ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Former MLA Mahadevappa Yadav: ಡಿಸಿಸಿ ಚುನಾವಣೆಯಲ್ಲಿ ಗೆಲುವು ನಮ್ಮದೆ ; ಮಲ್ಲಣ್ಣ ಯಾದವಾಡ

ರಮೇಶ್ ಜಾರಕಿಹೊಳಿ ಸಂಪರ್ಕ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಇವರು. ಎರಡು ಬಾರಿ ಶಾಸಕನಾಗಿರುವ ನನಗೆ ಮತ್ತೊಬ್ಬರ ಸಂಪರ್ಕ ಮಾಡುವ ಅವಶ್ಯಕತೆ ಇಲ್ಲ. ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಬಹುಮತ ಪಡೆದಿದ್ದೇವೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ ಎಂದರು.

ಡಿಸಿಸಿ ಚುನಾವಣೆಯಲ್ಲಿ ಗೆಲುವು ನಮ್ಮದೆ ; ಮಲ್ಲಣ್ಣ ಯಾದವಾಡ

-

Ashok Nayak Ashok Nayak Oct 10, 2025 12:31 AM

ಬೆಳಗಾವಿ: ಕ್ಷೇತ್ರದ ಜನರ ಒತ್ತಾಯದ ಮೇರೆಗೆ ನನ್ನ ಸಹೋದರ ಡಿಸಿಸಿ ಬ್ಯಾಂಕ್ ‌ನಿರ್ದೇಶಕ ಸ್ಥಾನಕ್ಕೆ ರಾಮದುರ್ಗದಿಂದ ಸ್ಪರ್ಧೆ ಮಾಡಿದ್ದು, ಜನರ ಆಶಿರ್ವಾದದಿಂದ ಗೆಲ್ಲುವ ವಿಶ್ವಾಸ ಇದೇ ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ (Former MLA Mahadevappa Yadav) ಅಭಿಪ್ರಾಯಪಟ್ಟರು.

ನಗರದ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ರಾಮದುರ್ಗ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಮಲ್ಲಣ್ಣ ಯಾದವಾಡ ಅವರ ನಾಮಪತ್ರ ಸಲ್ಲಿಕೆ ನಂತರ ಪ್ರತಿಕ್ರಿಯೆ ನೀಡಿದರು.‌ ನಮಗೆ ಕ್ಷೇತ್ರದ ರೈತರ ಬೆಂಬಲದ ಜೊತೆಗೆ ನಾಯಕರ ಬೆಂಬಲವೂ ಇದೆ. ಬರುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೇ ಎಂದರು.

ಇದನ್ನೂ ಓದಿ: Bangalore News: ಐಬಿಎಸ್‌ ಬ್ಯುಸಿನೆಸ್‌ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ರಮೇಶ್ ಜಾರಕಿಹೊಳಿ ಸಂಪರ್ಕ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಇವರು. ಎರಡು ಬಾರಿ ಶಾಸಕನಾಗಿರುವ ನನಗೆ ಮತ್ತೊಬ್ಬರ ಸಂಪರ್ಕ ಮಾಡುವ ಅವಶ್ಯಕತೆ ಇಲ್ಲ. ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಬಹುಮತ ಪಡೆದಿದ್ದೇವೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ ಎಂದರು.

ಡಿಸಿಸಿ ನಿರ್ದೇಶಕ ಸ್ಥಾನದ ಅಭ್ಯರ್ಥಿ ಮಲ್ಲಣ್ಣ ಯಾದವಾಡ ಮಾತನಾಡಿ. ಮಹಾದೇವಪ್ಪ ಯಾದವಾಡ ಅವರ ಅಭಿವೃದ್ಧಿ ಕೆಲಸ ನೋಡಿ ಕ್ಷೇತ್ರದ ರೈತರು ಚುನಾವಣೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಎಲ್ಲಾ ನಾಯಕರ ಆಶಿರ್ವಾದಿಂದ ನಾನು ಗೆಲುವು ಸಾಧಿಸುವ ವಿಶ್ವಾಸ ಇದೇ ಎಂದರು.