Priya Sudeep: ನಟ ಸುದೀಪ್ ಬರ್ತ್‌ಡೇಗೆ ಮಹತ್ತರ ಕಾರ್ಯ ಮಾಡಿದ ಪತ್ನಿ ಪ್ರಿಯಾ; ಅಂಗ-ಅಂಗಾಂಶ ದಾನ
Organ donation: ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಮೂಲಕ ಅಂಗ ಮತ್ತು ಅಂಗಾಂಶಗಳನ್ನು ಪ್ರಿಯಾ ದಾನ ಮಾಡಿದ್ದು, ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅಂಗಾಂಗ ದಾನ ಪ್ರಕ್ರಿಯೆ ಬಹಳ ಸುಲಭವಾಗಿದೆ. ನಿಮ್ಮ ಸಣ್ಣ ನಿರ್ಧಾರದಿಂದ ಒಂದು ಜೀವ ಉಳಿಯುತ್ತದೆ ಎಂದರೆ ಅದಕ್ಕಿಂತ ದೊಡ್ಡ ಕೆಲಸ ಬೇರೊಂದಿಲ್ಲ ಎಂದು ಪ್ರಿಯಾ ಸುದೀಪ್ ತಿಳಿಸಿದ್ದಾರೆ.

-

ಬೆಂಗಳೂರು: ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರು ಸೆ.2ರಂದು ಅಭಿಮಾನಿಗಳೊಂದಿಗೆ 52ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ನಟ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ (Priya Sudeep) ಅವರು ಮಹತ್ತರ ಕಾರ್ಯವೊಂದನ್ನು ಮಾಡಿದ್ದು, ಅಂಗ-ಅಂಗಾಂಶ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಮೂಲಕ ಅಂಗ ಮತ್ತು ಅಂಗಾಂಶಗಳನ್ನು ಪ್ರಿಯಾ ದಾನ ಮಾಡಿದ್ದು, ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿ ವರ್ಷ ಸುದೀಪ್ ಅವರ ಹುಟ್ಟುಹಬ್ಬಕ್ಕೆ, ಅಭಿಮಾನಿಗಳು ರಕ್ತದಾನ, ಅನ್ನದಾನ, ಬಡ ಮಕ್ಕಳಿಗೆ ಸಹಾಯ ಸೇರಿ ಇನ್ನಿತರ ಸಮಾಜ ಕಾರ್ಯಗಳನ್ನು ಮಾಡುತ್ತಿದ್ದರು. ಈ ವರ್ಷ ಅವರ ಹುಟ್ಟುಹಬ್ಬಕ್ಕೆ ನಾನು ಅಂಗ ಮತ್ತು ಅಂಗಾಶಗಳನ್ನು ದಾನ ಮಾಡಿದ್ದೇನೆ.
ಇದು @AcademyCFC ಅಕಾಡೆಮಿಯ ಆಶಯ ಆಗಿತ್ತು. 2024ರ ಕಾರ್ಯಕ್ರಮದ ಉದ್ದೇಶ ಇದಾಗಿತ್ತು. ಅದರ ಮುಂದುವರಕೆ ಅನ್ನುವಂತೆ @KicchaSudeep ಅವರ ಪತ್ನಿ ಅಂಗಾಂಗ ದಾನ ಮಹತ್ವಕ್ಕೆ ಹೆಜ್ಜೆ ಇಟ್ಟಿದ್ದಾರೆ. ಧನ್ಯವಾದಗಳು ಮೇಡಂ. pic.twitter.com/2x6lFPnbuM
— Dr.Sharanu Hullur (@sharanuhullur1) September 10, 2025
ಅಂಗಾಂಗ ದಾನ ಪ್ರಕ್ರಿಯೆ ಬಹಳ ಸುಲಭವಾಗಿದೆ. ನಿಮ್ಮ ಸಣ್ಣ ನಿರ್ಧಾರದಿಂದ ಒಂದು ಜೀವ ಉಳಿಯುತ್ತದೆ ಎಂದರೆ ಅದಕ್ಕಿಂತ ದೊಡ್ಡ ಕೆಲಸ ಬೇರೊಂದಿಲ್ಲ. ನಮ್ಮ ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಮೂಲಕ ನಾನು ಅಂಗಾಂಗ ದಾನಕ್ಕೆ ನೋಂದಣಿ ಮಾಡಿದ್ದೇನೆ. ನೀವು ಮಾಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಅಂಗಾಂಗ ದಾನ ಮಾಡಲು ನಮ್ಮ ಜವಾಬ್ದಾರಿ ಏನೆಂದರೆ, ಮೊದಲು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಗ ಇದಕ್ಕೊಂದು ಅರ್ಥ ಬರುತ್ತದೆ ಎಂದು ಪ್ರಿಯಾ ಸುದೀಪ್ ತಿಳಿಸಿದ್ದಾರೆ.