Bengaluru Toll Hike: ಬೆಂಗಳೂರು ವಾಹನ ಸವಾರರಿಗೆ ಬೆಲೆ ಏರಿಕೆ ಶಾಕ್; ನೈಸ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ದರ ಭಾರಿ ಹೆಚ್ಚಳ!
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಟೋಲ್ ದರ ಏರಿಕೆಯಿಂದ ಪ್ರತಿದಿನ ಈ ಮಾರ್ಗಗಳಲ್ಲಿ ಸಂಚರಿಸುವ ಐಟಿ ಉದ್ಯೋಗಿಗಳು, ಖಾಸಗಿ ವಾಹನ ಸವಾರರು ಹಾಗೂ ವಾಣಿಜ್ಯ ವಾಹನಗಳ ಮಾಲೀಕರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ಇದಕ್ಕೆ ಸಾರ್ವಜನಿಕರಿಂದ ಅಸಮಾಧಾನವೂ ವ್ಯಕ್ತವಾಗುತ್ತಿದೆ.
-
Prabhakara R
Jul 1, 2026 6:44 PM
ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (NICE), ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯ ವಿವಿಧ ಹಂತಗಳ ಟೋಲ್ ದರವನ್ನು ಪರಿಷ್ಕರಿಸಿದೆ. ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರೆಗಿನ ಸಂಪೂರ್ಣ ಪೆರಿಫೆರಲ್ ರಸ್ತೆಯಲ್ಲಿ ಚಲಿಸುವ ಕಾರುಗಳಿಗೆ ಸೆಕ್ಷನ್ ವಾರು ನಿಗದಿಪಡಿಸಲಾದ ದರ ಪಟ್ಟಿ ಇಲ್ಲಿದೆ.
ನೈಸ್ ರಸ್ತೆಯಲ್ಲಿ ಕಾರುಗಳ ಪರಿಷ್ಕೃತ ಟೋಲ್ ದರ:
- ಹೊಸೂರು ರಸ್ತೆ – ಬನ್ನೇರುಘಟ್ಟ ರಸ್ತೆ: 72 ರೂ.
- ಬನ್ನೇರುಘಟ್ಟ ರಸ್ತೆ – ಕನಕಪುರ ರಸ್ತೆ: 53 ರೂ.
- ಕನಕಪುರ ರಸ್ತೆ – ಕ್ಲೋವರ್‌ಲೀಫ್ ಜಂಕ್ಷನ್: 39 ರೂ.
- ಕ್ಲೋವರ್‌ಲೀಫ್ ಜಂಕ್ಷನ್ – ಮೈಸೂರು ರಸ್ತೆ: 36 ರೂ.
- ಮೈಸೂರು ರಸ್ತೆ – ಮಾಗಡಿ ರಸ್ತೆ: 77 ರೂ.
- ಮಾಗಡಿ ರಸ್ತೆ – ತುಮಕೂರು ರಸ್ತೆ: 61 ರೂ.
- ಲಿಂಕ್ ರಸ್ತೆ (Link Road): 83 ರೂ.
ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಹೊಸ ದರ:
ಬೆಂಗಳೂರು ಎಲಿವೇಟೆಡ್ ಟೋಲ್ವೇ ಪ್ರೈವೇಟ್ ಲಿಮಿಟೆಡ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾರ್ಗಸೂಚಿಗಳ ಅನ್ವಯ ಮಾರ್ಚ್ 31, 2026 ರ ಸಗಟು ಬೆಲೆ ಸೂಚ್ಯಂಕವನ್ನು ಆಧರಿಸಿ ಟೋಲ್ ದರ ಹೆಚ್ಚಿಸಿದೆ. ಈ ದರಗಳು ಜೂನ್ 30, 2027 ರವರೆಗೆ ಜಾರಿಯಲ್ಲಿರಲಿವೆ. ಇನ್ಮುಂದೆ ಕಾರುಗಳು ಸಿಂಗಲ್ ಜರ್ನಿಗೆ 65 ರೂ. (ಹಿಂದಿನ ದರ 60 ರೂ.) ಹಾಗೂ ಮಲ್ಟಿಪಲ್ ಜರ್ನಿಗೆ 100 ರೂ. ಪಾವತಿಸಬೇಕು.
ಸಿಂಗಲ್ ಜರ್ನಿ
| ವಾಹನದ ವರ್ಗ | ಸಿಂಗಲ್ ಜರ್ನಿ | ಮಲ್ಟಿಪಲ್ ಜರ್ನಿ | ಮಾಸಿಕ ಪಾಸ್ |
|---|---|---|---|
| ದ್ವಿಚಕ್ರ ವಾಹನ (ಟೂ-ವೀಲರ್) | 25 ರೂ. | 40 ರೂ. | 785 ರೂ. |
| ಕಾರು / ಜೀಪ್ / ವ್ಯಾನ್ | 65 ರೂ. | 100 ರೂ. | 1,960 ರೂ. |
| ಲಘು ವಾಣಿಜ್ಯ ವಾಹನ / ಮಿನಿ ಬಸ್ | 90 ರೂ. | 135 ರೂ. | 2,745 ರೂ. |
| ಬಸ್ / ಟ್ರಕ್ | 185 ರೂ. | 275 ರೂ. | 5,495 ರೂ. |
| ಮಲ್ಟಿ-ಆಕ್ಸಲ್ ವಾಹನ (MAV) | 365 ರೂ. | 550 ರೂ. | 10,985 ರೂ. |
ಅತ್ತಿಬೆಲೆ ಟೋಲ್ ಪ್ಲಾಜಾ ಪರಿಷ್ಕೃತ ದರಗಳು:
ತಮಿಳುನಾಡು ಗಡಿಭಾಗಕ್ಕೆ ಸಂಪರ್ಕ ಕಲ್ಪಿಸುವ ಹೊಸೂರು ರಸ್ತೆಯ ಅತ್ತಿಬೆಲೆ ಟೋಲ್‌ನಲ್ಲೂ ದರ ಏರಿಕೆಯಾಗಿದೆ. ಆದರೆ, ಎಂದಿನಂತೆ ದ್ವಿಚಕ್ರ ವಾಹನಗಳಿಗೆ ಅತ್ತಿಬೆಲೆಯಲ್ಲಿ ಟೋಲ್ ವಿನಾಯಿತಿ ಮುಂದುವರಿದಿದೆ.
| ವಾಹನದ ವರ್ಗ | ಸಿಂಗಲ್ ಜರ್ನಿ | ಮಲ್ಟಿಪಲ್ ಜರ್ನಿ | ಮಂತ್ಲಿ ಪಾಸ್ |
|---|---|---|---|
| ಕಾರು / ಜೀಪ್ / ವ್ಯಾನ್ | 40 ರೂ. | 60 ರೂ. | 1,175 ರೂ. |
| ಲಘು ವಾಣಿಜ್ಯ ವಾಹನ / ಮಿನಿ ಬಸ್ | 65 ರೂ. | 100 ರೂ. | 1,960 ರೂ. |
| ಬಸ್ / ಟ್ರಕ್ | 130 ರೂ. | 195 ರೂ. | 3,925 ರೂ. |
| ಮಲ್ಟಿ-ಆಕ್ಸಲ್ ವಾಹನ (MAV) | 275 ರೂ. | 410 ರೂ. | 8,240 ರೂ. |