ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI 2nd Test: ಇಂದಿನಿಂದ ವಿಂಡೀಸ್ ವಿರುದ್ಧ ಎರಡನೇ ಟೆಸ್ಟ್: ಸಿರಾಜ್‌ಗೆ ರೆಸ್ಟ್‌ ಸಾಧ್ಯತೆ

ರಾಹುಲ್ ತನ್ನ ಕೊನೆಯ ಆರು ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕ ಗಳಿಸಿ ಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ವೇವಿ ಮೊಹಮ್ಮದ್‌ ಸಿರಾಜ್‌ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅವರ ಸ್ಥಾನದಲ್ಲಿ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಅವಕಾಶ ಪಡೆಯಬಹುದು.

ಕ್ಲೀನ್‌ಸ್ವೀಪ್‌ನತ್ತ ಶುಭಮಾನ್ ಗಿಲ್ ಪಡೆ ಚಿತ್ತ; ಇಂದಿನಿಂದ 2ನೇ ಟೆಸ್ಟ್‌

-

Abhilash BC Abhilash BC Oct 10, 2025 8:19 AM

ನವದೆಹಲಿ: ಭಾರತ ಹಾಗೂ ವೆಸ್ಟ್‌ಇಂಡೀಸ್‌(IND vs WI 2nd Test) ನಡುವಿನ ಎರಡನೇ ಟೆಸ್ಟ್‌ ಪಂದ್ಯ ಇಂದು(ಗುರುವಾರ) ದೆಹಲಿಯ ಅರುಣ್‌ ಜೇಟ್ಲಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ(arun jaitley stadium) ಆರಂಭವಾಗಲಿದೆ. ಅಹಮದಾಬಾದ್‌(Ahmedabad)ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಕೇವಲ ಎರಡುವರೆ ದಿನದಲ್ಲಿ ಮುಕ್ತಾಯ ಕಂಡಿತ್ತು. ಈ ಪಂದ್ಯ ಎಷ್ಟು ದಿನಗಳ ವರೆಗೆ ಸಾಗಲಿದೆ ಎನ್ನುವುದು ಪಂದ್ಯದ ಕೌತುಕ.

ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ಭಾರತ, ಈ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್‌ಸ್ವೀಪ್‌ನೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ನಾಲ್ಕನೇ ಆವೃತ್ತಿಯಲ್ಲಿ ಪೂರ್ಣ ಅಂಕ ಕಲೆಹಾಕುವ ಗುರಿ ಹೊಂದಿದೆ.

ಪಂದ್ಯಕ್ಕೂ ಮುನ್ನ ದಿಗ್ಗಜರಾದ ವಿವಿ ರಿಚರ್ಡ್ಸ್, ಬ್ರಿಯಾನ್ ಲಾರಾ ಹಾಗೂ ರಿಚಿ ರಿಚರ್ಡ್ಸ್‌ನ್ ಅವರಂಥ ತಾರೆಯರು ವಿಂಡೀಸ್ ಆಟಗಾರರೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದರಿಂದ ರೋಸ್ಟನ್ ಚೇಸ್ ಬಳಗದಿಂದ ಸ್ಪರ್ಧಾತ್ಮಕ ಆಟದ ನಿರೀಕ್ಷೆ ಇದೆ. 1983ರಲ್ಲಿ ವಿಂಡೀಸ್ ಕೊನೆಯದಾಗಿ ಭಾರತದಲ್ಲಿ ಸರಣಿ ಜಯಿಸಿತ್ತು. ಆದರೆ ಈಗ ಕೇವಲ ಸಮಬಲ ಸಾಧಿಸುವ ಅವಕಾಶ ಮಾತ್ರ ಹೊಂದಿದೆ.

ಇದನ್ನೂ ಓದಿ ʻಅವರನ್ನು ಹೊಂದಿರುವುದು ಅದೃಷ್ಟʼ:ರವೀಂದ್ರ ಜಡೇಜಾ ಬಗ್ಗೆ ಶುಭಮನ್‌ ಗಿಲ್‌ ದೊಡ್ಡ ಹೇಳಿಕೆ!

ರಾಹುಲ್ ತನ್ನ ಕೊನೆಯ ಆರು ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕ ಗಳಿಸಿ ಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ವೇವಿ ಮೊಹಮ್ಮದ್‌ ಸಿರಾಜ್‌ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅವರ ಸ್ಥಾನದಲ್ಲಿ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಅವಕಾಶ ಪಡೆಯಬಹುದು.

ಬ್ಯಾಟಿಂಗ್‌ ಪಿಚ್‌

ಈ ಪಂದ್ಯಕ್ಕೆ ಬಳಸಲಾಗುವ ಕಪ್ಪು ಮಣ್ಣಿನ ಪಿಚ್‌ನಲ್ಲಿ ಅಲ್ಲಲ್ಲಿ ಹುಲ್ಲು ಬೆಳೆದಿದ್ದು, ಕೆಲವೆಡೆ ಮಣ್ಣು ಗೋಚರಿಸುತ್ತಿದೆ. ಇದು ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದ್ದು, ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆಯಿದೆ. ಆದರೆ, ಕ್ರಮೇಣ ಪಿಚ್‌ ಒಣಗುವುದರಿಂದ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ಸಾಧಿಸುವ ಸಾಧ್ಯತೆಯೂ ಇದೆ.