Juhi Chawla: ಮದುವೆಯಾದ ವಿಚಾರವನ್ನೇ ಹಲವು ವರ್ಷ ಗೌಪ್ಯವಾಗಿಟ್ಟಿದ್ರಂತೆ ಈ ಖ್ಯಾತ ನಟಿ! ಕಾರಣ ಏನ್ ಗೊತ್ತಾ?
ಒಂದು ಕಾಲದ ಟಾಪ್ ಹೀರೋಯಿನ್ ಜೂಹಿ ಚಾವ್ಲಾ ಇವರು ಪ್ರೇಮಲೋಕ, ಶಾಂತಿ-ಕ್ರಾಂತಿ, ಕಿಂದರಜೋಗಿ ಸೇರಿದಂತೆ ಇತರ ಹಿಟ್ ಸಿನಿಮಾ ಮೂಲಕ ಬಹಳ ಜನಪ್ರಿಯರಾಗಿದ್ದಾರೆ. ನಟಿ ಜೂಹಿ ಚಾವ್ಲಾ ಅವರು ವೃತ್ತಿ ಜೀವನಕ್ಕಿಂತಲೂ ವೈಯಕ್ತಿಕ ಜೀವನದಿಂದ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ತಮ್ಮ ವೃತ್ತಿ ಜೀವನಕ್ಕಾಗಿ ಮದುವೆ ವಿಚಾರವನ್ನೇ ನಟಿ ಜೂಹಿ ಚಾವ್ಲಾ ಅವರು ಮುಚ್ಚಿಟ್ಟಿದ್ದರು ಎಂಬ ಸತ್ಯ ಇದೀಗ ತಿಳಿದು ಬಂದಿದೆ. ಈ ಸುದ್ದಿ ಸದ್ಯ ವೈರಲ್ ಆಗಿದೆ.



ಜೂಹಿ ಚಾವ್ಲಾ ಅವರು ಜಯ್ ಮೆಹ್ತಾ ಅವರೊಂದಿಗಿನ ಸಂಬಂಧವು ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲೇ ಪ್ರಾರಂಭವಾಯಿತು ಎಂಬುದನ್ನು ಇತ್ತೀಚಿನ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಟಿ ಜೂಹಿ ಅವರು ಮುಂಬೈನ ಅಂಧೇರಿಯಲ್ಲಿ ನೆಲೆಸಿದ್ದಾಗಲೇ ಸ್ನೇಹಿತೆಯ ಔತಣಕೂಟದಲ್ಲಿ ಜೈ ಮೆಹ್ತಾ ಅವರ ಪರಿಚಯವಾಗಿತ್ತಂತೆ. ಈ ಪರಿಚಯ ಸ್ನೇಹವಾಗಿ ಜೂಹಿ ಹುಟ್ಟುಹಬ್ಬದಂದು ಜೈ ಮೆಹ್ತಾ ಅವರು ಒಂದು ಟ್ರಕ್ ಗುಲಾಬಿಗಳನ್ನು ಸಹ ಕಳುಹಿಸಿದ್ದರಂತೆ. ಒಂದು ವರ್ಷದ ನಂತರ ಲವ್ ಹಾಗೂ ಮ್ಯಾರೇಜ್ ಪ್ರಪೋಸ್ ಮಾಡಿದ್ದರಂತೆ ಬಳಿಕ ನಟಿ ಜೂಹಿ ಅವರು ಜೈ ಮೆಹ್ತಾ ಅವರ ಪ್ರೀತಿಯನ್ನು ಒಪ್ಪಿಕೊಂಡರು ಎಂಬುದನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಟಿ ಜೂಹಿ ಚಾವ್ಲಾ ಅವರು ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದ ಬಳಿಕ 1995 ರಲ್ಲಿ ಉದ್ಯಮಿ ಜೈ ಮೆಹ್ತಾ ಅವರನ್ನು ವಿವಾಹವಾದರು. ಜೈ ಮೆಹ್ತಾ ಅವರ ಮೊದಲ ಪತ್ನಿ ಸುಜಾತಾ ಬಿರ್ಲಾ 1990 ರಲ್ಲಿ ವಿಮಾನ ಅಪಘಾತದಲ್ಲಿ ದುರಂತವಾಗಿ ನಿಧನರಾಗಿದ್ದು ನಟಿ ಜುಹಿ ಚಾವ್ಲಾ ಅವ ರೊಂದಿಗೆ ಮರುವಿವಾಹವಾಗಿದ್ದರು. ಹೀಗಾಗಿ ಆರಂಭದಲ್ಲಿ ನಟಿ ಜೂಹಿ ಚಾವ್ಲಾ ತಮ್ಮ ಮದುವೆಯನ್ನು ರಹಸ್ಯವಾಗಿಟ್ಟಿದ್ದರು ಎಂಬುದನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಹಂಚಿಕೊಂಡಿದ್ದಾರೆ.

ಮದುವೆ ರಹಸ್ಯವಾಗಿ ಇಟ್ಟ ಬಗ್ಗೆ ನಟಿ ಜೂಹಿ ಚಾವ್ಲಾ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಆಗ ಇಂಟರ್ನೆಟ್ ಇರಲಿಲ್ಲ, ಫೋನ್ನಲ್ಲಿ ಕ್ಯಾಮೆರಾ ಇರಲಿಲ್ಲ, ಹೀಗಾಗಿ ಎಲ್ಲ ವಿಚಾರದಲ್ಲಿ ಗೌಪ್ಯತೆ ಮಾಡುವುದು ಕಷ್ಟವಾಗಿರಲಿಲ್ಲ. ಆಗ ನನಗೆ ಸಿನಿಮಾ ಉದ್ಯಮದಲ್ಲಿ ಉತ್ತಮ ಚಿತ್ರ ಗಳಲ್ಲಿ ಕೆಲಸ ಮಾಡುವ ಅವಕಾಶ ಒದಗಿತ್ತು, ಮದುವೆಯಾದರೆ ವೃತ್ತಿ ಜೀವನಕ್ಕೆ ತೊಂದರೆ ಆಗುತ್ತದೆ ಎಂದು ನಾನು ಭಯಭೀತಳಾಗಿದ್ದೆ. ಅದೇ ಸಮಯದಲ್ಲಿ, ನನ್ನ ತಾಯಿಯು ನಿಧಾನರಾದರು ಹೀಗಾಗಿ ನಾನು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇನೆ ಎಂಬ ಭಾವನೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ.

ಬಳಿಕ ಸಂದರ್ಶನದಲ್ಲಿ ಮಾತನಾಡಿದ್ದ ನಟಿ ಜೂಹಿ ಚಾವ್ಲಾ ಅವರು, ಮದುವೆಗೆ ಮುಂಚೆಯೇ ತಮ್ಮ ತಾಯಿ ತೀರಿಕೊಂಡ ಕಾರಣ ತುಂಬಾ ಡಿಪ್ರೆಶನ್ಗೆ ಹೋಗಿದ್ದರು ಎಂಬ ವಿಚಾರವನ್ನು ಅವರು ಹಂಚಿಕೊಂಡರು. ಹೀಗಾಗಿ ಜೈ ಮೆಹ್ತಾ ಅವರನ್ನು ವಿವಾಹವಾಗಿ ಮದುವೆಯಾದ ನಂತರ ಅವರು ತಮ್ಮ ವೃತ್ತಿಜೀವನದಿಂದ ದೂರ ಸರಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದರಂತೆ.

ಜೂಹಿ ಚಾವ್ಲಾ ಅವರು ವೃತ್ತಿ ಜೀವನಕ್ಕೆ ಕಂಬ್ಯಾಕ್ ಆಗಿದ್ದ ಬಗ್ಗೆ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ಮದುವೆಯಾದ ಬಳಿಕ ನನ್ನ ಪತಿ ಜಯ್, ಹಾಗೂ ನನ್ನ ಅತ್ತೆ, ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ನನ್ನ ಅತ್ತೆ ಯಾವಾಗಲೂ ನನ್ನನ್ನು ತಮ್ಮ ಮಗಳೆಂದು ಹೇಳುತ್ತಿರುತ್ತಾರೆ. ನಿನಗೆ ಏನು ಸಂತೋಷ ವಾಗುತ್ತದೋ ಅದನ್ನು ಮಾಡು ಎಂದು ಎಲ್ಲದಕ್ಕೂ ಸಹಕಾರ ನೀಡುತ್ತಿದ್ದರು. ಹೀಗಾಗಿ ಸಿನಿಮಾರಂಗದಲ್ಲಿ ಮತ್ತಷ್ಟು ಸಿನಿಮಾ ಮಾಡುವ ಅವಕಾಶ ಸಿಕ್ಕಿತ್ತು ಎಂದು ಅವರು ಹೇಳಿದ್ದಾರೆ.