ಅಮೆಜಾನ್ ಇಂಡಿಯಾದಿಂದ ಆರ್ಮಿ ವೆಲ್ಫೇರ್ ಪ್ಲೇಸ್ಮೆಂಟ್ ಆರ್ಗನೈಸೇಷನ್ ಜೊತೆಯಲ್ಲಿ ಒಡಂಬಡಿಕೆಗೆ ಸಹಿ
ಅಮೆಜಾನ್ ನಲ್ಲಿ ನಮ್ಮ ಬದ್ಧತೆಯು ವಿಸ್ತಾರ ಉದ್ಯೋಗಪಡೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಉದ್ಯೋಗದ ಸ್ಥಳ ನಿರ್ಮಿಸುವುದಕ್ಕೆ ಹೆಚ್ಚು ಆದ್ಯತೆ ನೀಡಿದೆ. ನಾವು ಸೇನಾ ನಿವೃತ್ತರು ಮತ್ತು ಸೇನೆ ಯಲ್ಲಿರುವವರ ಪತ್ನಿಯರಿಗೆ ಕ್ರಮಕ್ಕೆ ಪಕ್ಷಪಾತ, ಮಾಲೀಕತ್ವ ಮತ್ತು ಫಲಿತಾಂಶಗಳ ಪೂರೈಕೆ ಮೂಲಕ ಕಾರ್ಯಾಚರಣೆಯ ಶ್ರೇಷ್ಠತೆ, ಧ್ಯೇಯಕ್ಕೆ ಗಮನ ಮತ್ತು ಅಮೆಜಾನ್ ಸಂಸ್ಕೃತಿಗೆ ಪೂರಕವಾದ ನಾಯಕತ್ವ ಮುಂತಾದ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ.

-

ಬೆಂಗಳೂರು: ಅಮೆಜಾನ್ ಇಂಡಿಯಾ ಇಂದು ಭಾರತೀಯ ಸೇನೆಯ ಅಡಿಯಲ್ಲಿರುವ ಆರ್ಮಿ ವೆಲ್ಫೇರ್ ಪ್ಲೇಸ್ಮೆಂಟ್ ಆರ್ಗನೈಸೇಷನ್ (ಎ.ಡಬ್ಲ್ಯೂ.ಪಿ.ಒ.) ಜೊತೆಯಲ್ಲಿ ಒಡಂಬಡಿಕೆಯ ಮೂಲಕ ಸೇನಾ ನಿವೃತ್ತರು, ಸೇನೆಯಲ್ಲಿರುವವರ ಪತ್ನಿಯರು ಮತ್ತು ಯುದ್ಧದಲ್ಲಿ ಮಡಿದವರ ಪತ್ನಿಯರಿಗೆ ಅರ್ಥಪೂರ್ಣ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದ ಕಾರ್ಯತಂತ್ರೀಯ ಸಹಯೋಗ ಪ್ರಕಟಿಸಿದೆ.
ಈ ಸಹಯೋಗವು ಸೇನಾ ನಿವೃತ್ತರು ಮತ್ತು ಸೇನಾ ಸಂಗಾತಿಗಳ ಅಸಾಧಾರಣ ಕೌಶಲ್ಯಗಳು ಮತ್ತು ಸದೃಢತೆಯನ್ನು ಬಸಿಕೊಳ್ಳುವ ಬದ್ಧತೆ ತೋರಿರುವುದಲ್ಲದೆ ಪುರಸ್ಕಾರಯುತ ನಾಗರಿಕ ವೃತ್ತಿಗಳಿಗೆ ವಿಶೇಷ ನೇಮಕ ವಿಧಾನಗಳು, ತರಬೇತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಬೆಂಬಲಿಸುತ್ತದೆ. ಈ ಒಡಂಬಡಿಕೆಯ ಅಡಿಯಲ್ಲಿ ಅಮೆಜಾನ್ ಇಂಡಿಯಾ ಎಡಬ್ಲ್ಯೂಪಿಒ ಜೊತೆಯಲ್ಲಿ ಸಂಬಂಧಿಸಿದ ಉದ್ಯೋಗಾವಕಾಶಗಳನ್ನು ಹಂಚಿಕೊಳ್ಳಲಿದ್ದು ಅದು ಸೇನಾ ಸಮುದಾಯದ ಮೂರು ಸ್ತಂಭಗಳಿಗೆ ಆದ್ಯತೆ ನೀಡುತ್ತದೆ.
ಅವು: 1. ಸೇನಾ ನಿವೃತ್ತರು, 2.ಸೇನೆಯಲ್ಲಿರುವವರ ಪತ್ನಿಯರು 3. ಯುದ್ಧದಲ್ಲಿ ಮಡಿದವರ ಪತ್ನಿಯರು ಇವರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಅಮೆಜಾನ್ ವೆಬಿನಾರ್ ಗಳು ಮತ್ತು ಕಾರ್ಯಾಗಾರಗಳ ಮೂಲಕ ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ, ಸಂಭವನೀಯ ಅರ್ಜಿದಾರರಿಗೆ ಲಭ್ಯವಿರುವ ಹುದ್ದೆಗಳು ಮತ್ತು ಕಂಪನಿಯ ಒಳಗೆ ವೃತ್ತಿಯ ಪ್ರಗತಿಯ ಅವಕಾಶಗಳ ಮೂಲಕ ಮಾರ್ಗದರ್ಶನ ನೀಡುತ್ತದೆ.
ಇದನ್ನೂ ಓದಿ: Bangalore News: ಸ್ವಿಗ್ಗಿ ಇನ್‌ಸ್ಟಾಮಾರ್ಟ್ ವತಿಯಿಂದ ಗ್ರಾಹಕರಿಗಾಗಿ "ಕ್ವಿಕ್ ಇಂಡಿಯಾ ಮೂವ್‌ಮೆಂಟ್ ಘೋಷಣೆ
“ಅಮೆಜಾನ್ ನಲ್ಲಿ ನಮ್ಮ ಬದ್ಧತೆಯು ವಿಸ್ತಾರ ಉದ್ಯೋಗಪಡೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಉದ್ಯೋಗದ ಸ್ಥಳ ನಿರ್ಮಿಸುವುದಕ್ಕೆ ಹೆಚ್ಚು ಆದ್ಯತೆ ನೀಡಿದೆ. ನಾವು ಸೇನಾ ನಿವೃತ್ತರು ಮತ್ತು ಸೇನೆಯಲ್ಲಿರುವವರ ಪತ್ನಿಯರಿಗೆ ಕ್ರಮಕ್ಕೆ ಪಕ್ಷಪಾತ, ಮಾಲೀಕತ್ವ ಮತ್ತು ಫಲಿತಾಂಶಗಳ ಪೂರೈಕೆ ಮೂಲಕ ಕಾರ್ಯಾಚರಣೆಯ ಶ್ರೇಷ್ಠತೆ, ಧ್ಯೇಯಕ್ಕೆ ಗಮನ ಮತ್ತು ಅಮೆಜಾನ್ ಸಂಸ್ಕೃತಿಗೆ ಪೂರಕವಾದ ನಾಯಕತ್ವ ಮುಂತಾದ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಆರ್ಮಿ ವೆಲ್ಫೇರ್ ಪ್ಲೇಸ್ಮೆಂಟ್ ಆರ್ಗನೈಸೇಷನ್ ನೊಂದಿಗೆ ಈ ಸಹಯೋಗವು ಸೇನಾ ನಿವೃತ್ತ ಸಿಬ್ಬಂದಿ, ಸೇನಾ ಸಿಬ್ಬಂದಿಯ ಪತ್ನಿಯರಿಗೆ ಮತ್ತು ಯುದ್ಧದಲ್ಲಿ ಮಡಿದವರ ಪತ್ನಿಯರಿಗೆ ನಮ್ಮ ಬೆಂಬಲ ಆಳವಾ ಗಿಸುವುದರಲ್ಲಿ ಪ್ರಮುಖ ಹೆಜ್ಜೆಯಾಗಿದ್ದು ಅವರಿಗೆ ಅವರ ವಿಶಿಷ್ಟ ಸಾಮರ್ಥ್ಯಗಳು ಮತ್ತು ಅನುಭವಗಳನ್ನು ಅನುಷ್ಠಾನಗೊಳಿಸುವ ಅರ್ಥಪೂರ್ಣ ಉದ್ಯೋಗದ ಅವಕಾಶಗಳನ್ನು ಒದಗಿಸುತ್ತೇವೆ.
ನಾವು ಈ ಕಾರ್ಯತಂತ್ರೀಯ ಸಹಯೋಗ ಸಾಧ್ಯವಾಗಿಸಿದ್ದಕ್ಕೆ ಭಾರತೀಯ ಸೇನೆಗೆ ಆಭಾರಿಯಾಗಿ ದ್ದೇವೆ” ಎಂದು ಅಮೆಜಾನ್ ಸ್ಟೋರ್ಸ್ ಇಂಡಿಯಾ, ಜಪಾನ್ ಮತ್ತು ಎಮರ್ಜಿಂಗ್ ಮಾರ್ಕೆಟ್ಸ್ ನ ಪೀಪಲ್ ಎಕ್ಸ್ಪೀರಿಯೆನ್ಸ್ ಅಂಡ್ ಟೆಕ್ನಾಲಜಿಯ ವಿ.ಪಿ. ದೀಪ್ತಿ ವರ್ಮಾ ಹೇಳಿದರು. ಈ ಸಹ ಯೋಗವು ಸೇನಾ ಕುಟುಂಬಗಳಿಗೆ ಬೆಂಬಲಿಸಲು ಅಮೆಜಾನ್ ನ ಜಾಗತಿಕ ಬದ್ಧತೆಗೆ ಪೂರಕವಾಗಿ ದ್ದು ಮಿಲಿಟರಿ ಸ್ಪೌಸ್ ಫೆಲೋಶಿಪ್ ಪ್ರೋಗ್ರಾಮ್ ಮತ್ತು ಮಿಲಿಟರಿ ಹೈರಿಂಗ್ ಪ್ರೋಗ್ರಾಮ್ ನಂತಹ ಉಪಕ್ರಮಗಳು ಉದ್ಯೋಗದ ಮಾರ್ಗಗಳನ್ನು ತೋರುತ್ತವೆ, ಮಾರ್ಗದರ್ಶನ ನೀಡುತ್ತವೆ; ಮತ್ತು ಸೇನಾ ನಿವೃತ್ತರು ಒಳಗೊಂಡು ಅವರ ಪತ್ನಿಯರಿಗೂ ಉದ್ಯೋಗದ ಮಾರ್ಗ, ಮಾರ್ಗದರ್ಶನ ನೀಡುತ್ತವೆ.
ಈ ಒಡಂಬಡಿಕೆ ಕುರಿತು ಆರ್ಮಿ ವೆಲ್ಫೇರ್ ಪ್ಲೇಸ್ಮೆಂಟ್ ಆರ್ಗನೈಸೇಷನ್ ವ್ಯವಸ್ಥಾಪಕ ನಿರ್ದೇಶಕ ಶೌರ್ಯಚಕ್ರ, ಸೇನಾ ಪದಕ ಪುರಸ್ಕೃತ ಮೇಜರ್ ಜನರಲ್ ಅಜಯ್ ಸಿಂಗ್ ಚೌಹಾಣ್ (ನಿ.), “ಎಡಬ್ಲ್ಯೂಪಿಒ ನಮ್ಮ ಸೇನಾ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆ ಆಳವಾದ ಬದ್ಧತೆ ಹೊಂದಿದೆ. ಅಮೆಜಾನ್ ಇಂಡಿಯಾದೊಂದಿಗೆ ನಮ್ಮ ಸಹಯೋಗವು ಅಗತ್ಯವಿರುವ ಸೇನಾ ನಿವೃತ್ತರು, ಸೇನಾ ಸಿಬ್ಬಂದಿ ಪತ್ನಿಯರು ಮತ್ತು ಯುದ್ಧದಲ್ಲಿ ಮಡಿದವರ ಪತ್ನಿಯರಿಗೆ ಅರ್ಥಪೂರ್ಣ ಉದ್ಯೋಗಾವಕಾಶಗಳನ್ನು ನೀಡುತ್ತದೆ.
ಈ ವ್ಯಕ್ತಿಗಳು ಉದ್ಯೋಗದ ಸ್ಥಳಕ್ಕೆ ಅಸಾಧಾರಣ ಸದೃಢತೆ ಮತ್ತು ವಿಸ್ತಾರ ಶ್ರೇಣಿಯ ಕೌಶಲ್ಯವನ್ನು ತರುತ್ತಾರೆ. ಈ ಸಹಯೋಗವು ಅವರಿಗೆ ಕಾರ್ಪೊರೇಟ್ ಹುದ್ದೆಗಳನ್ನು ಪಡೆಯಲು, ಆರ್ಥಿಕ ಸ್ವಾತಂತ್ರ್ಯ ಹೊಂದಲು ಮತ್ತು ಅವರ ಒಟ್ಟಾರೆ ಸ್ವಾಸ್ಥ್ಯ ಹೆಚ್ಚಿಸಲು ನೆರವಾಗುತ್ತದೆ. ನಾವು ಮೌಲ್ಯಯುತ ಕೌಶಲ್ಯಗಳನ್ನು ಅಮೆಜಾನ್ ಗುರುತಿಸುವುದು ಮತ್ತು ಸೇನಾ ನಿವೃತ್ತರು, ಅವರ ಪತ್ನಿಯರು ಮತ್ತು ಯುದ್ಧದಲ್ಲಿ ಮಡಿದವರ ಪತ್ನಿಯರನ್ನು ಅವರ ಸಂಸ್ಥೆಗೆ ಕರೆ ತರುವುದನ್ನು ಪ್ರಶಂಸಿಸುತ್ತೇವೆ” ಎಂದರು. ಅಮೆಜಾನ್ ಈಗಾಗಲೇ ಭಾರತದಲ್ಲಿ ತನ್ನ ಉದ್ಯೋಗಪಡೆಗೆ ನೂರಾರು ಸೇನಾ ನಿವೃತ್ತರನ್ನು ಸೇರ್ಪಡೆ ಮಾಡಿಕೊಂಡಿದೆ.
ಕಂಪನಿಯು ವಿಶೇಷವಾದ ಸಂದರ್ಶನ ಸಿದ್ಧತೆ, “ವಾರಿಯರ್ಸ್ ಅಟ್ ಅಮೆಜಾನ್” ಎಂಬ ಸಹೋದ್ಯೋಗಿಗಳ ಮಾರ್ಗದರ್ಶನ ಜಾಲಗಳು ಮತ್ತು ಸೇನಾ ಸಮುದಾಯಕ್ಕೆ ವಿನ್ಯಾಸಗೊಳಿಸ ಲಾದ ವೃತ್ತಿ ಸುಧಾರಣೆ ಮಾರ್ಗಗಳ ಮೂಲಕ ವಿಶೇಷ ವೃತ್ತಿಯ ಬೆಂಬಲ ನೀಡುತ್ತಿದೆ. ಈ ಉಪಕ್ರಮವು ಮಹಿಳೆಯರು, ಅಂಗವಿಕಲತೆಯುಳ್ಳವರು, ಎಲ್.ಜಿ.ಬಿ.ಟಿ.ಕ್ಯೂ.ಐ.ಎ+, ಸೇನಾ ನಿವೃತ್ತರು ಮತ್ತು ಈಗ ಸೇನೆಯಲ್ಲಿರುವವರ ಪತ್ನಿಯರು ಮತ್ತು ಯುದ್ಧದಲ್ಲಿ ಮಡಿದವರ ಪತ್ನಿಯರನ್ನು ಒಳಗೊಳ್ಳುವ ಉದ್ಯೋಗದ ಸ್ಥಳಕ್ಕೆ ತನ್ನ ವಿಸ್ತಾರ ಬದ್ಧತೆಯನ್ನು ಬಿಂಬಿಸಿದೆ.
ಈ ಒಡಂಬಡಿಕೆಯು ವೈವಿಧ್ಯಮಯ ಪ್ರತಿಭೆಗೆ ಅಮೆಜಾನ್ ನ ವಿಸ್ತಾರ ಜಾಲದಲ್ಲಿ ಹಲವಾರು ಕಾರ್ಯಗಳು ಮತ್ತು ಉದ್ಯೋಗ ಕುಟುಂಬಗಳಲ್ಲಿ ಹುದ್ದೆಗಳನ್ನು ಪಡೆಯಲು ಮತ್ತೊಂದು ಹೆಜ್ಜೆಯಾಗಿದೆ. ಅಮೆಜಾನ್ ನಲ್ಲಿ 8 ವರ್ಷಗಳಿಂದ ಉದ್ಯೋಗಿಯಾಗಿರುವ ಮತ್ತು ಸೇನಾ ಸಿಬ್ಬಂದಿ ಪತ್ನಿ, ಅಮೆಜಾನ್ ಡಿವೈಸಸ್ ನಲ್ಲಿ ಸೀನಿಯರ್ ಪ್ರಾಡಕ್ಟ್ ಮ್ಯಾನೇಜರ್ ಪ್ರಿಯಾಂಕಾ ಬಾಲಿ, “ಸೇನಾ ಸಿಬ್ಬಂದಿಯ ಪತ್ನಿಯಾಗುವುದು ಹಲವಾರು ಸವಾಲುಗಳೊಂದಿಗೆ ಇರುತ್ತದೆ, ಮುಖ್ಯವಾಗಿ ವೃತ್ತಿಯ ಮುಂದುವರಿಕೆಯನ್ನು ಆಗಾಗ್ಗೆ ಮರು ವಿತರಣೆ ಮತ್ತು ಪರಿವರ್ತನೆಗಳ ಮೂಲಕ ನಿರ್ಮಿಸಿಕೊಳ್ಳ ಬೇಕಾಗುತ್ತದೆ.
ಅಮೆಜಾನ್ ನ ಅನುಕೂಲತೆ ಮತ್ತು ಬೆಂಬಲವು ನನಗೆ ಸ್ಥಿರ, ಸಂತೃಪ್ತಿಯ ವೃತ್ತಿ ನಿರ್ಮಿಸಿಕೊಳ್ಳಲು ಅಲ್ಲದೆ ಸೇನಾ ಸೇವೆಗೆ ನನ್ನ ಕುಟುಂಬದ ಗೌರವ ಮುಂದುವರಿಸಲು ಅವಕಾಶ ಕಲ್ಪಿಸಿತು. ಸೇನಾ ಪತ್ನಿಯರ ಸಮುದಾಯವನ್ನು ನಿಜಕ್ಕೂ ಅರ್ಥ ಮಾಡಿಕೊಳ್ಳುವ ಮತ್ತು ಮೌಲ್ಯ ನೀಡುವ ಕಂಪನಿಯ ಭಾಗವಾಗುವುದು ನಿಜಕ್ಕೂ ಸಂತೋಷವಾಗಿದೆ” ಎನ್ನುತ್ತಾರೆ.