ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Induction stove: ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಬೆಸ್ಕಾಂ ನೀಡಿರುವ ಈ ಸಲಹೆಗಳು ನೆನಪಿನಲ್ಲಿರಲಿ

Induction stove: ಎಲ್‌ಪಿಜಿಗಿಂತ ಸುರಕ್ಷಿತ ಹಾಗೂ ಕಡಿಮೆ ಖರ್ಚು ಹಿನ್ನೆಲೆಯಲ್ಲಿ ಇಂಡಕ್ಷನ್‌ ಸ್ಟವ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇರಾನ್‌-ಇಸ್ರೇಲ್‌ ಯುದ್ಧ ಹಿನ್ನೆಲೆ ಎಲ್‌ಪಿಜಿ ಗ್ಯಾಸ್‌ ಕೊರತೆಯಾಗಿರುವುದರಿಂದ ಇಂಡಕ್ಷನ್‌ ಸ್ಟವ್‌ಗಳ ಬಳಕೆಗೆ ಜನರು ಮುಂದಾಗಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಕೆಲ ಸಲಹೆಗಳನ್ನು ನೀಡಿದೆ.

ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಬೆಸ್ಕಾಂನ ಸಲಹೆಗಳು ನೆನಪಿನಲ್ಲಿರಲಿ

ಇಂಡಕ್ಷನ್‌ ಸ್ಟವ್ -

Prabhakara R
Prabhakara R Apr 3, 2026 10:47 PM

ಬೆಂಗಳೂರು: ಇರಾನ್‌-ಇಸ್ರೇಲ್‌ ಯುದ್ಧದ ಪರಿಣಾಮದಿಂದ ಭಾರತದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿ ಜನರು ಪರದಾಡುವಂತಾಗಿದೆ. ಇದರಿಂದ ಇಂಡಕ್ಷನ್‌ ಸ್ಟವ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ವಿದ್ಯುತ್‌ನಿಂದ ಕಾರ್ಯನಿರ್ವಹಿಸುವ ಈ ಉಪಕರಣವನ್ನು ಖರೀದಿ ಮತ್ತು ಬಳಸುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸಾರ್ವಜನಿಕರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದೆ.

ಹೊಸ ಇಂಡಕ್ಷನ್ ಸ್ಟವ್ ಖರೀದಿ ವೇಳೆ ಈ ಅಂಶಗಳು ನೆನಪಿನಲ್ಲಿರಲಿ:

  • ಐಎಸ್‌ಐ ಪ್ರಮಾಣಿತ ಹಾಗೂ ಉತ್ತಮ ವಿದ್ಯುತ್ ದಕ್ಷತೆಯುಳ್ಳ (3 ಸ್ಟಾರ್ ಅಥವಾ ಹೆಚ್ಚಿನ ರೇಟಿಂಗ್) ಇಂಡಕ್ಷನ್ ಸ್ಟವ್ ಖರೀದಿಸಿ
  • ಆಟೋಮ್ಯಾಟಿಕ್ ಆಫ್ ಹಾಗೂ ಚೈಲ್ಡ್ ಲಾಕ್ ಸೌಲಭ್ಯ ಇರುವ ಇಂಡಕ್ಷನ್ ಸ್ಟವ್ ಖರೀದಿಸಿ
  • ಇಂಡಕ್ಷನ್ ಸ್ಟವ್ ಬಳಸಲು ಪ್ರತ್ಯೇಕ (15A ಅಥವಾ ಹೆಚ್ಚಿನ ಲೋಡ್) ಸಾಕೆಟ್ ಅಳವಡಿಸಿ
  • ಮನೆಯ ವೈರಿಂಗ್ ದೋಷಪೂರಿತವಾಗಿದ್ದಲ್ಲಿ ಅಥವಾ ಸಮರ್ಪಕ ಅರ್ಥಿಂಗ್ ವ್ಯವಸ್ಥೆ ಇಲ್ಲದಿದ್ದಲ್ಲಿ, ಇಂಡಕ್ಷನ್ ಸ್ಟವ್ ಬಳಸದಿರಿ
  • 3-ಪಿನ್ ಪ್ಲಗ್ ಇರುವ ಇಂಡಕ್ಷನ್ ಸ್ಟವ್‌ಗಳನ್ನೇ ಖರೀದಿಸಿ
  • ವಿದ್ಯುತ್‌ ಸಂಬಂಧಿತ ಅವಘಡಗಳು ಸಂಭವಿಸಿದ್ದಲ್ಲಿ, ಕೂಡಲೇ ಬೆಸ್ಕಾಂ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ



ತಂತಿಬೇಲಿಗಳಿಗೆ ವಿದ್ಯುತ್ ಹಾಯಿಸಬೇಡಿ, ಇದು ಕಾನೂನುಬಾಹಿರ ಹಾಗೂ ಮಾರಣಾಂತಿಕ

ಬೆಂಗಳೂರು: ತಂತಿ ಬೇಲಿಗೆ ವಿದ್ಯುತ್ ಹಾಯಿಸುವ ಪ್ರಯತ್ನ ಕಂಡುಬಂದಲ್ಲಿ ಅಥವಾ ಯಾವುದೇ ವಿದ್ಯುತ್‌ ಅವಘಡಗಳು ಸಂಭವಿಸಿದ್ದಲ್ಲಿ ಕೂಡಲೇ ಬೆಸ್ಕಾಂ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ ಎಂದು ಬೆಸ್ಕಾಂ ಮನವಿ ಮಾಡಿದೆ.

ಕಾಡುಪ್ರಾಣಿಗಳ ಉಪಟಳ ತಡೆಯುವ ಉದ್ದೇಶದಿಂದ ತೋಟ ಅಥವಾ ಹೊಲದ ತಂತಿ ಬೇಲಿಗಳಿಗೆ ವಿದ್ಯುತ್ ಹಾಯಿಸುವ ಪ್ರಯತ್ನ ಕಾನೂನುಬಾಹಿರ. ಅಂತಹ ಪ್ರಯತ್ನಗಳಿಂದ ಜನ ಹಾಗೂ ವನ್ಯಜೀವಿಗಳ ಪ್ರಾಣಕ್ಕೂ ಸಂಚಕಾರ. ಇಂತಹ ಪ್ರಯತ್ನ ನಡೆಸುವವರ ವಿರುದ್ಧ ಭಾರತೀಯ ವಿದ್ಯುತ್ ಕಾಯ್ದೆ- 2003ರ ಅಡಿಯಲ್ಲಿ ಬೆಸ್ಕಾಂ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದೆ.

Auto LPG shortage: ಬೆಂಗಳೂರಿನಲ್ಲಿ ಎಲ್‌ಪಿಜಿಗೆ ಹಾಹಾಕಾರ; ಬಂಕ್‌ಗಳ ಮುಂದೆ ಕಿ.ಮೀ.ಗಟ್ಟಲೇ ಆಟೋಗಳ ಕ್ಯೂ!

ತಂತಿ ಬೇಲಿಗೆ ವಿದ್ಯುತ್ ಹಾಯಿಸುವ ಪ್ರಯತ್ನ ಕಂಡುಬಂದಲ್ಲಿ ಅಥವಾ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸಿದ್ದಲ್ಲಿ ಕೂಡಲೇ ಬೆಸ್ಕಾಂ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ ಎಂದು ಬೆಸ್ಕಾಂ ತಿಳಿಸಿದೆ.