ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಪ್ರೇಯಸಿಯೊಂದಿಗೆ ಮದುವೆಗೆ ಹಠ; ಮಗನನ್ನೇ ಕೊಲೆಗೈದ ತಂದೆ, ಅಣ್ಣ!

Murder Case: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಚಿಕ್ಕನಂದಿಹಳ್ಳಿಯಲ್ಲಿ ಘಟನೆ ನಡೆದಿದೆ. ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಹಠ ಹಿಡಿದಿದ್ದ. ಪ್ರಾರಂಭದಲ್ಲಿ ಪೋಷಕರು ವಿರೋಧಿಸಿದ್ದರೂ ನಂತರ ವಿವಾಹಕ್ಕೆ ಒಪ್ಪಿದ್ದರು. ಆದರೆ, ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ತಂದೆ, ಅಣ್ಣ ಸೇರಿ ಹಲ್ಲೆ ಮಾಡಿ ಕೊಂದಿದ್ದಾರೆ.

ಪ್ರೇಯಸಿಯೊಂದಿಗೆ ಮದುವೆಗೆ ಹಠ; ಮಗನನ್ನೇ ಕೊಲೆಗೈದ ತಂದೆ, ಅಣ್ಣ!

Prabhakara R Prabhakara R Mar 9, 2025 8:06 PM

ಬೆಳಗಾವಿ: ಪ್ರೇಯಸಿಯೊಂದಿಗೆ ಮದುವೆ ಮಾಡಿಸುವಂತೆ ಹಠ ಹಿಡಿದ ಮಗನನ್ನು ತಂದೆ ಹಾಗೂ ಹಿರಿಯ ಸಹೋದರ ಸೇರಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಚಿಕ್ಕನಂದಿಹಳ್ಳಿಯಲ್ಲಿ ನಡೆದಿದೆ. ಮಂಜುನಾಥ್ ಉಳ್ಳಾಗಡ್ಡಿ (25) ಕೊಲೆಯಾದ ಯುವಕ. ತಂದೆ ನಾಗಪ್ಪ ಉಳ್ಳಾಗಡ್ಡಿ ಹಾಗೂ ಅಣ್ಣ ಗುರುಬಸಪ್ಪ ಉಳ್ಳಾಗಡ್ಡಿ ಆರೋಪಿ ಮಾಡಿದವರು.

ಮಂಜುನಾಥ್‌ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಹಠ ಹಿಡಿದಿದ್ದ. ಪ್ರಾರಂಭದಲ್ಲಿ ಪೋಷಕರು ವಿರೋಧಿಸಿದ್ದರೂ ನಂತರ ವಿವಾಹಕ್ಕೆ ಒಪ್ಪಿದ್ದರು. ಹೀಗಾಗಿ ನಿಶ್ಚಿತಾರ್ಥ ಮುಗಿದು, ಮಾರ್ಚ್ 12ರಂದು ಮಂಜುನಾಥ್ ಮದುವೆ ನಿಗದಿಯಾಗಿತ್ತು.

ಮದುವೆಗೆ ಸಿದ್ಧತೆ ನಡೆಯುತ್ತಿರುವ ನಡುವೆಯೇ ಮಂಜುನಾಥ್‌ ನಿತ್ಯ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ನೆನ್ನೆ ಕೂಡ ಕುಡಿದ ತಾಯಿಯೊಂದಿಗೆ ಜಗಳ ತೆಗೆದಿದ್ದ. ಇದರಿಂದ ಸಿಟ್ಟಿಗೆದ್ದ ತಂದೆ ಹಾಗೂ ಸಹೋದರ ಭೀಕರವಾಗಿ ಹಲ್ಲೆ ಮಾಡಿ ಕೊಂದಿದ್ದಾರೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಈ ಸುದ್ದಿಯನ್ನೂ ಓದಿ | Indigo Airlines: 83 ವರ್ಷದ ವೃದ್ಧೆಗೂ ಸಿಗದ ವ್ಹೀಲ್‌ಚೇರ್‌; ಏರ್‌ ಇಂಡಿಯಾ ಬಳಿಕ ಇಂಡಿಗೋ ಏರ್‌ಲೈನ್ಸ್‌ನಿಂದ ಎಡವಟ್ಟು

ಬೇಲೂರಿನಲ್ಲಿ ಪಾಳು ಬಿದ್ದ ಕಟ್ಟಡ ಕುಸಿದು ಮೂವರ ಸಾವು

ಹಾಸನ: ಪಾಳು ಬಿದ್ದಿದ್ದ ಕಟ್ಟಡ ಕುಸಿದು ಮೂವರು ದುರಂತ ಅಂತ್ಯ ಕಂಡಿರುವ ಘಟನೆ (Building collapse) ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ. ಬೀದಿ ಬದಿ ವ್ಯಾಪಾರಿಗಳಾಗಿದ್ದ ಅಶಾ ಹಾಗು ದೀಪಾ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸತ್ಯನಾರಾಯಣ ಎಂಬುವರಿಗೆ ಸೇರಿದ ಎಂಟು ಮಳಿಗೆಗಳಿದ್ದ ಹಳೆಯ ಕಟ್ಟಡ ಇದಾಗಿದ್ದು, ಇದರಲ್ಲಿ ವ್ಯಾಪಾರ ಮಾಡುತ್ತಿದ್ದರು. ಆದರೆ ಕಟ್ಟಡದ ಸಜ್ಜ ಬಿದ್ದು ಈ ದುರಂತ ಸಂಭವಿಸಿದೆ.

ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ದುರಂತ ನಡೆದಿದೆ.

ಕಟ್ಟಡದ ಅವಶೇಷದಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬೇಲೂರು ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Ranya Roa: ನನಗೂ ಈ ಪಕ್ರರಣಕ್ಕೂ ಸಂಬಂಧವಿಲ್ಲ, ಇಲ್ಲಿ ಸಿಲುಕಿಸಲಾಗಿದೆ; ವಕೀಲರ ಬಳಿ ಕಣ್ಣೀರಿಟ್ಟ ರನ್ಯಾ

ಚಿಕ್ಕಬಳ್ಳಾಪುರದಲ್ಲಿ ಕಾರು ಹೊತ್ತಿ ಉರಿದು ಇಬ್ಬರು ಸಜೀವ ದಹನ

ಚಿಕ್ಕಬಳ್ಳಾಪುರ: ಖಾಸಗಿ ಬಸ್‌ ಡಿಕ್ಕಿಯಾದ ಪರಿಣಾಮ ಕಾರು ಹೊತ್ತಿ ಉರಿದು ಇಬ್ಬರು ಸಜೀವ ದಹನವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗೇಟ್ ಬಳಿ ನಡೆದಿದೆ. ಕಾರಿನಲ್ಲಿದ್ದ ಒಬ್ಬ ಮಹಿಳೆ ಹಾಗೂ ಪುರುಷ ಸಜೀವದಹನವಾಗಿದ್ದು, ಮೃತರನ್ನು ಆಂಧ್ರ ಪ್ರದೇಶ ಮೂಲದ ಧನಂಜಯ ರೆಡ್ಡಿ(31ವ), ಕಲಾವತಿ(35ವ) ಮೃತರು ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನುಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭೀಕರ ಅಪಘಾತದಲ್ಲಿ ಕಾರು ಬೆಂಕಿಯಿಂದ ಹೊತ್ತಿ ಉರಿದಿದ್ದರೆ, ಬಸ್​​ ಪಲ್ಟಿಯಾಗಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮದನಪಲ್ಲಿ ನಿವಾಸಿಗಳಾದ ಇಬ್ಬರು ಸುಟ್ಟು ಕರಕಲಾಗಿದ್ದರೆ, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಖಾಸಗಿ ಬಸ್​ನಲ್ಲಿ ಪ್ರಯಾಣಿಕರೆಲ್ಲರೂ ಬಚಾವಾಗಿದ್ದಾರೆ.