Self Harming: ಅಂತರ್ಜಾತೀಯ ಮದುವೆಯಾಗಿ ಬದುಕು ಕೊನೆಗೊಳಿಸಿಕೊಂಡ ಯುವತಿ
Intercaste Marriage: ಯುವಜೋಡಿ 4 ತಿಂಗಳ ಹಿಂದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮದುವೆಯಾದ ಕೆಲವೇ ದಿನಕ್ಕೆ ನಿಲೇಶ್ ಕೆಲಸ ಬಿಟ್ಟಿದ್ದ. ಅನಿತಾ ಕೂಡಾ 3 ತಿಂಗಳ ಗರ್ಭಿಣಿ ಆಗಿದ್ದಳು. ಸಣ್ಣಪುಟ್ಟ ವಿಷಯಕ್ಕೂ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿತ್ತು. ಜೊತೆಗೆ ಹುಡುಗನ ಮನೆಯವರು ಜಾತಿ ವಿಷಯದಲ್ಲಿ ತುಂಬಾ ಕಿರುಕುಳ ಕೊಡುತ್ತಿದ್ದರು.

ಮೃತ ಅನಿತಾ

ಬೆಳಗಾವಿ: ಅಂತರ್ಜಾತೀಯ ಮದುವೆಯೊದು (intercaste marriage) ದುರಂತದಲ್ಲಿ ಕೊನೆಗೊಂಡಿದೆ. ಮೇಲ್ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದೇ ಈಕೆಯ ಪಾಲಿಗೆ ಕಂಟಕವಾಗಿದೆ. 7 ವರ್ಷ ಪ್ರೀತಿಯನ್ನು ಕಾಪಾಡಿಕೊಂಡು ಮದುವೆಯಾದವಳು ಈಗ ನೇಣು ಹಾಕಿಕೊಂಡು (Self harming) ಮೃತಪಟ್ಟಿದ್ದಾಳೆ. ಬೆಳಗಾವಿ (Belagavi news) ತಾಲೂಕಿನ ಮಚ್ಚೆ ಗ್ರಾಮದ ವಿಜಯಗಲ್ಲಿ ನಿವಾಸಿಯಾಗಿರುವ ಅನಿತಾ, ವೈವಾಹಿಕ ಜೀವನದಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡವಳು. ಆದರೆ ಆಕೆಯ ಮನೆಯವರು ಇದು ಕೊಲೆ ಎಂದು ದೂರಿದ್ದಾರೆ.
ಅನಿತಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ತಮ್ಮೂರಿನ ನಿಲೇಶ್ ಎಂಬವರ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು. ಸುಮಾರು 7 ವರ್ಷದಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಇತ್ತೀಚಿಗೆ ಮಗನ ಪ್ರೀತಿ ವಿಷಯ ತಿಳಿದು ನಿತೀಶ್ ಮನೆಯವ್ರು ಸಿಟ್ಟಿಗೆದ್ದಿದ್ದರು. ಯಾಕೆಂದರೆ ಅನಿತಾ ದಲಿತ ಸಮುದಾಯದ ಹೆಣ್ಣುಮಗಳಾಗಿದ್ದು, ಮರಾಠಿಗನಾಗಿದ್ದ ಹುಡುಗನ ಜಾತಿ ಬೇರೆ ಇತ್ತು. ಹೀಗಾಗಿ ಮಗನ ಪ್ರೀತಿಗೆ ಒಪ್ಪಿಗೆ ಕೊಟ್ಟಿರಲಿಲ್ಲ.
ಆದರೂ ಧೃತಿಗೆಡದ ಯುವಜೋಡಿ 4 ತಿಂಗಳ ಹಿಂದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮದುವೆಯಾದ ಕೆಲವೇ ದಿನಕ್ಕೆ ನಿಲೇಶ್ ಕೆಲಸ ಬಿಟ್ಟಿದ್ದ. ಅನಿತಾ ಕೂಡಾ 3 ತಿಂಗಳ ಗರ್ಭಿಣಿ ಆಗಿದ್ದಳು. ಸಣ್ಣಪುಟ್ಟ ವಿಷಯಕ್ಕೂ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿತ್ತು. ಜೊತೆಗೆ ಹುಡುಗನ ಮನೆಯವರು ಜಾತಿ ವಿಷಯದಲ್ಲಿ ತುಂಬಾ ಕಿರುಕುಳ ಕೊಡುತ್ತಿದ್ದರು. ನಿನ್ನೆ ಅನಿತಾ ಏಕಾಏಕಿ ನೇಣು ಹಾಕಿಕೊಂಡಿದ್ದಾಳೆ. ಆಕೆಯ ಪೋಷಕರು, ಇದು ಆತ್ಮಹತ್ಯೆಯಲ್ಲ, ಇದರೇ ಕೊಂದು ನೇಣು ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Self Harming: ಸಹಪಾಠಿಗಳ ಕಿರುಕುಳ, ಡೆತ್ ನೋಟ್‌ನಲ್ಲಿ ಹೆಸರು ಬರೆದಿಟ್ಟು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ