Ahaan Panday: ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಸೂಪರ್ ಹಿಟ್ ಸೈಯಾರ ಜೋಡಿ- ಫೋಟೋ ವೈರಲ್
ಬಾಲಿವುಡ್ ನ ಸೈಯಾರ ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಬಾಲಿವುಡ್ನಲ್ಲಿ ತಮ್ಮ ಅದ್ಭುತ ಅಭಿನಯದಿಂದ ಜನಪ್ರಿಯರಾಗಿದ್ದಾರೆ. ಇತ್ತೀಚೆಗಷ್ಟೆ ಸೈಯಾರ ಸಿನಿಮಾ ಬಹುದೊಡ್ಡ ಯಶಸ್ಸು ಕಂಡಿದ್ದು ಅಭಿಮಾನಿಗಳ ಈ ಸಿನಿಮಾವನ್ನು ನೆಚ್ಚಿ ಕೊಂಡಿದ್ದಾರೆ. ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ನಟ ಅಹಾನ್ ಮತ್ತು ನಟಿ ಅನೀತ್ ಅವರು ಸಾರ್ವಜನಿಕ ಸ್ಥಳದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು ಇವರಿಬ್ಬರ ಬಗ್ಗೆ ಬಾಲಿವುಡ್ನಲ್ಲಿ ಹೊಸ ಗಾಸಿಪ್ ಒಂದು ಹರಿದಾಡುವಂತೆ ಮಾಡಿದೆ.



ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಇಬ್ಬರು ಕೂಡ ಇತ್ತೀಚೆಗಷ್ಟೆ ಚಿತ್ರದ ಸಕ್ಸಸ್ ಪಾರ್ಟಿ ಯಲ್ಲಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಅದಾದ ಬಳಿಕ ಲಕ್ಶೂರಿ ಹೊಟೇಲ್ಗೆ ಕೂಡ ಒಟ್ಟಿಗೆ ಹೋಗಿದ್ದಾರೆ. ಅನಂತರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿಯೂ ಹೀಗೆ ಅನೇಕ ಕಡೆ ಇಬ್ಬರು ಜೊತೆಯಾಗಿ ಕಾಣಿಸಿಕೊಂಡ ಕಾರಣ ಅವರು ರೀಲ್ ಜೋಡಿ ಅಲ್ಲ ರಿಯಲ್ ಜೋಡಿ ಎಂಬ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ. ಇತ್ತೀಚೆಗಷ್ಟೆ ಇವರಿಬ್ಬರು ಕಾರಿನಲ್ಲಿ ಪ್ರಯಾಣ ಮಾಡಿದ್ದ ಫೋಟೊ ಕೂಡ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಇವರಿಬ್ಬರು ಕಾರಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಹೊಸ ಗಾಸಿಪ್ ಸೃಷ್ಟಿಯಾಗುವಂತೆ ಮಾಡಿದೆ. ಇಬ್ಬರು ಜೊತೆಗೆ ಪ್ರಯಾಣ ಮಾಡುವ ಮೂಲಕ ಈ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ವೈರಲ್ ಆದ ಫೋಟೋದಲ್ಲಿ ಇವರಿಬ್ಬರು ವೆಸ್ಟರ್ನ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರೊಂದ ರಲ್ಲಿ ಅಕ್ಕ ಪಕ್ಕ ಕುಳಿತಿದ್ದು ಮಾತನಾಡುತ್ತಿರುವ ದೃಶ್ಯವನ್ನು ಕಾಣಬಹುದು. ಹಾಗಿದ್ದರೂ ಅವರಿ ಬ್ಬರು ಸಿನಿಮಾ ಹೊರತಾಗಿ ವೈಯಕ್ತಿಕ ಜೀವನದಲ್ಲಿಯು ರಿಯಲ್ ಜೋಡಿ ಆಗಬೇಕು ಎಂಬುದು ಅಭಿಮಾನಿಗಳ ಮನದಾಸೆಯಾಗಿದೆ.

ಆಶಿಕಿ–2’ ಖ್ಯಾತಿಯ ನಿರ್ದೇಶಕ ಮೋಹಿತ್ ಸೂರಿ ಅವರು ‘ಸೈಯಾರ’ದಲ್ಲಿಯೂ ಅದೇ ಜಾನರ್ ಇಟ್ಟುಕೊಂಡ ಕಾರಣಕ್ಕೆ ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎನ್ನ ಬಹುದು. 'ಸೈಯಾರ’ ಸಿನೆಮಾ ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು ಇತ್ತೀಚಿನ ತಲೆಮಾರಿಗೆ ಬೇಕಾದಂತೆ ಇಲ್ಲಿ ಕಥಾ ಹಂದರ ರಚಿಸಲಾಗಿದೆ. ಇದೇ ಕಾರಣಕ್ಕೆ ಯುವ ಸಮುದಾಯಕ್ಕೆ ಈ ಸಿನಿಮಾ ಬಹಳ ಇಷ್ಟವಾಗಿದೆ ಎನ್ನಬಹುದು.

‘ಹಮಾರಿ ಅದೂರಿ ಕಹಾನಿ’, ‘ಹಾಫ್ ಗರ್ಲ್ಫ್ರೆಂಡ್’ ಮುಂತಾದ ಚಿತ್ರಗಳಂತೆ ನರೇಶನ್ ವೇ ಬಹಳ ಅದ್ಭುತವಾಗಿ ಈ ಸಿನಿಮಾಕ್ಕೂ ಕೂಡ ನೀಡಲಾಗಿದೆ. ಈ ಮೂಲಕ ಪ್ರೇಕ್ಷಕರಿಗೆ ಈ ಸಿನಿಮಾ ಬಹಳ ಇಷ್ಟವಾದ ಕಾರಣ ಬಿಡುಗಡೆಯಾದ 11ನೇ ದಿನಕ್ಕೆ 250 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಬಾಲಿವುಡ್ನಲ್ಲಿ ಹೊಸ ಭರವಸೆ ಹುಟ್ಟುಹಾಕಿದ್ದಾರೆ.