ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Athani MLA Lakshman Savadi: ಜೋಡೆತ್ತಿನ ಗೆಲುವು ನಿಶ್ಚಿತ ; ಲಕ್ಷ್ಮಣ ಸವದಿ

ಅಥಣಿ ಕ್ಷೇತ್ರದದಲ್ಲಿ 125 ಮತದಾರರಲ್ಲಿ 122 ಜನ ಬೆಂಬಲ ನೀಡಿದ್ದಾರೆ. ಕಾಗವಾಡ ಕ್ಷೇತ್ರದಲ್ಲಿ 20 ಕ್ಕೂ ಹೆಚ್ಚು ಪಿಕೆಪಿಎಸ್ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ. ನಾವು ಯಾರಿಗೂ ಹಣ ಮತ್ತೊಂದು ಕೊಟ್ಟಿಲ್ಲ ಕೇವಲ ಊಟ ಮಾಡಿಸಿದ್ದೇವೆ. ಕ್ಷೇತ್ರದ ಜನ ಜೋಡೆತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಬೇಕೆಂಬ ಆಸೆ ಹೊಂದಿದ್ದು ಅವರ ಆಶೀರ್ವಾದದಿಂದ ಗೆಲ್ಲುತ್ತೇವೆ

ಜೋಡೆತ್ತಿನ ಗೆಲುವು ನಿಶ್ಚಿತ ; ಲಕ್ಷ್ಮಣ ಸವದಿ

ಅಥಣಿಯಿಂದ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಕ್ಷೇತ್ರದಿಂದ ರಾಜು ಕಾಗೆ ನಾಮಪತ್ರ ಸಲ್ಲಿಸಿದರು. -

Ashok Nayak Ashok Nayak Oct 11, 2025 12:32 AM

ಅಥಣಿಯಿಂದ ಲಕ್ಷ್ಮಣ ಸವದಿ, ಕಾಗವಾಡದಿಂದ ರಾಜು ಕಾಗೆ ನಾಮಪತ್ರ

ಅಪಾರ ಸಂಖ್ಯೆ ಬೆಂಬಲಿಗರ ಜೊತೆ ನಾಮಪತ್ರ ಸಲ್ಲಿಕೆ

ಬೆಳಗಾವಿ : 1995 ರಿಂದ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿರುವ ನಾನು ಈವರೆಗೂ ರಾಜ್ಯದಲ್ಲಿ ಅನೇಕ ಹುದ್ದೆ ಅಲಂಕರಿಸಿ ಜನರ ಸೇವೆ ಮಾಡಿದ್ದೇನೆ. ನಾನು ಯಾವುದೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಹೊಸಬರಿಗೆ ಅವಕಾಶ ಸಿಗಬೇಕು ಎಂಬುದು ನನ್ನ ಸ್ಪಷ್ಟ ನಿಲುವಾಗಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ( Athani MLA Lakshman Savadi) ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಅಥಣಿ ಹಾಗೂ ಕಾಗವಾಡ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ‌ನಾಮಪತ್ರ ಸಲ್ಲಿಸಿ‌ ಮಾತನಾಡಿದ ಇವರು. 1995 ರಲ್ಲಿ ನನ್ನನ್ನು ಡಿಸಿಸಿ ಬ್ಯಾಂಗ್ ಗೆ ಕಳಿಸಲು ರಾಜು ಕಾಗೆ ಪಾತ್ರ ಬಹಳ ಮುಖ್ಯ‌. ಈ ಕಾರಣಕ್ಕೆ ಈಗ ಅವರ ಋಣ ತೀರಿಸುವ ಸಮಯ ಬಂದಿದ್ದು ಜೋಡೆತ್ತು ಗೆದ್ದು ಬರುವ ವಿಶ್ವಾಸ ಇದೆ ಎಂದರು.

ಅಥಣಿ ಕ್ಷೇತ್ರದದಲ್ಲಿ 125 ಮತದಾರರಲ್ಲಿ 122 ಜನ ಬೆಂಬಲ ನೀಡಿದ್ದಾರೆ. ಕಾಗವಾಡ ಕ್ಷೇತ್ರದಲ್ಲಿ 20 ಕ್ಕೂ ಹೆಚ್ಚು ಪಿಕೆಪಿಎಸ್ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ. ನಾವು ಯಾರಿಗೂ ಹಣ ಮತ್ತೊಂದು ಕೊಟ್ಟಿಲ್ಲ ಕೇವಲ ಊಟ ಮಾಡಿಸಿದ್ದೇವೆ. ಕ್ಷೇತ್ರದ ಜನ ಜೋಡೆತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಬೇಕೆಂಬ ಆಸೆ ಹೊಂದಿದ್ದು ಅವರ ಆಶೀರ್ವಾದದಿಂದ ಗೆಲ್ಲುತ್ತೇವೆ ಎಂದರು.

ಇದನ್ನೂ ಓದಿ: Laxman Savadi: ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ ಕಾರು ಅಪಘಾತ; ಅಪಾಯದಿಂದ ಪಾರು

ಅಥಣಿ ಹಾಗೂ ಕಾಗವಾಡ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಹಸ್ತಕ್ಷೇಪ ಮಾಡಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಇವರು. ನಾಮಪತ್ರ ವಾಪಸ್ ಪಡೆಯುವ ದಿನಾಂಕದಂದು ಅವರು ಕೊಟ್ಟ ಮಾತಿಗೆ ಎಷ್ಟು ಬದ್ಧತೆಯಿಂದ ಇದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಈಗ ಯಾವುದೇ ಹೇಳಿಕೆ ನೀಡಿದರು ಅದಕ್ಕೆ ಬೆಲೆ ಇಲ್ಲ. ನಮ್ಮ ವಿರುದ್ಧ ಈಗಾಗಲೇ ನಾಮಪತ್ರ ಸಲ್ಲಿಕೆಯಾಗಿವೆ ಎಂದು ತಿರುಗೇಟು ನೀಡಿದರು.

ಶಾಸಕ ರಾಜು ಕಾಗೆ ( MLA Raju Kage) ಮಾತನಾಡಿ. ಐದು ಬಾರಿ ಶಾಸಕನಾಗಿರುವ ನನಗೆ ಸಹಕಾರಿ ಕ್ಷೇತ್ರ ಹೊಸದು. ಇದೇ ಮೊದಲಬಾರಿಗೆ ಡಿಸಿಸಿ ನಿರ್ದೇಶಕ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವೆ. ಈ ಮೊದಲು ಲಕ್ಷ್ಮಣ ಸವದಿ ಹಾಗೂ ನಾನು ಒಂದೇ ಕುಟುಂಬದಂತೆ ಇದ್ದಿದ್ದರಿಂದ ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದೇ. ಈ ಬಾರಿ ಕಾಗವಾಡ ಹೊಸ ತಾಲೂಕು ಆಗಿರುವುದರಿಂದ ಅವಕಾಶ ಸಿಕ್ಕಿದೆ. ಕ್ಷೇತ್ರದ ಮತದಾರರ ಬೆಂಬಲದಿಂದ ಗೆಲುವು ಸಾಧಿಸುವ ವಿಶ್ವಾಸ ಇದೆ ಎಂದರು.‌

ಈ ಸಂದರ್ಭದಲ್ಲಿ ಕೃಷ್ಣಾ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಮುಖಂಡರಾದ ಸುರೇಶ್ ಮಾಯಣ್ಣ ವರ, ಚಿದಾನಂದ ಸವದಿ, ಮಹಾದೇವ ಬಸಗೌಡರ್, ಸುಶೀಲಕುಮಾರ್ ಪತ್ತಾರ, ಸಂಜಯ್ ನಾಡಗೌಡ, ಅಶೋಕ್ ಐಗಿಳಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಪಿಕೆಪಿಎಸ್ ಮತದಾರರು ಉಪಸ್ಥಿತರಿದ್ದರು.