Traffic Fine Discount: ಟ್ರಾಫಿಕ್ ದಂಡ ಪಾವತಿಗೆ ಶೇ 50 ರಷ್ಟು ರಿಯಾಯಿತಿ ಘೋಷಣೆ: ಪಾವತಿಯ ವಿಧಾನಗಳು ಇಲ್ಲಿವೆ ನೋಡಿ
ಸಂಚಾರ ನಿಯಮ ಉಲ್ಲಂಘಿಸಿ ದಂಡ (Traffic Fine Discount) ಬಾಕಿ ಉಳಿಸಿಕೊಂಡಿರುವವರಿಗೆ ಕರ್ನಾಟಕ ಸರ್ಕಾರವು ಶೇಕಡಾ 50 ರಷ್ಟು ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಮತ್ತೆ ಅವಕಾಶ ನೀಡಿದೆ. ಇದಕ್ಕೆ ಸೆಪ್ಟೆಂಬರ್ 12 ರ ಗಡುವನ್ನೂ ನಿಗದಿಪಡಿಸಿದೆ. ಶೇ 50ರ ಈ ತಾತ್ಕಾಲಿಕ ರಿಯಾಯಿತಿಯು ಫೆಬ್ರವರಿ 2023 ರ 11ರ ಮೊದಲು ದಾಖಲಾದ ಬಾಕಿ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ

ಸಾಂಧರ್ಬಿಕ ಚಿತ್ರ

ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯು (Department of Transport) ಸಂಚಾರ ನಿಯಮ ಉಲ್ಲಂಘನೆಯ (Violation of Traffic Rules) ದಂಡದ ಮೇಲೆ 50% ರಿಯಾಯಿತಿಯನ್ನು (Discount) ಘೋಷಿಸಿದೆ. ಈ ಅವಕಾಶ ಆಗಸ್ಟ್ 23, ರಿಂದ ಸೆಪ್ಟೆಂಬರ್ 12 ರವರೆಗೆ ಲಭ್ಯವಿರಲಿದೆ. ಉದಾಹರಣೆಗೆ, ₹1,000 ದಂಡವಿದ್ದರೆ, 50% ರಿಯಾಯಿತಿಯೊಂದಿಗೆ ಕೇವಲ ₹500 ಪಾವತಿಸಿದರೆ ದಂಡ ಮುಕ್ತವಾಗುತ್ತದೆ. ಈ ರಿಯಾಯಿತಿಯು 2023ರ ಫೆಬ್ರವರಿ 11ರ ವರೆಗೆ ದಾಖಲಾದ ಸಂಚಾರ ಉಲ್ಲಂಘನೆ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಯೋಜನೆಯ ಅವಧಿ ಮುಗಿದ ನಂತರ, ಪೂರ್ಣ ದಂಡವನ್ನು ಪಾವತಿಸಬೇಕಾಗುತ್ತದೆ.
ದಂಡ ಪಾವತಿಯ ವಿಧಾನಗಳು:
- ಕರ್ನಾಟಕ ರಾಜ್ಯ ಪೊಲೀಸ್ (KSP) ಆ್ಯಪ್: ಈ ಅಪ್ಲಿಕೇಶನ್ ಮೂಲಕ ದಂಡದ ವಿವರಗಳನ್ನು ವೀಕ್ಷಿಸಿ, ಆನ್‌ಲೈನ್‌ನಲ್ಲಿ ಪಾವತಿಸಬಹುದು.
- BTP ASTraM ಆಪ್: ಬೆಂಗಳೂರು ಸಂಚಾರ ಪೊಲೀಸರ ಅಧಿಕೃತ ಆಪ್‌ನಲ್ಲಿ ವಾಹನ ಸಂಖ್ಯೆ ನಮೂದಿಸಿ, ದಂಡ ಪಾವತಿಸಬಹುದು.
- ಸಂಚಾರ ಪೊಲೀಸ್ ಠಾಣೆ: ಹತ್ತಿರದ ಠಾಣೆಯಲ್ಲಿ ವಾಹನ ನೋಂದಣಿ ಸಂಖ್ಯೆ ಒದಗಿಸಿ ದಂಡ ಪಾವತಿಸಿ.
- ಸಂಚಾರ ನಿರ್ವಹಣಾ ಕೇಂದ್ರ: ಇಲ್ಲಿ ನೇರವಾಗಿ ಪಾವತಿ ಮಾಡಬಹುದು.
- ಕರ್ನಾಟಕ ಒನ್/ಬೆಂಗಳೂರು ಒನ್: www.karnatakaone.gov.in ವೆಬ್‌ಸೈಟ್‌ನಲ್ಲಿ ದಂಡ ವಿವರಗಳನ್ನು ಪರಿಶೀಲಿಸಿ, ಪಾವತಿಸಬಹುದು.
ಆನ್‌ಲೈನ್ ಪಾವತಿ ವಿಧಾನ:
* www.karnatakaone.gov.in ಗೆ ಭೇಟಿ ನೀಡಿ.
* ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ‘ಸೆಂಡ್ OTP’ ಕ್ಲಿಕ್ ಮಾಡಿ.
* ಒಟಿಪಿ ಪಡೆದ ನಂತರ, ವಾಹನ ಸಂಖ್ಯೆಯನ್ನು ಒದಗಿಸಿ.
* ದಂಡದ ಮೊತ್ತವನ್ನು ಪರದೆಯ ಮೇಲೆ ತೋರಿಸಲಾಗುತ್ತದೆ.
* ಆನ್‌ಲೈನ್‌ನಲ್ಲಿ ರಿಯಾಯಿತಿ ಮೊತ್ತವನ್ನು ಪಾವತಿಸಿ.
ಈ ಸುದ್ದಿಯನ್ನು ಓದಿ: Viral Video: ದೆಹಲಿ ರಸ್ತೆಯಲ್ಲಿ ಹೃದಯ ಬಿದ್ದಿದೆ, ವೈರಲ್ ಆಯ್ತು ಪೋಸ್ಟ್; ಏನಿದರ ಅಸಲಿಯತ್ತು?
ರಿಯಾಯಿತಿಯನ್ನು ಹೀಗೂ ಪಡೆಯಬಹುದು
ಕರ್ನಾಟಕ ರಾಜ್ಯ ಪೊಲೀಸ್ (KSP) ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದು
ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ, ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ನಮೂದಿಸುವ ಮೂಲಕ ಬಾಕಿ ಪಾವತಿಯನ್ನು ಮಾಡಬಹುದು.
ದಂಡವನ್ನು ಪರಿಶೀಲಿಸಲು ಮತ್ತು ಪಾವತಿಸಲು ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡುವ ಮೂಲಕ ದಂಡ ಪಾವತಿಸಬಹುದು.
ಇನ್‌ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ಗೆ ಭೇಟಿ ನೀಡಿ ಬಾಕಿ ಇರುವ ಅಪರಾಧಗಳ ವಿವರಗಳನ್ನು ಪಡೆದು ನಂತರ ದಂಡವನ್ನು ಪಾವತಿಸಬಹುದು.
ಈ ರಿಯಾಯಿತಿಯು 2023ರ ಫೆಬ್ರವರಿ 11ರ ಮೊದಲಿನ ಉಲ್ಲಂಘನೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಅವಧಿ ಮುಗಿದ ನಂತರ, ಪೂರ್ಣ ದಂಡ ಪಾವತಿಸಬೇಕಾಗುತ್ತದೆ. ಆದ್ದರಿಂದ, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದಂಡವನ್ನು ಪಾವತಿ ಮಾಡಿ.