Bagepally News: ಶ್ರೀ ಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಮೆಡಿಕಲ್ ಹಾಸ್ಪಿಟಲ್ ಮುದ್ದೇನಹಳ್ಳಿ ಬಡವರ ಪಾಲಿನ ಕಾಮಧೇನು: ಕೆ.ಟಿ.ವೀರಾಂಜನೇಯಲು
ನಿಜಕ್ಕೂ ಶ್ರೀ ಸತ್ಯಸಾಯಿ ಹಾಸ್ಪಿಟಲ್ ವತಿಯಿಂದ ಈ ರೀತಿ ಶಾಲೆಗಳಿಗೆ ಬಂದು ಮಕ್ಕಳ ಆರೋಗ್ಯದ ಬಗ್ಗೆ ಉಚಿತ ತಪಾಸಣೆ ಮಾಡುತ್ತಿರುವುದು ಶ್ಲಾಘನೀಯ. ಅವರು ಯಾವುದೇ ಶುಲ್ಕವಿಲ್ಲದೆ ಎಂತಹ ಕಾಯಿಲೆಯಾದರೂ ಸರಿ ಚಿಕಿತ್ಸೆ ನೀಡಿ ಉಚಿತ ಹಾರ್ಟ್ ಆಪರೇಷನ್ ಸೇರಿದಂತೆ ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಮೂಲಕ ವಿಶ್ವದಲ್ಲಿ ಮೊದಲ ಸ್ಥಾನ ಎಂದು ಹೇಳಬಹುದು.


ಬಾಗೇಪಲ್ಲಿ: ವಿಶ್ವದಲ್ಲಿ ಉಚಿತ ವೈದ್ಯಕೀಯ ನೀಡುತ್ತಿರುವ ಆಸ್ಪತ್ರೆ ಯಾವುದಾದರೂ ಇದೆ ಎಂದರೆ ಅದು ಮಧುಸೂದನ ಸಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ಸತ್ಯಸಾಯಿ ಇನ್ಸ್ಟಿ ಟ್ಯೂಟ್ ಆಫ್ ರಿಸರ್ಚ್ ಮೆಡಿಕಲ್ ಹಾಸ್ಪಿಟಲ್ ಮುದ್ದೇನಹಳ್ಳಿ ಬಡವರ ಪಾಲಿನ ಕಾಮಧೇನು ವಾಗಿದೆ ಎಂದು ಜ್ಞಾನ ದೀಪ್ತಿ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಟಿ. ವೀರಾಂಜನೇಯ ಅಭಿಪ್ರಾಯಪಟ್ಟರು.
ಭಾಗ್ಪಯನಗರ ಪಟ್ಟಣದ ಜ್ಞಾನದೀಪ್ತಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸ ಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದವರು.
ಇಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಬಡವರು ಕಾರ್ಮಿಕರು ರೈತರು ಹೋಗಲು ತುಂಬಾ ಕಷ್ಟ .ಕಾರಣ ಅಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆ, ಮುದ್ದೇನಹಳ್ಳಿ ಗ್ರಾಮದಲ್ಲಿ ಶ್ರೀ ಮಧುಸೂದನ ಸಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಮೆಡಿಕಲ್ ಸೆಂಟರ್ ವತಿಯಿಂದ ಉಚಿತವಾಗಿ ಒಂದು ರೂಪಾಯಿ ಖರ್ಚಿಲ್ಲದೆ ಸೇವೆ ಮಾಡುತ್ತಿರುವ ಆಸ್ಪತ್ರೆ ಎಂದರೆ ವಿಶ್ವದಲ್ಲಿ ಸತ್ಯಸಾಯಿ ಆಸ್ಪತ್ರೆ ಮಾತ್ರ ಎಂದ ಅವರು ಇಲ್ಲಿ ಬಡವರಿಗೆ ಉಚಿತ ಎಂಬಿಬಿಎಸ್ ವಿದ್ಯಾಭ್ಯಾಸವನ್ನು ಸಹ ನೀಡು ತ್ತಿದ್ದಾರೆ ಎಂದರು.
ಇದನ್ನೂ ಓದಿ: Chikkaballapur News: ಈ ಮಕ್ಕಳನ್ನು ದುಡಿಮೆಗೆ ಹಚ್ಚದೆ ಶಿಕ್ಷಣ ಕೊಡಿಸಿ ಬಾಳು ಬೆಳಗಿ: ನ್ಯಾ.ಬಿ.ಶಿಲ್ಪ
ಅವರ ಸೇವೆ ಸಮಾಜಕ್ಕೆ ಬಹಳಷ್ಟು ಸಹಕಾರಿಯಾಗಿದೆ. ಪ್ರತಿನಿತ್ಯ ಸಾವಿರಾರು ರೋಗಿಗಳು ಅಲ್ಲಿಗೆ ಬಂದು ತಮಗೆ ಇರುವ ಅನಾರೋಗ್ಯದ ಬಗ್ಗೆ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಾರೆ. ಇಂತಹ ಆಸ್ಪತ್ರೆಯ ವತಿಯಿಂದ ಇಂದು ನಮ್ಮ ಶಾಲೆಯ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡುತ್ತಿರುವುದು ತುಂಬಾ ಸಂತೋಷದಾಯಕ ಇವರ ಸೇವೆ ಇನ್ನಷ್ಟು ಹೆಚ್ಚು ಹೆಚ್ಚಾಗಿ ನಡೆ ಯಲಿ ಎಂದರು.
ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ರೆಡ್ಡಿ ಮಾತನಾಡಿ ನಿಜಕ್ಕೂ ಶ್ರೀ ಸತ್ಯಸಾಯಿ ಹಾಸ್ಪಿಟಲ್ ವತಿಯಿಂದ ಈ ರೀತಿ ಶಾಲೆಗಳಿಗೆ ಬಂದು ಮಕ್ಕಳ ಆರೋಗ್ಯದ ಬಗ್ಗೆ ಉಚಿತ ತಪಾಸಣೆ ಮಾಡುತ್ತಿರುವುದು ಶ್ಲಾಘನೀಯ. ಅವರು ಯಾವುದೇ ಶುಲ್ಕವಿಲ್ಲದೆ ಎಂತಹ ಕಾಯಿಲೆಯಾದರೂ ಸರಿ ಚಿಕಿತ್ಸೆ ನೀಡಿ ಉಚಿತ ಹಾರ್ಟ್ ಆಪರೇಷನ್ ಸೇರಿದಂತೆ ಅನೇಕ ಅನಾ ರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಮೂಲಕ ವಿಶ್ವದಲ್ಲಿ ಮೊದಲ ಸ್ಥಾನ ಎಂದು ಹೇಳ ಬಹುದು.
ವಿದ್ಯಾರ್ಥಿಗಳು ಸಹ ಆರೋಗ್ಯದ ಬಗ್ಗೆ ಗಮನಹರಿಸಿ ಪ್ರತಿನಿತ್ಯ ಕ್ರೀಡಾ ಚಟುವಟಿಕೆಗಳು ಯೋಗ ವ್ಯಾಯಾಮ ದಂತಹ ಕ್ರಿಯೆಗಳನ್ನು ತಪ್ಪದೆ ಆಚರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುದ್ದೇನಹಳ್ಳಿ ಸತ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್ ಹಾಸ್ಪಿಟಲ್ ಡಾ: ದಿಶಪದ್ದೂರ್ ಡಾ.ಚೈತನ್ಯ ಡಾ. ಮಾನಸ ನಿಸರ್ಗ ಅಂಗಡಿ, ಡಾ. ಸುಜಾತ ಬಾಲಾಜಿ ಡಾ. ಶ್ರೀನಿವಾಸ್ ಡಾಕ್ಟರ್ ಹರಣಿ,ಡಾ: ಜೀವನ್, ರಾಯನ್ ಅಬ್ದುಲ್ಲ, ಬಿಳ್ಳೂರು ನಾಗರಾಜು, ಕೃಷ್ಣ. ಶಾಲಾ ಮುಖ್ಯೋಪಾಧ್ಯಾಯ ಹರೀಶ್, ಹಾಗೂ ಸಿಬ್ಬಂದಿ ವರ್ಗ ನೂರಾರು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.