್ಟ್‌ನೊಳಗೆ ಸಿಲುಕಿಕೊಂಡ ಘಟನೆ ನಗರದ ಬಿಎಂಆರ್‌ಸಿಎಲ್ ಮುಖ್ಯ ಕಚೇರಿಯಲ್ಲಿ ನಡೆದಿದೆ. ಪ್ರಗತಿ ಪರಿಶೀಲನಾ ಸಭೆಗಾಗಿ ಬಿಎಂಆರ್‌ಸಿಎಲ್ ಕಚೇರಿಗೆ ಡಿಸಿಎಂ ಆಗಮಿಸಿದ ವೇಳೆ ಲಿಫ್ಟ್ ಹತ್ತಿ ಕಚೇರಿಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಪವರ್ ಕಟ್ ಆಗಿದ್ದು, ಡಿ.ಕೆ.ಶಿವಕುಮಾರ್ ಲಿಫ್ಟ್‌ನಲ್ಲಿ ಸಿಲುಕಿದ್ದಾರೆ.
ಡಿಸಿಎಂ ಲಿಫ್ಟ್‌ನಲ್ಲಿ ಸಿಲುಕಿದ್ದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಭದ್ರತಾ ಸಿಬ್ಬಂದಿ ಲಿಫ್ಟ್ ಬಾಗಿಲು ತೆರೆದಿದ್ದಾರೆ. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೊರಬಂದು ನೇರವಾಗಿ ಸಭೆಗೆ ತೆರಳಿದರು.