ಹೆಣ್ಣು ಮ್ಕಕಳ ಆರೋಗ್ಯವೇ ಜಿಲ್ಲೆಯ ಸುಭದ್ರ ಭವಿಷ್ಯ; ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಇಂದೇ ಹೆಜ್ಜೆ ಇಡಿ
ಹೆಚ್.ಪಿ.ವಿ ಲಸಿಕೆ ಇದು ತುಂಬಾ ಪರಿಣಾಮಕಾರಿಯಾಗಿದ ಲಸಿಕೆ 14 ವರ್ಷ ಮುಗಿದು 15 ವರ್ಷ ದ ಒಳಗಿನ ಹೆಣ್ಣು ಮಕ್ಕಳಿಗೆ ಮುಂದಿನ ವಯೋಮಾನದಲ್ಲಿ ಗರ್ಭಕಂಠದ ಕ್ಯಾನ್ಸರ್‌ನ್ನು ತಡೆಗಟ್ಟುವ ಸಲುವಾಗಿ ಹೆಚ್.ಪಿ.ವಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಹೆಚ್.ಪಿ.ವಿ ಲಸಿಕೆಯನ್ನು ಪಡೆದ ಮಕ್ಕಳಿಗೆ ನಿಗದಿತ ತಂತ್ರಾಂಶದಲ್ಲಿ ನೊಂದಣಿ ಮಾಡಿ ಲಸಿಕಾ ಪ್ರಮಾಣ ಪತ್ರ ನೀಡಬೇಕು
ಜಿಲ್ಲೆಯ ಹೆಣ್ಣು ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ಸುರಕ್ಷಿತ ಲಸಿಕೆ ನೀಡಿ ಹೆಣ್ಣು ಮಕ್ಕಳ ಆರೋಗ್ಯವನ್ನು ಕಾಪಾಡುವುದು ನಮ್ಮ ಆದ್ಯತೆ ಎಂದು ಜಿಲ್ಲಾಧಿಕಾರಿ ಜಿ ಪ್ರಭು ತಿಳಿಸಿದರು. -
ಚಿಕ್ಕಬಳ್ಳಾಪುರ: ಜಿಲ್ಲೆಯ ಹೆಣ್ಣು ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ಸುರಕ್ಷಿತ ಲಸಿಕೆ ನೀಡಿ ಹೆಣ್ಣು ಮಕ್ಕಳ ಆರೋಗ್ಯವನ್ನು ಕಾಪಾಡುವುದು ನಮ್ಮ ಆದ್ಯತೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.
ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಎಂ ಆರ್ ಎಲಿಮಿನೇಷನ್, ರೊಟೀನ್ ಇಮ್ಯುನೈಸೇಷನ್ ಇತ್ಯಾದಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆಗಾಗಿ ಜಿಲ್ಲೆಯಲ್ಲಿ ಹೆಚ್.ಪಿ.ವಿ ಲಸಿಕಾಕರಣ ಕಾರ್ಯಕ್ರಮ ಕುರಿತ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
14 ವರ್ಷದ ಎಲ್ಲಾ ಹೆಣ್ಣು ಮಕ್ಕಳಿಗೆ ಹೆಚ್.ಪಿ.ವಿ ಲಸಿಕೆಯನ್ನು ಹಾಕುವುದರ ಮೂಲಕ ಗರ್ಭಕಂಠದ ಕ್ಯಾನ್ಸರ್ ಮುಕ್ತ ಜಿಲ್ಲೆ ಮಾಡಲು ಆರೋಗ್ಯ ಇಲಾಖೆಯ ಜೊತೆಗೆ ಸಂಬಂಧಪಟ್ಟ ಇತರ ಇಲಾಖೆಗಳ ಅಧಿಕಾರಿಗಳು ಕ್ರಮ ವಹಿಸಬೇಕು.
ಪ್ರತಿ 14 ವರ್ಷದ ಬಾಲಕಿಗೆ ಲಸಿಕಾಕರಣ ಆಗುವ ನಿಟ್ಟಿನಲ್ಲಿ ಯೋಜಿಸಿ ಉಚಿತವಾಗಿ ಲಸಿಕೆ ಯನ್ನು ನೀಡಬೇಕು. ಎಲ್ಲಾ ಶಾಲೆಗಳಲ್ಲಿ ಮತ್ತು ಕ್ಷೇತ್ರ ಮಟ್ಟದಲ್ಲಿ ಅರಿವು ಮೂಡಿಸಲು ಕ್ರಮ ವಹಿಸಬೇಕು ಎಂದು ಸೂಚನೆಗಳನ್ನು ನೀಡಿದರು.
ಹೆಚ್.ಪಿ.ವಿ ಲಸಿಕೆ ಇದು ತುಂಬಾ ಪರಿಣಾಮಕಾರಿಯಾಗಿದ ಲಸಿಕೆ 14 ವರ್ಷ ಮುಗಿದು 15 ವರ್ಷ ದ ಒಳಗಿನ ಹೆಣ್ಣು ಮಕ್ಕಳಿಗೆ ಮುಂದಿನ ವಯೋಮಾನದಲ್ಲಿ ಗರ್ಭಕಂಠದ ಕ್ಯಾನ್ಸರ್‌ನ್ನು ತಡೆಗಟ್ಟುವ ಸಲುವಾಗಿ ಹೆಚ್.ಪಿ.ವಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಹೆಚ್.ಪಿ.ವಿ ಲಸಿಕೆಯನ್ನು ಪಡೆದ ಮಕ್ಕಳಿಗೆ ನಿಗದಿತ ತಂತ್ರಾಂಶ ದಲ್ಲಿ ನೊಂದಣಿ ಮಾಡಿ ಲಸಿಕಾ ಪ್ರಮಾಣ ಪತ್ರ ನೀಡಬೇಕು.
ಪ್ರತಿ ಬುಧವಾರ ಬೆಳಿಗ್ಗೆ 9 ಗಂಟೆಯಿಂದ 2 ಗಂಟೆಯವರೆಗೆ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಎಡ ಕೈಯ ತೋಳಿನ ಸ್ನಾಯುಗೆ ಲಸಿಕೆಯನ್ನು (ಇಂಟ್ರಾ ಮಸ್ಕುಲರ್) ನೀಡಲು ಸಕಲ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸುಮಾರು 13,432 ಹದಿನಾಲ್ಕು ವರ್ಷದ ಹೆಣ್ಣು ಮಕ್ಕಳಿದ್ದು, 4830 ಡೋಸ್ ಲಸಿಕೆ ಬಂದಿದೆ ಲಸಿಕಾ ಡೋಸ್‌ಗಳನ್ನು ಎಲ್ಲಾ ಆರೋಗ್ಯ ಸಂಸ್ಥೆಗಳಿಗೆ ರವಾನೆ ಮಾಡಲಾಗಿದೆ. ಬಾಕಿ ಲಸಿಕೆಯನ್ನು ಧರಿಸಿಕೊಳ್ಳಲು ಸಕರ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಗರ್ಭಕಂಠದ (ಸರ್ವೆಕಲ್ ಕ್ಯಾನ್ಸರ್) ರೋಗವನ್ನು ತಡೆಗಟ್ಟುವ ಸಲುವಾಗಿ ಹೆಚ್.ಪಿ.ವಿ ಲಸಿಕೆ ಯನ್ನು ಮಾರ್ಚ್ ಅಂತ್ಯದಲ್ಲಿ, ಏಪ್ರಿಲ್ ಮತ್ತು ಮೇ-2026ರ ತಿಂಗಳುಗಳಲ್ಲಿ ಜಿಲ್ಲಾದ್ಯಂತ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಅರ್ಹ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವ ಮೂಲಕ ಪೋಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.. ಜಿಲ್ಲೆಯ 14 ವರ್ಷದೊಳಗಿನ ಹೆಣ್ಣು ಮಕ್ಕಳ ಪೋಷಕರು ತಮ್ಮ ಹತ್ತಿರದ ಲಸಿಕಾ ಕೇಂದ್ರ (ಆರೋಗ್ಯ ಸಂಸ್ಥೆ) ಗಳಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಹೆಚ್.ಪಿ.ವಿ ಲಸಿಕೆಯನ್ನು ಹಾಕಿಸಿ ಲಸಿಕಾ ಅಭಿಯಾನದ ಸದುಪಯೋಗವನ್ನು ಪಡೆಯಲು ಕರೆ ನೀಡಿದರು.
“ಹೆಣ್ಣು ಮ್ಕಕಳ ಆರೋಗ್ಯವೇ ಜಿಲ್ಲೆಯ ಸುಭದ್ರ ಭವಿಷ್ಯ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಇಂದೇ ಹೆಜ್ಜೆ ಇಡಿ” “ನಿಮ್ಮ ಆರೋಗ್ಯ - ನಮ್ಮ ಆದ್ಯತೆ” ಇದು ಈ ಅಭಿಯಾನದ ಆಶಯ ವಾಗಿದ್ದು ಇದನ್ನು ಅರ್ಥ ಮಾಡಿಕೊಂಡು ಜನರು ಅಭಿಯಾನ ಯಶಸ್ವಿಗೊಳಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.