Gurusiddappa Hebbalkar: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾವ ಗುರುಸಿದ್ದಪ್ಪ ಹೆಬ್ಬಾಳ್ಕರ್ ನಿಧನ
Gurusiddappa Hebbalkar: ಗುರುಸಿದ್ದಪ್ಪ ಹೆಬ್ಬಾಳ್ಕರ್ ಅವರು ಸಾಮಾಜಿಕ ಕಾರ್ಯಕರ್ತ ರವೀಂದ್ರ ಹೆಬ್ಬಾಳ್ಕರ್ ಅವರ ತಂದೆ ಮತ್ತು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾವ ಆಗಿದ್ದಾರೆ. ಇವರು ಬುಧವಾರ ಬೆಳಗ್ಗೆ 10 ಗಂಟೆಗೆ ವೃದ್ಧಾಪ್ಯದಿಂದ ನಿಧನರಾದರು.


ಖಾನಾಪುರ: ಖಾನಾಪುರ ನಗರದ ಸಮಾದೇವಿ ಗಲ್ಲಿಯ ನಿವಾಸಿ ಹಾಗೂ ಹಿರಿಯ ಗುತ್ತಿಗೆದಾರರಾಗಿದ್ದ ಗುರುಸಿದ್ದಪ್ಪ ಹೆಬ್ಬಾಳ್ಕರ್ (95) (Gurusiddappa Hebbalkar) ಅವರು ಬುಧವಾರ ಬೆಳಗ್ಗೆ 10 ಗಂಟೆಗೆ ವೃದ್ಧಾಪ್ಯದಿಂದ ನಿಧನರಾದರು. ಗುರುಸಿದ್ದಪ್ಪ ಹೆಬ್ಬಾಳ್ಕರ್ ಅವರು ಸಾಮಾಜಿಕ ಕಾರ್ಯಕರ್ತ ರವೀಂದ್ರ ಹೆಬ್ಬಾಳ್ಕರ್ ಅವರ ತಂದೆ ಮತ್ತು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾವ.
ಇವರ ಅಂತ್ಯಕ್ರಿಯೆ ಬುಧವಾರ ಸಂಜೆ 4 ಗಂಟೆಗೆ ಖಾನಾಪುರದ ಕೆ.ಎಸ್.ಆರ್.ಟಿ.ಸಿ. ಹೊಸ ಬಸ್ ನಿಲ್ದಾಣದ ಹಿಂದಿನ ಲಿಂಗಾಯತ ರುದ್ರಭೂಮಿಯಲ್ಲಿ ನಡೆಯಿತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.
ಈ ಸುದ್ದಿಯನ್ನೂ ಓದಿ | Santhosh Balaraj: ಜಾಂಡೀಸ್‌ನಿಂದ ಬಳಲುತ್ತಿದ್ದ ಕನ್ನಡ ನಟ ಸಂತೋಷ್ ಬಾಲರಾಜ್ ನಿಧನ