ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಂಪತಕುಮಾರಯ್ಯ ಹಿರೇಮಠಗೆ ರಾಷ್ಟ್ರಮಟ್ಟದ ಭಾರತ ಜ್ಯೋತಿಷ್ಯ ವಿದ್ಯಾಭೂಷಣ ಸಮ್ಮಾನ-2026 ಪ್ರಶಸ್ತಿ

Hukkeri News: ಹುಕ್ಕೇರಿಯ ಹಿರೇಮಠದ ವೇದ ಪಾಠಶಾಲೆಯ ಮುಖ್ಯ ಅಧ್ಯಾಪಕ ವಿದ್ವಾನ್ ಸಂಪತಕುಮಾರಯ್ಯ ಹಿರೇಮಠ ಅವರಿಗೆ ರಾಷ್ಟ್ರಮಟ್ಟದ ಭಾರತ ಜ್ಯೋತಿಷ್ಯ ವಿದ್ಯಾಭೂಷಣ ಸಮ್ಮಾನ - 2026 ಪ್ರಶಸ್ತಿ ಲಭಿಸಿದ್ದು, ಹುಕ್ಕೇರಿ ಹಿರೇಮಠ ಸಂಸ್ಥಾನದ ದರ್ಬಾರ ಹಾಲಿನಲ್ಲಿ ಅವರನ್ನು ಸನ್ಮಾನಿಸಲಾಯಿತು.

ಸಂಪತಕುಮಾರಯ್ಯ ಹಿರೇಮಠಗೆ ಜ್ಯೋತಿಷ್ಯ ವಿದ್ಯಾಭೂಷಣ ಸಮ್ಮಾನ ಪ್ರಶಸ್ತಿ

-

Profile
Siddalinga Swamy Nov 26, 2026 7:41 PM

ಹುಕ್ಕೇರಿ, ನ.26: ಇಲ್ಲಿನ ಹಿರೇಮಠದ ವೇದ ಪಾಠಶಾಲೆಯ ಮುಖ್ಯ ಅಧ್ಯಾಪಕ ವಿದ್ವಾನ್ ಸಂಪತಕುಮಾರಯ್ಯ ಹಿರೇಮಠ ಅವರಿಗೆ ರಾಷ್ಟ್ರಮಟ್ಟದ ಭಾರತ ಜ್ಯೋತಿಷ್ಯ ವಿದ್ಯಾಭೂಷಣ ಸಮ್ಮಾನ - 2026 ಪ್ರಶಸ್ತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠ ಸಂಸ್ಥಾನದ ದರ್ಬಾರ ಹಾಲಿನಲ್ಲಿ ಅವರನ್ನು ಸನ್ಮಾನಿಸಲಾಯಿತು. ಶ್ರೀಮಠದ ಅಧಿಪತಿಗಳಾದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ದೆಹಲಿಯ ಜೀವನ ಫೌಂಡೇಶನ್ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗೆ ನಮ್ಮ ಗುರುಕುಲದ ಮುಖ್ಯಸ್ಥರು ಆಯ್ಕೆಯಾಗಿರುವುದು ತುಂಬಾ ಸಂತೋಷ ತಂದಿದೆ ಎಂದರು.

ಸಂಪತಕುಮಾರಯ್ಯ ಅವರು ಕಳೆದ 22 ವರ್ಷಗಳಿಂದ ಶ್ರೀಮಠದಲ್ಲಿ ಸಂಸ್ಕೃತ, ಜ್ಯೋತಿಷ್ಯ ಮತ್ತು ವೇದ ಪಾಠ ಹೇಳಿಕೊಡುತ್ತಿದ್ದಾರೆ. ಅವರಿಂದ ಕಲಿತ ಸಾವಿರಾರು ವಿದ್ಯಾರ್ಥಿಗಳು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಗೋವಾ ಸೇರಿದಂತೆ ಅನೇಕ ಭಾಗಗಳಲ್ಲಿ ಪುರೋಹಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಸಹ ಶಿಕ್ಷಕ ಉದಯಕುಮಾರ ಶಾಸ್ತ್ರೀ ಮಾತನಾಡಿ, ಗುರೂಜಿ ಅವರಿಂದಲೇ ನಾವು ವಿದ್ಯೆ ಕಲಿತಿದ್ದು, ಇಂದು ಅದೇ ಪಾಠಶಾಲೆಯಲ್ಲಿ ಸಹ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ಎಂದರು. ಇನ್ನೊರ್ವ ಸಹ ಶಿಕ್ಷಕರಾದ ನಿಶಾಂತ ಸ್ವಾಮಿ ಹಿರೇಮಠ ಅವರು, ಗುರೂಜಿ ನೀಡಿದ ವಿದ್ಯೆಯನ್ನೇ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಪತಕುಮಾರಯ್ಯ, ಇದನ್ನು ಪ್ರಶಸ್ತಿ ಎಂದು ಭಾವಿಸಿಲ್ಲ, ಗುರುವಿನ ಅನುಗ್ರಹ ಎಂದು ಭಾವಿಸಿ ಮುಂದೆ ನಡೆಯುತ್ತೇನೆ ಎಂದರು. ಈ ಸಂದರ್ಭದಲ್ಲಿ ವೇದ ಪಾಠಶಾಲೆಯ ವಿದ್ಯಾರ್ಥಿಗಳು ಗುರೂಜಿ ಅವರಿಗೆ ವಿಶೇಷ ಗೌರವ ಸಲ್ಲಿಸಿದರು.